ಭಾರತದ ಬಹುತ್ವ ಕಾಪಾಡುವುದು ಮುಖ್ಯ: ಡಾ. ಕನ್ಹಯ್ಯ ಕುಮಾರ

0
502

ಕಲಬುರಗಿ: ಭಾರತದ ಬಹುತ್ವ ಕಾಪಾಡುವುದಕ್ಕಾಗಿ ತಳಮಟ್ಟದ ಹೋರಾಟ ಅಗತ್ಯ ಎಂದು ಡಾ. ಕನ್ಹಯ್ಯ ಕುಮಾರ ಪ್ರತಿಪಾದಿಸಿದವರು.

ಕಲಬುರಗಿಯ ಶ್ರೀನಿವಾಸ ಗುಡಿ ಮೆಮೋರಿಯಲ್ ಟ್ರಸ್ಟ್ ಹಾಗೂ ಸಂವಿಧಾನಪರ ಸಂಘಟನೆಗಳ ಒಕ್ಕೂಟ ಇಂದು ನಗರದಲ್ಲಿ ಆಯೋಜಿಸಿದ್ದ ಸಂವಿಧಾನ ರಕ್ಷಣೆ ಯುವ ಜನತೆಯ ಹೊಣೆ ಉಪನ್ಯಾಸ ಕಾರ್ಯಕ್ರಮಕ್ಕೂ ಮುನ್ನ e-medialine ನೊಂದಿಗೆ ಮಾತನಾಡಿದ ಅವರು, ಇಂದು ದೇಶದ ಯುವಕರು, ಮಹಿಳೆಯರು ಭಯ ಮತ್ತು ನಿರುದ್ಯೋಗಿಗಳಾಗಿದ್ದು, ಇದರಿಂದ ಪಾರು ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ ಎಂದರು.

Contact Your\'s Advertisement; 9902492681
                                                      ಶಿವರಂಜನ್ ಸತ್ಯಂಪೇಟೆ ವಿಥ್ ಡಾ. ಕನ್ಹಯ್ಯ ಕುಮಾರ

ಇಲ್ಲಿನ ಗುಲ್ಬರ್ಗ ವಿವಿ ಮತ್ತು ವಿಶ್ವೇಶ್ವರಯ್ಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ರದ್ದಾಗಿರುವುದು ನನಗೇನು ಹೊಸತಲ್ಲ. ಇವೆಲ್ಲ ಮಾಮೂಲಿ.

ಇಂತಹ ಮನುವಾದಿ ಮತ್ತು ಪಟ್ಟಭದ್ರರ ವಿರುದ್ಧ ನಿರಂತರ ಸಂಘರ್ಷ ಮತ್ತು ಹೋರಾಟ ಇರಲೇಬೇಕು. ಕಾರ್ಯಕ್ರಮ ರದ್ದು ಮಾಡಲು ಅವರು (ನಮ್ಮ ವಿಚಾರಗಳ ಎದುರಾಳಿಗಳು) ನಿರಂತರ ಯೋಜನೆ, ಯೋಚನೆಯಲ್ಲಿರುತ್ತಾರೆ. ಹಾಗೆಯೇ ಭಾರತದ ಬಹುತ್ವ ಉಳಿಸಲು ಸಹ ಪ್ರಜಾಪ್ರಭುತ್ವವಾದಿಗಳ ಸಹ ನಿರಂತರವಾಗಿ ಹೋರಾಟ ಮಾಡಲೇಬೇಕು ಎಂದು ವಿವರಿಸಿದರು.

ಸಂವಿಧಾನದ ರಕ್ಷಣೆ ಮಾಡುವ ನಮಗೆ ರಕ್ಷಣೆ ಸಿಗುತ್ತಿಲ್ಲ. ನಾವಂತೂ ಬಹುತ್ವ, ರಾಷ್ಟ್ರೀಯತೆ ಕುರಿತು ಮಾತನಾಡುತ್ತೇವೆ ಹೊರತು ದೇಶದ್ರೋಹದ ಯಾವುದೇ ಮಾತುಗಳನ್ನು ಆಡುತ್ತಿಲ್ಲ. ಇದಕ್ಕೆ ಅವಕಾಶ ಇಲ್ಲ ಎಂದ ಮೇಲೆ ನಮ್ಮ ದೇಶದ ಸ್ಥಿತಿ ಎತ್ತ ಸಾಗಿದೆ ನೀವೆ ಯೋಚಿಸಿ ಎಂದು ನಮ್ಮನ್ನೇ ಪ್ರಶ್ನಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here