ಕಲಬುರಗಿ; ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಕಾಲಮಿತಿಯ ಅಭಿವೃದ್ಧಿಯ ವಿಷಯಗಳಿಗೆ ಸಂಬಂಧಿಸಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಡಾ.ಅಜಯ ಸಿಂಗ್ ರೊಂದಿಗೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ನೇತೃತ್ವದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಬಸವರಾಜ ದೇಶಮುಖ ಮತ್ತು ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರ ಮುಖಂಡತ್ವದಲ್ಲಿ ಕಲ್ಯಾಣದ ಪರಿಣಿತ ತಜ್ಘರ, ಚಿಂತಕರ ನಿಯೋಗ ಕೆಕೆ ಆರ್ ಡಿಬಿಯ ಅಧ್ಯಕ್ಷರ ನಿವಾಸದಲ್ಲಿ ಭೇಟಿ ಮಾಡಿ ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಸಂಬಂಧಿಸಿದ ಮಹತ್ವದ ವಿಷಯಗಳ ಬಗ್ಗೆ ಸಮಾಲೋಚನಾ ಸಭೆ ನಡೆಸಿ ವಿವರವಾದ ಪ್ರಸ್ತಾವನೆ ಸಲ್ಲಿಸಲಾಯಿತು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ದೂರ ದೃಷ್ಟಿಕೋನದ ಐದು ಇಲ್ಲವೆ ಹತ್ತು ವರ್ಷಗಳ ವೈಜ್ಞಾನಿಕ ಕ್ರಿಯಾ ಯೋಜನೆ ರೂಪಿಸಿ ಕಾಲಮಿತಿಯಲ್ಲಿ ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲು, ಮಂಡಳಿಯ ಅಡಿ ಮೇಲ್ವಿಚಾರಣಾ ಸಮಿತಿ, ಮೌಲ್ಯ ಮಾಪನ ಸಮಿತಿ, ಜಾಗ್ರತ ದಳ (ವಿಜಿಲೆನ್ಸ್ ಕಮೀಟಿ) ರಚಿಸಲು, ಉಪ ಸಮಿತಿಗಳಿಗೆ ಕಲ್ಯಾಣದ ಎಳು ಜಿಲ್ಲೆಗಳ ಪರಿಣಿತರನ್ನು ಪರಿಗಣಿಸಲು, ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಸಮಿತಿಯ ಪ್ರಸ್ತಾವನೆ ಸ್ವೀಕರಿಸಿ ಮಾತನಾಡಿದ ಅಜಯ್ ಸಿಂಗ್ ಅವರು ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿ ಬಗ್ಗೆ ಮತ್ತು ಕಲ್ಯಾಣದ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ತಾವು ವಿಶೇಷ ಆಸಕ್ತಿ ವಹಿಸಿದ್ದು ಇದಕ್ಕೆ ಸಂಬಂಧಿಸಿದಂತೆ ಸಮಿತಿ ಸಲ್ಲಿಸಿರುವ ಬೇಡಿಕೆಗಳ ಬಗ್ಗೆ ತಾವು ಗಂಭೀರವಾಗಿ ಪರಿಗಣಿಸಿ ಕಾಲಮಿತಿಯಲ್ಲಿ ಈಡೇರಿಸುವ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುವ ಬಗ್ಗೆ ಬಲವಾದ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪರಿಣಿತ ತಜ್ಘರಾದ ಮತ್ತು ಸಮಿತಿಯ ಮುಖಂಡರಾದ ಪ್ರೊ.ಆರ್.ಕೆ.ಹುಡಗಿ, ಪ್ರೊ.ಬಸವರಾಜ ