ಕಲಬುರಗಿ: ಜಾತಿ ಹಾಗೂ ಮಹಿಳಾ ನಿಂದನೆ ಗಂಭೀರ ಸ್ವರೂಪದ್ದಾಗಿರುವಾಗಲೆ, ಹನಿಟ್ರ್ಯಾಪ್ ಜೀವ ವಿರೋಧಿ ಏಡ್ಸ್ ರೋಗಹರಡುವ ದುಷ್ಖೃತ್ಯದ ಆರೋಪದಲ್ಲಿ ಜೈಲು ಪಾಲದ ಶಾಸಕ ಮುನಿರತ್ನರವರ ಶಾಸನ ಸಭಾ ಸದಸ್ಯತ್ವ ಅಮಾನತುಗೊಳುಸಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸವಾದಿ) ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ಆಗ್ರಹಿಸಿದ್ದಾರೆ.
ಶಾಸಕ ಮುನಿರತ್ನ ಅವರನ್ನು ಶಾಸನ ಸಭಾ ಸ್ಥಾನಕ್ಕೆ ಮತ್ತು ಅವರು ಶಾಸಕನಾಗಿ ಮಾಡಿದ ಪ್ರತಿಜ್ಞೆಗೆ ತೀವ್ರ ಅಪಮಾನ ಉಂಟು ಮಾಡಿರುವುದನ್ನು ಸಂವಿಧಾನ ವಿರೋಧಿ ನಡೆಯನ್ನು ಎತ್ತಿ ತೋರುತ್ತಿದೆ. ಶಾಸನ ಸಭೆಯ ಘನತೆಯನ್ನು ಎತ್ತಿ ಹಿಡಿಯಲು ಈ ಕೂಡಲೆ ಅವರ ಶಾಸನ ಸಭಾ ಸ್ಥಾನವನ್ನು ಅಮಾನತಿನಲ್ಲಿಡಲು ಮತ್ತು ಅವರ ಮೇಲಿನ ಎಲ್ಲ ಪ್ರಕರಣಗಳನ್ನು ನ್ಯಾಯಾಂಗ ಸುಪರ್ಧಿಯ ತನಿಖೆಗೊಳಪಡಿಸಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಶಾಸನ ಸಭೆಯ ಘನತೆ ಎತ್ತಿ ಹಿಡಿಯಲು ಮುನಿರತ್ನರ ಅವರ ಶಾಸಕ ಸ್ಥಾನದಿಂದ ಅಮಾನತಿಗೆ ವಿಧಾನ ಸಭೆಯ ಅಧ್ಯಕ್ಷ ಮುಂದಾಗಬೇಕೆಂದು ಸಿಪಿಐಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಮತ್ತು ಕೆ ನೀಲಾ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.