ಮಕ್ಕಳಿಗೆ ಉಚಿತ ಆರೋಗ್ಯ ಚಿಕಿತ್ಸಾ ಶಿಬಿರ

0
33

ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯ ವತಿಯಿಂದ ಸಂಸ್ಥೆಯ ಅಧ್ಯಕ್ಷರಾದ ಶಶೀಲ್ ಜಿ ನಮೋಶಿಯವರ ಹಾಗೂ ಉಪಾಧ್ಯಕ್ಷರಾದ ರಾಜಾ ಭೀ ಭೀಮಳ್ಳಿಯವರ ಹಾಗೂ ಆಡಳಿತ ಮಂಡಳಿಯವರ ಸಲಹೆಯ ಮೇರೆಗೆ ಆಸ್ಪತ್ರೆಯ ಚಿಕ್ಕ ಮಕ್ಕಳ ವಿಭಾಗದಿಂದ ನವಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಗೆ ಎರಡು ದಿನಗಳ ಕಾಲ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಮಕ್ಕಳಿಗೆ ಆಸ್ಪತ್ರೆಯ ವತಿಯಿಂದ ಉಚಿತ ಔಷಧಿಯನ್ನು ಒದಗಿಸಲಾಯಿತು.ಸುಮಾರು 215 ಕ್ಕಿಂತಲೂ ಹೆಚ್ಚು ಮಕ್ಕಳು ಈ ಶಿಬಿರದ ಲಾಭ ಪಡೆದುಕೊಂಡರು ನವಜ್ಯೋತಿ ಶಾಲೆಯ ಮಕ್ಕಳಲ್ಲದೆ ಬೇರೆ ಬೇರೆ ಶಾಲೆಯ ಸುಮಾರು 70 ಮಕ್ಕಳು ಈ ಶಿಬಿರದ ಲಾಭ ಪಡೆದುಕೊಂಡರು.

Contact Your\'s Advertisement; 9902492681

ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ ರೂಪಾ ಮಂಗಶೆಟ್ಟಿ ಅವರ ನೇತೃತ್ವದಲ್ಲಿ ಮಕ್ಕಳ ತಜ್ಞರಾದ ಡಾ ಬಸವರಾಜ ಎಂ ಪಾಟೀಲ್,ಡಾ ಶರಣಕುಮಾರ ಕೆ, ಡಾ ಕಿರಣ್ ಹೊಸಗೌಡ, ಡಾ ಶಿವಕುಮಾರ್ ಸಂಗೋಳಗಿ, ಡಾ ಅಪೂರ್ವ ಎ ಬಿ, ಡಾ ಮೀನಾಕ್ಷಿ ವಡ್ಡಣಕೇರಿ,ಡಾ ರುದ್ರಾಕ್ಷಿ ಅವರು ಮಕ್ಕಳಿಗೆ ಉಚಿತ ತಪಾಸಣೆಯೊಂದಿಗೆ ಸೂಕ್ತ ಸಲಹೆ ಚಿಕಿತ್ಸೆ ನೀಡಿದರು.

ಈ ಶಿಬಿರದಲ್ಲಿ ಬಸವೇಶ್ವರ ಆಸ್ಪತ್ರೆಯ ಸಂಯೋಜನಾಧಿಕಾರಿ ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಡಾ ಕಿರಣ್ ದೇಶಮುಖ್, ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ ಶರಣಗೌಡ ಪಾಟೀಲ್, ಉಪ ಡೀನ್ ಡಾ ವಿ ಎಸ್ ಕಪ್ಪಿಕೇರಿ, ಬಸವೇಶ್ವರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ ಶರಣಬಸಪ್ಪ ಎಂ ಆವಂತಿ ಶಿಬಿರದ ಸಂಯೋಜಕಿ ಪ್ರೀಯ ದರ್ಶನಿ ಟೆಂಗಳಿಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here