ವಿಶ್ವಕರ್ಮ ಸಮಾಜದ ಕುಶಲಕರ್ಮಿಗಳ ಕೊಡುಗ ಅಪಾರ

0
28

ಆಳಂದ: ಭಾರತೀಯ ಸಂಸ್ಕೃತಿಯು ಜಗತ್ತಿಗೆ ಪರಿಚಯಿಸುವಲ್ಲಿ ವಿಶ್ವಕರ್ಮ ಸಮಾಜದ ಕುಶಲಕರ್ಮಿಗಳು ನೀಡಿದ ಕೊಡುಗ ಅಪಾರವಾದದು ಎಂದು ಕಲಬುರಗಿಯ ವಿಶ್ವಕರ್ಮ ಮಠದ ಪೀಠಾಧಿಪತಿ ನಿರಂಜನ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದ ಎ.ವಿ.ಪಾಟೀಲ ಕಲ್ಯಾಣ ಮಂಟಪದಲ್ಲಿ ಭಾನುವಾರ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ತಾಲ್ಲೂಕು ಘಟಕದಿಂದ ಹಮ್ಮಿಕೊಂಡ ವಿಶ್ವಕರ್ಮ ಮಹೋತ್ಸವ ಹಾಗೂ ವಿಶ್ವಕರ್ಮ ಕಲಾಚೇತನ ಪಶಸ್ತಿ ಪುದಾನ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು.

Contact Your\'s Advertisement; 9902492681

ಬೇಲೂರು, ಹಳಬೀಡು, ಮೈಸೂರು ಅರಮನೆ ಸೇರಿದಂತೆ ಶಿಲ್ಪ, ವಾಸ್ತುಶಿಲ್ಪ ಹಾಗೂ ಕೆತ್ತನ ಹಾಗೂ ಮುತ್ತುರತ್ನ, ಚಿನ್ನ ಬೆಳ್ಳಿ ಅಲಂಕಾರಿಕ ಸಾಮಗ್ರಿಗಳ ಕುಶುರಿ ಕೆಲಸದಲ್ಲಿ ವಿಶ್ವಕರ್ಮರ ನೈಪುಣ್ಯತೆಗಳಿಗೆ ಯಾರೂ ಸಾಟಿ ಆಗಲಾರರು, ಇಂತಹ ಕುಶಲಕರ್ಮಿಗಳಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳು ಸಂಘಟನ ಕೊರತೆಯಿಂದ ದೊರೆಯುತ್ತಿಲ್ಲ ಎಂದರು.

ಕೆಎಂಎಫ್ ಅಧ್ಯಕ್ಷ ಆರ್ ಕೆ ಪಾಟೀಲ ಮಾತನಾಡಿ ವಿಶ್ವಕರ್ಮರು ರೈತಮಿತ್ರರಾಗಿ ಕೃಷಿ ಸಾಮಾಗ್ರಿಗಳ ತಯಾರಿಸುವ ಜತೆಗೆ ನಮ್ಮ ದೇವಸ್ಥಾನ, ಆಚರಣೆಗಳ ಸೌಂದರ್ಯ ಹೆಚ್ಚಿಸುವರು. ಸಮಾಜದ ಬೇಡಿಕೆಯಾದ ಸಮುದಾಯ ಭವನ ನಿರ್ಮಾಣ ಹಾಗೂ ಸರ್ಕಾರದ ಸೌಲಭ್ಯ ಒದುಗಿಸುವಲ್ಲಿ ಅಗತ್ಯ ಕಾಳಜಿವಹಿಸುದಾಗಿ ತಿಳಿಸಿದರು.

ಮಾಜಿ ಶಾಸಕ ಸುಭಾಷ ಗುತ್ತೇದಾರ ಮಾತನಾಡಿ ವಿಶ್ವಕರ್ಮ ಸಮಾಜವು ಇತರ ಸಮಾಜದವರ ಜೊತೆಗೆ ಸಾಮರಸ್ಯದಿಂದ ಬದುಕುವರು, ಅಯೋದ್ಯಯ ರಾಮನ ಮೂರ್ತಿ ಕತ್ತನಗೈದವರು ನಮ್ಮ ಮೈಸೂರಿನ ಅರುಣ ಯೋಗಿರಾಜರು ವಿಶ್ವಕರ್ಮರಾಗಿದ್ದು, ಇಂತಹ ಹಲವು ಕುಶಲಕರ್ಮಿಗಳು ನಮ್ಮ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.

ಉಪನ್ಯಾಸಕ ರಾಜಕುಮಾರ ಬಡಿಗೇರ ಮಾತನಾಡಿ ತಾಲ್ಲೂಕಿನ ವಿಶ್ವಕರ್ಮರು ಅಲ್ಪಸಂಖ್ಯಾತರಾಗಿದ್ದು, ರಾಜಕೀಯವಾಗಿ ಸಮಾಜಕ್ಕೆ ಶಕ್ತಿ ತುಂಬಬೇಕು, ಶೈಕ್ಷಣಿಕ ಹಾಗೂ ಉದ್ಯೋಗದಲ್ಲಿ ಸಮಾಜದ ಪ್ರಗತಿಗೆ ಒಳಮೀಸಲಾತಿಗಾಗಿ ಹೋರಾಡಬೇಕಿದೆ ಎಂದರು.

