ಸಂಧ್ಯಾ ಹೊನಗುಂಟಿಕರ್ ಅವರ ಹೆಸರು ಕಳೆದುಕೊಂಡ‌ ಊರು ಕಥಾ ಸಂಕಲನ ಬಿಡುಗಡೆ

0
40

ಕಲಬುರಗಿ: ಈ ಕಥಾ ಸಂಕಲವನ್ನು ಓದಿದರೆ ಮಾತು ಬಾರದ ಮೌನ ಆವರಿಸುತ್ತದೆ. ಉತ್ತರ ಕರ್ನಾಟಕದ ಜನ ಮತ್ತೆ ಮತ್ತೆ ಬರೆದು ಬೆಂಗಳೂರು- ಮೈಸೂರು ಭಾಗದ ಜನರಿಗೆ ಸವಾಲೊಡ್ಡುವ ಕೆಲಸ ಮಾಡಬೇಕು ಎಂದು ಚಿತ್ರನಟಿ ಜಯಲಕ್ಷ್ಮಿ ಪಾಟೀಲ ಹೇಳಿದರು.

ನಗರದ. ಕನ್ನಡ ಭವನದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಬೆಂಗಳೂರಿನ ಬಹುರೂಪಿ ವತಿಯಿಂದ ಪ್ರಕಟವಾಗಿರುವ ಸಂಧ್ಯಾ ಹೊನಗುಂಟಿಕರ್ ಅವರ ಹೆಸರು ಕಳೆದುಕೊಂಡ‌ ಊರು ಕಥಾ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಲೇಖಕರು ನಿರಾಸೆರಾಗಬಾರದು. ಸಂಧ್ಯಾ ಹೊನಗುಂಟಿಕರ್ ಅವರ ಕಥೆಗಳು ಕಲ್ಯಾಣ ಕರ್ನಾಟಕದ ಪ್ರಾತಿನಿಧಿಕ ಕತೆಗಳಂತಿವೆ ಎಂದು ಹೇಳಿದರು.

Contact Your\'s Advertisement; 9902492681

ಕೃತಿ ಕುರಿತು ಮಾತನಾಡಿದ ಪತ್ರಕರ್ತೆ ರಶ್ಮಿ ಎಸ್ ಮಾತನಾಡಿ, ಕೊರೊನಾ ಕಾಲದ ನಂತರ ಬದಲಾದ ನಮ್ಮ ಮನೋವ್ಯಾಪಾರ ದ ಮಧ್ಯೆ ಮನಸಾಕ್ಷಿ, ಮನಸ್ಸಿನ ತುಮಲಗಳು ಇಲ್ಲಿನ 11 ಕಥೆಗಳಲ್ಲಿ ಕಂಡು ಬರುತ್ತವೆ ಎಂದು ತಿಳಿಸಿದರು.

ಕೋವಿಡ್ ನಂತಹ ದುರಿತ ಕಾಲದ ನಂತರ ಉದ್ಯೋಗ, ಹೊಟ್ಟೆ, ಮರ್ಯಾದೆ,‌ ಮಾನ ಇವೆಲ್ಲ ತಳಮಳಗಳು ಇಲ್ಲಿ ಕಂಡು ಬರುತ್ತವೆ. ನಮ್ಮನ್ನು ನಾವು ಕಳೆದುಕೊಳ್ಳುವ, ಹುಡುಕುವ ಸೂಕ್ಷ್ಮ ಸಂವೇದನಾಶೀಲತೆ ಅಡಗಿದೆ. ಜೀವನದ ಸರ್ವ ಮುಖಗಳು ಈ ಕಥೆಗಳಲ್ಲಿ ಸಿಗುತ್ತವೆ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ಪತ್ರಕರ್ತ ಜಿ.ಎನ್. ಮೋಹನ, ಪುಸ್ತಕ ಪ್ರಕಟ ಮಾಡುವುದು ಬೆಳ್ಳೊಳ್ಳಿ ಕಬಾಬ್ ಅಲ್ಲ.‌ ಅದಕ್ಕೆ ಅನೇಕ ರೀತಿಯ ಸ್ಪರ್ಶ ಅಗತ್ಯವಾಗಿದೆ ಎಂದರು.

ಸಂಧ್ಯಾ ಹೊನಗುಂಟಿಕರ್ ಅವರು ಎರೆ ಹುಳುವಿನ ರೀತಿಯಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.

ಇದೇ ವೇಳೆಯಲ್ಲಿ ಸಂಧ್ಯಾ ಹೊಗುಂಟಿಕರ್ ಅವರು ತಮಗೆ ಕಲಿಸಿದ ಎಸ್.ಬಿ. ಪಾಟೀಲ, ಎಚ್.ಎನ್ ಹಬೀಬ್ ಅವರಿಗೆ ಗುರು ವಂದನೆ ಸಲ್ಲಿಸಿದರು.

ಹಿರಿಯ ಸಾಹಿತಿ ಅಪ್ಪಾರಾವ ಅಕ್ಕೋಣಿ, ಕತೆಗಾರ ಚಿತ್ರಶೇಖರ ಕಂಠಿ ವೇದಿಕೆಯಲ್ಲಿದ್ದರು. ಡಾ.‌ ಸದಾನಂದ ಪೆರ್ಲ್ ನಿರೂಪಿಸಿದರು. ಪ್ರಭಾಕರ ಜೋಶಿ ಸ್ವಾಗತಿಸಿದರು. ಕತೆಗಾರ್ತಿ ಸಂಧ್ಯಾ ಹೊನಗುಂಟಿಕರ್ ಮಾತನಾಡಿದರು.

ನಾನು ಮಾಡಿದ ಎಲ್ಲ ಕೆಲಸಗಳಲ್ಲಿ ಕಲ್ಯಾಣ ಕರ್ನಾಟಕ ಆದ್ಯತೆಯಾಗಿರುತ್ತದೆ.‌ ಅದರಲ್ಲೂ ಕಲಬುರಗಿ ಆಗಿರುತ್ತದೆ. ಕಲಬುರಗಿ ನನಗೆ ಹೊಸ ಕಣ್ಣೋಟವನ್ನು ಕೊಟ್ಟಿದೆ. -ಜಿ.ಎನ್.‌ಮೋಹನ, ಬೆಂಗಳೂರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here