ಬೆಂಗಳೂರು; 2029ರ ವೇಳೆಗೆ ರಾಜ್ಯದಲ್ಲಿ 500 ಹೊಸ ಜಾಗತಿಕ ಸಾಮಥ್ರ್ಯ ಕೇಂದ್ರಗಳು (ಜಿಸಿಸಿ) ಸ್ಥಾಪಿಸಿ, 50 ಬಿಲಿಯನ್ ಡಾಲರ್ ಆರ್ಥಿಕತೆ ಉತ್ಪಾದನೆ ಗುರಿ ಹೊಂದಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ ಖರ್ಗೆ ತಿಳಿಸಿದರು.
ಅವರು ಇಂದು ನಗರದ ಖಾಸಗಿ ಹೋಟೆಲ್‍ನಲ್ಲಿ (2024-29)ರ ಜಾಗತಿಕ ಸಾಮಥ್ರ್ಯ ಕೇಂದ್ರ ನೀತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಲು ಸ್ಥಳೀಯ ನಾವೀನ್ಯತೆ ಪರಿಸರ ವ್ಯವಸ್ಥೆಯೊಂದಿಗೆ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಕರ್ನಾಟಕವನ್ನು ಜಾಗತಿಕ ನಾಯಕನಾಗಿಮಾಡಲು ಈ ನೀತಿ ವಿನ್ಯಾಸಗೊಳಿಸಲಾಗಿದೆ ಎಂದರು.
ಬೆಂಗಳೂರು ಮತ್ತು ನಗರದ ಹೊರವಲಯದ ಮೂರು ಹೊಸ ಟೆಕ್‍ಪಾರ್ಕ್‍ಗಳ ಸ್ಥಾಪನೆ ಮಾಡಲಾಗುವುದು, ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗಾಗಿ 100 ಕೋಟಿ ಆವಿಷ್ಕಾರ ನಿಧಿ ಸ್ಥಾಪಿಸಲಾಗುವುದು.
ಇನ್ನೊವೇಶರ್ ಬಿಯಾಂಡ್ ಬೆಂಗಳೂರು ಪ್ಯಾಕೇಜ್ ಅಡಿ ನೇಮಕಾತಿ ನೆರವು, ಬಾಡಿಗೆ, ಬೆಂಬಲ ಮುಂತಾದ ಪ್ರೋತ್ಸಾಹ ನೀಡಲಾಗುತ್ತದೆ. ಸರ್ಕಾರದ ಅನುಮೋದನೆ ಮತ್ತು ಸರ್ಕಾರದ ಸಮನ್ವಯವನ್ನು ಸುವ್ಯವಸ್ಥಿತಗೊಳಿಸಲು ಏಕ ಸಂಪರ್ಕದಿಂದ ರಚಿಸಲಾಗುವುದೆಂದರು.
ಬೆಂಗಳೂರು ಕ್ಲಸ್ಟರ್ ಆಚೆಗೆ ನ್ಯಾನೋ ಜಿಸಿಸಿಗಳ ಸ್ಥಾಪಿಸಿ ಒಂದು ಲಕ್ಷ ಇಂಟರ್ನ್‍ಶಿಫ್‍ಗಳನ್ನು ನಡೆಸಲಾಗುವುದು. ಉದ್ಯಮ ಸಂಶೋಧನೆ ಮತ್ತು ಮಧ್ಯಸ್ಥಗಾರರ ಸಮಾಲೋಚನೆ ಮೂಲಕ ರಚಿಸಲಾದ ಈ ನೀತಿಯನ್ನು ತಜ್ಞರು ಮತ್ತು ಉದ್ಯಮದ ಮುಖಂಡರೊಂದಿಗೆ 500ಕ್ಕೂ ಹೆಚ್ಚು ಚರ್ಚೆ, ಅಭಿಪ್ರಾಯದೊಂದಿಗೆ ಸಿದ್ಧಪಡಿಸಲಾಗಿದೆ ದೇಶದ ಶೇ.30ರಷ್ಟು ಜಿಸಿಸಿ ಮತ್ತು ಶೇ.35ರಷ್ಟು ಉದ್ಯೋಗಿಗಳಿಗೆ ಬೆಂಗಳೂರು ನೆಲೆಯಾಗಿದೆ.
