ದಲಿತರ ಮೇಲಿನ ದೌರ್ಜನ್ಯ ಸಹಿಸುವುದಿಲ್ಲ: ಲಿಂಗರಾಜ

0
25

ಕಲಬುರಗಿ: ರಾತ್ರಿ ಸಮಯ ಮನೆಯಲ್ಲಿ ಪತಿ-ಪತ್ನಿ ಚಿಕ್ಕ ಚಿಕ್ಕ ಮಕ್ಕಳ ಜೊತೆ ಮಲಗಿರುವಂತಹ ಸಮಯದಲ್ಲಿ ಹೇಡಿಗಳು ಮನೆಗಳಿಗೆ ಬೆಂಕಿ ಹಚ್ಚಿದಾಗ ಗಾಬರಿಯಿಂದ ನಿದ್ರೆಯಲ್ಲಿ ತಂದೆ ತಾಯಿಗಳು, ಹಿರಿಯರು, ಮಕ್ಕಳನ್ನು ಸುರಕ್ಷತೆಯಿಂದ ತಮ್ಮ ತಮ್ಮ ಕುಟುಂಬದವರನ್ನು ರಕ್ಷಿಸಿಕೊಂಡರು. ಇಂತಹ ಹೀನ ಕೃತ್ಯಕ್ಕೆ ಬಲಿಯಾಗಿರುವಂತಹ ನೂರಾರು ಕುಟುಂಬಗಳು ಮನೆಗಳು ಕಳೆದುಕೊಂಡು ಅವರ ಬದುಕು ಬೀದಿ ಪಾಲಾಗಿರುವುದನ್ನು ಮತ್ತು ಈ ರೀತಿ ದಲಿತರ ಮೇಲಿನ ದೌರ್ಜನ್ಯವನ್ನು ಡಿ.ಎಮ್.ಎಸ್.ಎಸ್. ಸಂಘಟನೆಯು ರಾಜ್ಯಾಧ್ಯಕ್ಷರಾದ ಲಿಂಗರಾಜ ತಾರಫೈಲ್ ಖಂಡಿಸಿದ್ದಾರೆ.

ಬಿಹಾರದ ನವಾಡ ಜಿಲ್ಲೆಯ ಮುಪ್ಪಸಿಲ್ಲ ಪೆÇಲೀಸ್ ಠಾಣೆಯ ವ್ಯಾಪ್ತಿಯ ಮಹಾದಲಿತ್ ಟೋಲಾದಲ್ಲಿ ಭೂವಿದಾದ ಹಿನ್ನಲೆಯಲ್ಲಿ ರಾಕ್ಷಸ ಪ್ರವೃತ್ತಿಗೆ ಸೇರಿದ ಗುಂಪೆÇಂದು ನೂರಾರು ದಲಿತ ಕುಟುಂಬ ವಾಸವಾಗಿರುವ ಮನೆಗಳಿಗೆ ಬೆಂಕಿಹಚ್ಚಿ ರಾತೋರಾತ್ರಿ ಪರಾರಿಯಾಗಿದ್ದಾರೆ.

