ಸುರಪುರ: ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಅಂಗವಾಗಿ ನಗರದ ತಹಸಿಲ್ದಾರ್ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ್ದ ತಹಸಿಲ್ದಾರ್ ಹುಸೇನಸಾಬ್ ಮಾತನಾಡಿ,ಪ್ರತಿ ವರ್ಷದಂತೆ ಈ ವರ್ಷವೂ ಅಕ್ಟೋಬರ್ 17 ರಂದು ಶ್ರೀ ಮಹರ್ಷಿ ವಾಲ್ಮೀಕಿಯವರ ಜಯಂತಿಯನ್ನು ತಾಲೂಕ ಆಡಳಿತ ದಿಂದ ಆಚರಿಸಲಾಗುವುದು.ಬೆಳಿಗ್ಗೆ 8 ಗಂಟೆ ವೇಳೆಗೆ ತಾಲೂಕಿನ ಎಲ್ಲಾ ಶಾಲಾ,ಕಾಲೇಜು,ಸರಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಮಹರ್ಷಿ ವಾಲ್ಮೀಕಿಯವರ ಜಯಂತಿ ಆಚರಣೆ ಮಾಡಿ,ನಂತರ 10 ಗಂಟೆಗೆ ತಹಸಿಲ್ದಾರ್ ಕಚೇರಿ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಭಾಗವಹಿಸುವಂತೆ ತಿಳಿಸಿದರು.
ಬೆ:9 ಗಂಟೆಗೆ ಡೊಣ್ಣಿಗೇರಾದಲ್ಲಿನ ಶ್ರೀ ಮಹರ್ಷಿ ವಾಲ್ಮೀಕಿ ದೇವಸ್ಥಾನ ದಿಂದ ತಹಸಿಲ್ದಾರ್ ಕಚೇರಿ ವರೆಗೆ ಭಾವಚಿತ್ರದ ಮೆರವಣಿಗೆ ನಡೆಯಲಿದೆ,ನಂತರ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಮಾಜದ ಅನೇಕ ಮುಖಂಡರು ಮಾತನಾಡಿ,ಕಾರ್ಯಕ್ರಮದಲ್ಲಿ ಕ್ರೀಡೆ,ಕೃಷಿ,ಸಾಹಿತ್ಯ,ಸಮಾಜ ಸೇವೆಯಲ್ಲಿ ಸಾಧನೆ ಮಾಡಿದವರಿಗೆ ಹಾಗೂ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸುವಂತೆ ಮನವಿ ಮಾಡಿದರು.ಅಲ್ಲದೆ ಸುರಪುರ ನಗರ ಸೇರಿ ತಾಲೂಕಿನಾದ್ಯಂತ ಇರುವ ಎಲ್ಲಾ ಮಹರ್ಷಿ ವಾಲ್ಮೀಕಿ ವೃತ್ತಗಳಿಗೆ ದೀಪಾಲಂಕಾರ ಮಾಡಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಳೆದ ಒಂದುವರೆ ವರ್ಷ ದಿಂದ ನಗರದ ಹಳೆ ಬಸ್ ನಿಲ್ದಾಣದ ಬಳಿಯ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ವಾಲ್ಮೀಕಿ ಮೂರ್ತಿಯನ್ನು ಕೂಡಿಸದೆ ವಿಳಂಬ ಮಾಡಲಾಗಿದೆ.ಈಬಾರಿಯ ಜಯಂತಿ ಒಳಗಾಗಿ ಹೊಸ ಮೂರ್ತಿಯನ್ನು ಪ್ರತಿಷ್ಠಾಪಿಸುವಂತೆ ತಿಳಿಸಿದರು.ನಗರಸಭೆ ಪೌರಾಯುಕ್ತ ಜೀವನಕುಮಾರ ಅವರು,5 ಜನ ಮುಖಂಡರ ಸಮಿತಿ ರಚನೆ ಮಾಡಿ ಅವರ ಮಾರ್ಗದರ್ಶನ ದಂತೆ ನೂತನ ಮೂರ್ತಿಯನ್ನು ತಂದು ಪ್ರತಿಷ್ಠಾಪಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಾ.ಪಂ ಇಓ ಬಸವರಾಜ ಸಜ್ಜನ್,ಪಿ.ಐ ಆನಂದ ವಾಗಮೊಡೆ,ಸಮಾಜ ಕಲ್ಯಾಣಾಧಿಕಾರಿ ಮಹ್ಮದ್ ಸಲೀಂ ಉಪಸ್ಥಿತರಿದ್ದರು.ಸಭೆಯಲ್ಲಿ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಭೀಮನಗೌಡ ಲಕ್ಷ್ಮೀ ಹೆಮನೂರ,ರಾಜಾ ಪಿಡ್ಡ ನಾಯಕ,ಅಯ್ಯಣ್ಣ ಹಾಲಬಾವಿ, ಗಂಗಾಧರ ನಾಯಕ,ರಮೇಶ ದೊರೆ ಆಲ್ದಾಳ,ವೆಂಕಟೇಶ ಬೇಟೆಗಾರ,ಶಂಕರಗೌಡ ಕೋಳಿಹಾಳ,ಬಲಭೀಮ ನಾಯಕ ದೇವಾಪುರ,ಭೀಮು ನಾಯಕ ಮಲ್ಲಿಬಾವಿ,ನಾಗರಾಜ ನಾಯಕ,ಚಂದ್ರಶೇಖರ ನಾಯಕ ಬಿಚ್ಚಗತ್ತಿಕೇರಾ,ರಾಜಾ ಅಪ್ಪಾರಾವ್ ನಾಯಕ,ವಿಜಯಕುಮಾಚ ಚಿಟ್ಟಿ,ದತ್ತಾತ್ರೇಯ ಗುತ್ತೇದಾರ,ಕನಕಾಚಲ ನಾಯಕ,ಮೌನೇಶ ನಾಯಕ ಹಾಗೂ ಉಪ ಖಜಾನೆ ಅಧಿಕಾರಿ ಸಣ್ಣಕೆಪ್ಪ,ಬಿಸಿಎಮ್ ಅಧಿಕಾರಿ ತಿಪ್ಪಾರಡ್ಡಿ ಮಾಲಿಪಾಟೀಲ್,ಗ್ರಾ.ಕು.ನೀ.ಸರಬರಾಜ ಇಲಾಖೆ ಎಇಇ ಹಣಮಂತ್ರಾಯ ಪಾಟೀಲ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ವಾಲ್ಮೀಕಿ ನಾಯಕ ಸಮಾಜದ ಅನೇಕ ಮುಖಂಡರು ಭಾಗವಹಿಸಿದ್ದರು.