ಇದರಿಂದ 3.5 ಲಕ್ಷ ಉದ್ಯೋಗಗಳನ್ನು ಸೃಷ್ಠೀಸಬಹುದಾಗಿದೆ. ರಾಜ್ಯ 2030 ರ ವೇಳೆಗೆ ವಿಶ್ವದ ಅಗ್ರ ಫೋಬ್ರ್ಸ 2000 ಉದ್ಯಮಗಳಲ್ಲಿ ಶೇ 15 ರಷ್ಟರಲ್ಲಿ ಅಂದರೆ ಸುಮಾರು 330ರಲ್ಲಿ ಅತಿಥ್ಯ ನಡೆಸಲದೆ. ನೀತಿ ಆಯೋಗದ ಭಾರತದ ಆವಿಷ್ಕಾರ ಸೂಚ್ಯಂಕ 2021ರಲ್ಲಿ ಮೊದಲ ಸ್ಥಾನ ಪಡೆದಿದೆ, ಮುಂದಿನ ದಶಕದಲ್ಲಿ ರಾಜ್ಯದಲ್ಲಿ ಜಿಸಿಸಿ ವಲಯ ಶೇ.12-14 ರಷ್ಟು ವಾರ್ಷಿಕ ಬೆಳವಣಿಗೆ ಕಂಡು 2029ರ ವೇಳೆಗೆ ರಾಷ್ಟ್ರೀಯ ಜಿಸಿಸಿ ಮಾರುಕಟ್ಟೆ ಪಾಲನ್ನು ರಾಜ್ಯವು ಶೇ.50ರಷ್ಟುನ್ನು ಹೊಂದುವ ನಿರೀಕ್ಷೆಯಿದೆ, ನಾವಿನ್ಯತೆಯನ್ನು ಉತ್ತೇಜಿಸುವ ಆರ್.ಡಿ ಬೆಂಬಲಿಸುವ ಉನ್ನತ ಪ್ರತಿಭೆಗಳನ್ನು ಘೋಷಿಸುವ ವ್ಯವಸ್ಥೆಯನ್ನು ನಾವು ಕಲ್ಪಿಸಬೇಕು ಎಂದರು.
ಕೌಶಲ್ಯ ಅಭಿವೃದ್ಧಿಗೆ ಸಹ ಈ ನೀತಿಯಲ್ಲಿ ಆದ್ಯತೆ ನೀಡಲಾಗಿದ್ದು ‘ನಿಪುಣ ಕರ್ನಾಟಕ’À ಕ್ರಾರ್ಯಕ್ರಮದಡಿ ಸರ್ಕಾರ ಖಾಸಗಿ ವಲಯದ ಕಂಪನಿಗಳ ಜೊತೆಗೆ ಸಹಭಾಗಿತ್ವ ನಡೆಸಲಿದೆ, ಸ್ಥಳೀಯ ಪ್ರತಿಭೆಗಳನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿ ಪ್ರೋತ್ಸಾಹಿಸಿವುದು ಸಹ ನಮ್ಮ ಉದ್ದೇಶ. ರಿಯಲ್ ಎಸ್ಟೇಟ್ ಉದ್ದೆಮೆಯನ್ನು ಸಹ ಸೆಳೆಯುವ ಪ್ರಯತ್ನವಿದೆ. ಕರ್ನಾಟಕವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಎಲ್ಲಾ ರೀತಿಯ ಪ್ರಯತ್ನಗಳು ನಡೆಯುತ್ತಿವೆ ಎಂದವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಐಟಿ-ಬಿಟಿ ಎಲೆಕ್ಟ್ರಾನಿಕ್ಸ್ ಇಲಾಖೆ ಕಾರ್ಯದರ್ಶಿಗಳಾದ ಡಾ.ಏಕ್‍ರೂಪ್ ಕೌರ್, ಉಪಕಾರ್ಯದರ್ಶಿಗಳಾದ ರುಚಿ ಬಿಂದಾಲ್, ಕಿಯೋನಿಕ್ಸ್ ಅಧ್ಯಕ್ಷರಾದ ಶರತ್ ಬಚ್ಚೇಗೌಡ ಹಾಗೂ ಇನ್ನಿತರು ಗಣ್ಯರು ಉಪಸ್ಥಿತರಿದ್ದರು