ಕಲಬುರಗಿ: ನಗರದ ಮಾನಕರ್ ಲೇಔಟ್ನಲ್ಲಿರುವ ಶ್ರೀ ಹರಳಯ್ಯ ಭವನದಲ್ಲಿ ಜೇವರ್ಗಿ ತಾಲೂಕಿನ ಕಲಬುರಗಿ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ಅಡಿಯಲ್ಲಿ ಜೇವರ್ಗಿ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ 14ನೇ ವಾರ್ಷಿಕ ಮಹಾ ಸಭೆಯನ್ನು ಉದ್ದಿಮೆದಾರ ಶಿವಶರಣಪ್ಪ ಸಾಹು ಸಿರಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗಾಣಿಗ ನೌಕರರ ಸಂಘದ ಮಾಜಿ ಅಧ್ಯಕ್ಷ ಸಂಗಣಗೌಡ ಕಲ್ಲೂರ, ಜೇವರ್ಗಿ ತಾಲೂಕಿನ ಕಲಬುರಗಿ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ವಿಜಯಕುಮಾರ ದುಧಗಿ, ಜೇವರ್ಗಿ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ಅಧ್ಯಕ್ಷ ಬಸವರಾಜ ಜಿ.ಪಾಟೀಲ, ಉಪಾಧ್ಯಕ್ಷ ಬಸವರಾಜ ಎಂ.ಪಾಟೀಲ, ನಿರ್ದೆಶಕರಾದ ಮಲ್ಲಿಕಾರ್ಜುನ್ ಕೆ. ಪಾಟೀಲ್, ಪಿತಂಬರಾವ ಪಾಟೀಲ, ಅಮಲ್ಲಪ್ಪ ದೇಸಾಯಿ, ಶಾಂತಗೌಡ ಪಾಟೀಲ, ಹುಲಿಕಂಠರಾಯ ಎಸ್.ಎಮ್, ಹಣಮಂತಪ್ಪಾ ಬಿರಾಳ, ಶ್ರೀಪಾದ ಜೋಶಿ, ಭೀಮರಾಯ ಪೂಜಾರಿ ಮದರಿ, ನಿರ್ಮಲಾ ಸಿಕೇದ್, ಕೈಸರ್ ಜಹಾನ್ ಸಿರೀನ್ ಪಟೇಲ್, ತಾತಗೌಡ ಪಾಟೀಲ, ಅಶೋಕ ಹರವಾಳ ಹಾಗೂ ಸಿಬ್ಬಂದಿ ವರ್ಗದವರು ಇದ್ದರು. ನಂತರ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.