ಕಲಬುರಗಿ: ಖಾಜಾ ಬಂದಾನವಾಜ ಅಲ್ಪಸಂಖ್ಯಾತ ಸೌಹಾರ್ದ ಸಹಕಾರ ಲಿಮಿಟೆಡನ 7ನೇ ವಾರ್ಷಿಕ ಸಾಮಾನ್ಯ ಸಭೆ ಶನಿವಾರ ಕೆಬಿಎನ್ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಕೆಬಿಎನ್ ವಿವಿಯ ಉಪ ಕುಲಪತಿ ಪ್ರೊ. ಅಲಿ ರಜಾ ಮೂಸ್ವಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿ ಕೆಬಿಎನ್ ಸೌಹಾರ್ದ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಗೌರವ ಅತಿಥಿಯಾಗಿ ಸೌಹಾರ್ದ ಕಛೇರಿಯ ನಿರ್ದೇಶಕರು ಶೈಲಜಾ ಮಾತನಾಡುತ್ತ, ಸೌಹಾರ್ದದ ಇತಿಹಾಸವನ್ನು ಸಂಕ್ಷಿಪ್ತವಾಗಿ ಹೇಳಿದರು.
ಅಲ್ಲದೇ ಸೌಹಾರ್ದ ಸಹಕಾರಿಗಳು ಬಡವರಿಗೆ, ರೈತರಿಗೆ ಮತ್ತು ಮಹಿಳೆಯರಿಗೆ ಹೇಗೆ ಸಹಾಯ ಮಾಡಬಲ್ಲವು ಎಂಬುದನ್ನು ಉದಾಹರಣೆ ಸಮೇತ ವಿವರಿಸಿದರು. ಅಲ್ಲದೇ ಕೆಬಿಎನ್ ಸೌಹಾರ್ದ ಸಹಕಾರಿಗೆ ಕೆಲವು ಸಲಹೆಗಳನ್ನು ನೀಡಿದರು.
ಮತ್ತೊರ್ವ ಗೌರವ ಅತಿಥಿ ಸೌಹಾರ್ದ ಕಛೇರಿಯ ವಿಭಾಗಿಯ ಅಭಿವೃದ್ಧಿ ಅಧಿಕಾರಿ ಸೂರ್ಯಕಾಂತ ಇವರು ಮಾತನಾಡುತ್ತ ಸೌಹಾರ್ದ ಸಹಕಾರಿಗಳು ಕಾರ್ಯನಿರ್ವಹಣೆ ಮಾಡುವ ಪರಿ ವಿಶೇಷವಾಗಿರುತ್ತದೆ. ಅಲ್ಲದೇ ಇಲ್ಲಿ ವ್ಯಯಕ್ತಿಕ ಪರಿಚಯ ನಿರ್ಮಾಣವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷರಾದ ಜನಾಬ ಸಯ್ಯದ ಮುಹಮ್ಮದ ಅಲಿ ಅಲ ಹುಸ್ಸೆನಿ ಇವರು ಸೌಹಾರ್ದ ನಡೆಯುತ್ತಿರುವುದು ಗ್ರಾಹಕರಿಂದ. ಸೌಹಾರ್ದ ತುಂಬಾ ಚೆನ್ನಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ. ಒಬ್ಬರು ಇನ್ನೊಬ್ಬರನ್ನು ಬೆಳೆಸಬೇಕು. ಕೆಬಿಎನ್ ಸೌಹಾರ್ದದಿಂದ ಬಹಳ ಜನರಿಗೆ ಅನುಕೂಲವಾಗಲಿ ಎನ್ನುವುದು ನಮ್ಮ ಉದ್ದೇಶ ಎಂದರು.
ಈ ವಾರ್ಷಿಕ ಸಭೆಯಲ್ಲಿ ಬಂಗಾರದ ಸಾಲದ ಬಗ್ಗೆ ಪ್ರಸ್ತಾಪ ಮಾಡಲಾಯಿತು. ಬಂಗಾರ ಸಾಲದ ಬಡ್ಡಿದರವನ್ನು ಮುಂಬರುವ ದಿನಗಳಲ್ಲಿ ಘೋಷಿಸಿಲಾಗುವುದು. ನಗರದ ಹಾಗರಗಾ ಕ್ರಾಸನಲ್ಲಿ ಇನ್ನೊಂದು ಶಾಖೆಯನ್ನು ಆರಂಭ ಮಾಡುವ ಕುರಿತು ಪ್ರಸ್ತಾಪಸಲಾಯಿತು.
ಕೆಬಿಎನ್ ಸೌಹಾರ್ದದ ಉಪಾಧ್ಯಕ್ಷ ಸಯ್ಯದ ಮೊಹಮ್ಮದ ಅಲಿ ಅಲ ಹುಸ್ಸೇನಿ ಯವರಿಗೆ ಅನೇಕ ಗ್ರಾಹಕರು ಸನ್ಮಾನ ಮಾಡಿದರು. ಕಾರ್ಯದರ್ಶಿ ಮೊಹಮ್ಮದ ಮೊಯಿನುದ್ದಿನ್ ವಾರ್ಷಿಕ ವರದಿಯನ್ನು ಓದಿದರು. ಸಭೆಯಲ್ಲಿ ಗ್ರಾಹಕರ ಪ್ರಶ್ನೆಗಳಿಗೆ ಕಾರ್ಯದರ್ಶಿ ಉತ್ತರಿಸಿದರು. ಪ್ರಖ್ಯಾತ ಸದಸ್ಯರು ಮತ್ತು ತ್ವರಿತ ಸಾಲ ಪಾವತಿದಾರರಿಗೆ ಸನ್ಮಾನ ಮಾಡಲಾಯಿತು.
ಅಬ್ದುಲ ನಬಿ ಖತೀಬ ಕಿರಾತ ಪ್ರಸ್ತುತ ಪಡಿಸಿದರು. ಮೊಹಮ್ಮದ ಮೈನುದ್ದಿನ ಸ್ವಾಗತಿಸಿ ನಿರೂಪಿಸಿದರು. ನಿರ್ದೇಶಕ ಜನಾಬ ಎಂ ಎ ಹಬೀಬ ವಂದಿಸಿದರು.
ಕೆಬಿಎನ್ ಇಂಜಿನಿಯರ ನಿಕಾಯದ ಡೀನ ಪ್ರೊ. ಆಜಾಮ, ಡಾ. ಮೊಯಿನುದ್ದಿನ ಸೌಹಾರ್ದ ನಿರ್ದೇಶಕರು, ಷೇರುದಾರರು, ಸದಸ್ಯರು ಮತ್ತು ಗ್ರಾಹಕರು ಈ ಸಭೆಯಲ್ಲಿ ಹಾಜರಿದ್ದರು.