Contact Your\'s Advertisement; 9902492681

ಕರ್ನಾಟಕ ರಾಜ್ಯದಲ್ಲಿಯೂ ದಿನಾಲು ದಲಿತ ಹೆಣ್ಣು ಮಕ್ಕಳ ಮೇಲೆ ನಿರಂತರವಾದ ದೌರ್ಜನ್ಯಗಳು ನಡೆಯುತ್ತಿವೆ. ಗಂಗಾವತಿಯಲ್ಲಿ ಅಂತರ ಜಾತಿ ಲಗ್ನವಾಗಿದಕ್ಕೆ ದಲಿತ ಸಮುದಾಯದ ಮರಿಯಮ್ಮ ಎಂಬ 20 ವರ್ಷದ ಯುವತಿಯನ್ನು ಅಂತರ ಜಾತಿ ಲಗ್ನವಾಗಿದ್ದಕ್ಕೆ ವಿಷ ಉಣಿಸಿ ಹತ್ಯೆ ಮಾಡಲಾಗಿದೆ ಹಾಗೂ ಭಾಗಿಲಕೋಟೆ ಜಿಲ್ಲೆಯಲ್ಲೂ ಸಹ ಭೂ-ವಿವಾದದ ಹಿನ್ನಲೆಯಲ್ಲಿ ದಲಿತ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ಮೇಲವರ್ಗದವರು ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ. ಇವುಗಳಿಗೆ ಸರಕಾರ ಕೂಡಲೇ ಕಡಿವಾಣ ಹಾಕಬೇಕು. ದಲಿತರ ಮೇಲಿನ ದೌರ್ಜನ್ಯವನ್ನು ಸಹಿಸುವುದಿಲ್ಲ ಎಂದು ಪತ್ರಿಕಾ ಪ್ರಕಟಣೆಯ ಮೂಲಕ ಎಚ್ಚರಿಸಿದ್ದಾರೆ.

ಈ ಹೀನ ಕೃತ್ಯವನ್ನು ಸಮಾಜದಲ್ಲಿರುವ ಮಾನವೀಯ ಗುಣವುಳ್ಳ ಎಲ್ಲಾ ಸಮುದಾಯಗಳ ಪ್ರಗತಿಪರ ವಿಚಾರವಂತರು, ಸಮಾಜ ಚಿಂತಕರು, ಮಹಿಳಾ ಪರ ಹೋರಾಟಗಾರರು ಇದನ್ನು ಖಂಡಿಸಲೇ ಬೇಕು. ಸುಮಾರು 10 ವರ್ಷಗಳಿಂದ ಅಲ್ಲಿಯೇ ವಾಸವಾಗಿರುವಂತಹ ದಲಿತರ ಮನೆಗಳಿಗೆ ಬೆಂಕಿ ಹಚ್ಚಿರುವ ಎಷ್ಟೇ ಬಲಿಷ್ಠರಾಗಿರಲಿ, ಯಾವುದೇ ರಾಜಕೀಯ ಪಕ್ಷಕ್ಕೇ ಸೇರಿದವರಾಗಲಿ, ಯಾವುದೇ ಧರ್ಮಕ್ಕೆ ಸೇರಿದವರಾಗಲಿ ಅಲ್ಲಿರುವಂತಹ ಸರ್ಕಾರ ಕಠಿಣ ಕ್ರಮ ಕೈಗೊಂಡು ಕೃತ್ಯವೆಸಗಿದ ವ್ಯಕ್ತಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿ ದಲಿತರಿಗೆ ನೂತನ ಮನೆಗಳನ್ನು ನಿರ್ಮಿಸಿ ಕೊಡಬೇಕು ಮತ್ತು ಮನೆಗಳು ಕಳೆದುಕೊಂಡು ಬೀದಿಗೆ ಬಂದಿರುವಂತಹ ಕುಟುಂಬಗಳಿಗೆ ಆಸರೆಗಾಗಿ ತಲಾ ಕುಟುಂಬಕ್ಕೆ 50 ಲಕ್ಷ ಮಂಜೂರಾತಿ ಗೋಷಿಸಬೇಕೆಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಜವಳಿ, ರಾಜ್ಯ ಮುಖಂಡರಾದ ದಿಗಂಬರ ತ್ರಿಮೂರ್ತಿ, ಮಲ್ಲಿಕಾರ್ಜುನ ದಿನ್ನಿ, ಜಿಲ್ಲಾ ಮುಖಂಡರಾದ ರೇವಣಸಿದ್ದ ಕಟ್ಟಿಮನಿ, ರವಿ ಬೆಳಮಗಿ, ಮಾರುತಿ ಮುಗಟ, ಮಲ್ಲಿಕಾರ್ಜುನ ಬಮ್ಮನಳ್ಳಿ ಪತ್ರಿಕಾ ಪ್ರಕಟಣೆಯ ಮೂಲಕ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here