ಮಾಜಿ ಶಾಸಕ ಸುಭಾಷ್‌ ಗುತ್ತೇದಾರ ಮಾತನಾಡಿ ವಿಶ್ವಕರ್ಮ ಸಮಾಜವು ಇತರ ಸಮಾಜದವರ ಜೊತೆಗೆ ಸಾಮರಸ್ಯದಿಂದ ಬದುಕುವರು, ಅಯೋದ್ಯಯ ರಾಮನ ಮೂರ್ತಿ ಕತ್ತನ,ದವರು ನಮ್ಮ ಮೈಸೂರಿನ ಅರುಣ ಯೋಗಿರಾಜರು ವಿಶ್ವಕರ್ಮರಾಗಿದ್ದು, ಇಂತಹ ಹಲವು ಕುಶಲಕರ್ಮಿಗಳು ನಮ್ಮ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.

ಉಪನ್ಯಾಸಕ ರಾಜಕುಮಾರ ಬಡಿಗೇರ ಮಾತನಾಡಿ ತಾಲ್ಲೂಕಿನ ವಿಶ್ವಕರ್ಮರು ಅಲ್ಪಸಂಖ್ಯಾತರಾಗಿದ್ದು, ರಾಜಕೀಯವಾಗಿ ಸಮಾಜಕ್ಕೆ ಶಕ್ತಿ ತುಂಬಬೇಕು, ಶೈಕ್ಷಣಿಕ ಹಾಗೂ ಉದ್ಯೋಗದಲ್ಲಿ ಸಮಾಜದ ವುಗತಿಗೆ ಒಳಮೀಸಲಾತಿಗಾಗಿ ಹೋರಾಡಬೇಕಿದೆ ಎಂದರು.

ಸುಲೇವೇಟದ ದೊಡೇಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸಿದರು. ತಾಲ್ಲೂಕಾಧ್ಯಕ್ಷ ಬಸವರಾಜ ಕ ಪಂಚಾಳ, ಜಿಲ್ಲಾಧ್ಯಕ್ಷ ಕಮಲಾಕ‌ ವಿಶ್ವಕರ್ಮ, ಉಪನ್ಯಾಸಕ ಮೊನ್ನಪ್ಪ ಸುತಾರ ಮಾತನಾಡಿದರು. ವುಮುಖರಾದ ವಿಶ್ವನಾಥ ಸುತಾರ ಅಧ್ಯಕ್ಷತೆವಹಿಸಿದರು.ಮಾರುತಿ ಕಮ್ಮಾರ, ಚಂದ್ರಶೇಖರ ಪತ್ತಾರ, ಪ್ರಾಣೇಶ ಬಡಿಗೇರ, ಮಹಾದೇವ ವೂದ್ವಾರ, ರಘುವೀರ ಸೋನಾರ, ಶ್ರೀದೇವಿ ಫೂಸ್ಕಾರ, ಚಿತ್ರಕಲಾ ವೂದ್ವಾರ, ಶಿವಲೀಲಾ ಸುತಾರ, ಚಂದ್ರಶೇಖರ ಸುತಾರ, ಗಂಗಾಧರ ವೂದ್ಮಾರ ಉಪಸ್ಥಿತರಿದರು.

ಇದೇ ಸಂದರ್ಭದಲ್ಲಿ ಸಮಾಜದ ಕುಶಲಕರ್ಮಿಗಳಾದ ಚಂದ್ರಶೇಖರ ಸುತಾರ, ರಾಜೇಂದ್ರ ಪೊದ್ದಾರ, ವಿನೋಧ ವೊದ್ದಾರ, ಮಹಾದೇವ ಕಂಬಾರ, ರಾಮಚಂದ್ರ ಪೂದ್ಮಾರ ಅವರಿಗೆ ಕಲಾಚೇತನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ರಾಮಣ್ಣಾ ಸುತಾರ ನಿರೂಪಿಸಿದರೆ, ವಿರೇಶ ವೊದ್ಯಾರ ಸ್ವಾಗತಿಸಿದರು. ಸಂತೋಷ ವೇದಪಾಠಕ ವಂದಿಸಿದರು.

ಈ ಮೊದಲು ಪಟ್ಟಣದ ಕಾಳಿಕಾದೇವಿ ದೇವಸ್ಥಾನದಿಂದ ಪಟ್ಟಣದ ಮುಖ್ಯ ಬೀದಿಗಳಲ್ಲಿ ಕಾಳಕಾದೇವಿ ಹಾಗೂ ವಿಶ್ವಕರ್ಮರ ಭಾವಚಿತ್ರದ ಮೆರವಣಿಗೆಯು ಅದ್ಧೂರಿಯಾಗಿ ಕೈಗೊಳ್ಳಲಾಯಿತು. ಶ್ರೀರಾಮ ಮಾರುಕಟ್ಟೆ, ಬಸ್ ನಿಲ್ದಾಣ ಮಾರ್ಗವಾಗಿ ಸಾಗಿ ಬಂತು. ಡೊಳ್ಳು,ಕುಣಿತ,ವಿವಿಧ ಕಲಾತಂಡಗಳ ನೃತ್ಯ ಹಾಗೂ ವಿವಿಧ ವಾದ್ಯಗಳ ಸಡಗರವು ಉತ್ಸವಕ್ಕೆ ಮೆರಗು ನೀಡಿತು. ತಾಲ್ಲೂಕಿನ ವಿವಿಧ ಗ್ರಾಮದಿಂದ ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here