ಖಮೀತಕರ್ ಭವನದಲ್ಲಿ ಪಂಚಗವ್ಯ ಆಧಾರಿತ ಉಚಿತ ತಪಾಸಣಾ ಶಿಬಿರ 30ರಂದು

0
30

ಕಲಬುರಗಿ: ವಿಶ್ವ ಹಿಂದೂ ಪರಿಷತ್, ಕಲಬುರಗಿ ಮಹಾನಗರ, ಗೋರಕ್ಷಾ ವಿಭಾಗ ವತಿಯಿಂದ ಸೆ.30.ರಂದು ಬೆಳಿಗ್ಗೆ 10.ರಿಂದ ಸಂಜೆ 5ರ ವರೆಗೆ ಹೊಸ ಜೇವರ್ಗಿ ರಸ್ತೆಯ ಖಮೀತಕರ್ ಭವನದಲ್ಲಿ ಪಂಚಗವ್ಯ ಆಧಾರಿತ ಉಚಿತ ತಪಾಸಣಾ ಶಿಬಿರ ಜರುಗಲಿದೆ.

ಅಂದು ಮಧುಮೇಹ, ರಕ್ತದೊತ್ತಡ, ಕೀಲುನೋವು, ಪಾಶ್ರ್ವವಾಯು, ಸಂತಾನಹೀನತೆ, ಚರ್ಮರೋಗ, ಮಹಿಳೆಯರ ಸಮಸ್ಯೆ, ನರರೋಗ, ಬೊಜ್ಜು, ಕ್ಯಾನ್ಸರ, ಇತ್ಯಾದಿ ತೊಂದರೆಗಳಿಗೆ ಕಳೆದ 25 ವರ್ಷಗಳಿಂದ ಸುಧೀರ್ಘ ಅನುಭವ ಹೊಂದಿರುವ ಆಯುರ್ವೇದ ತಜ್ಞರಾದ ಡಾ. ಡಿ.ಪಿ. ರಮೇಶ ಬೆಂಗಳೂರು ಇವರು ಪರಿಣಾಮಕಾರಿಯಾಗಿ ಪಂಚಗವ್ಯ ಚಿಕಿತ್ಸೆ ಸಲಹೆಯನ್ನು ನೀಡಲಿದ್ದಾರೆ.

Contact Your\'s Advertisement; 9902492681

ಕೀವೊ ಥೇರಪಿ, ರೇಡಿಯೊ ಥೇರಪಿಯಿಂದ ಪರಿಣಾಮ ಬೀರದ ಸಾವಿರಾರು ಕ್ಯಾನ್ಸರ್ ರೋಗಿಗಳು ಈ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದಾರೆ, ಈ ಶಿಬಿರದ ಉಪಯೋಗವನ್ನು ಸಾರ್ವಜನಿಕರು. ಪಡೆಯಬೇಕೆ ಹಾಗೂ ಈ ಶಿಬಿರದಲ್ಲಿ ವೈದ್ಯರ ತಪಾಸಣೆ ಉಚಿತ ಔಷಧಿಗೆ ಮಾತ್ರ ಹಣ ಪಾವತಿಸುವುದು ಬರುವಾಗ ನಿಮ್ಮ ಹಳೆಯ ತಪಾಸಣಾ ಚೀಟಿಯನ್ನು ತರಬೇಕು ಎಂದು ವಿ.ಹಿಂ.ಪ. ಕರ್ನಾಟಕ ಉತ್ತರ ಗೋರಕ್ಷಾ ಪ್ರಾಂತ ಪ್ರಮುಖರಾದ ಮಾತರ್ಂಡ ಶಾಸ್ತ್ರಿ ಹಾಗೂ ವಿ.ಹಿಂ.ಪ. ಕಲಬುರಗಿ ಮಹಾನಗರದ ಅಧ್ಯಕ್ಷ ಶ್ರೀಮಂತ (ರಾಜು) ನವಲ್ಲಿ ಅವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here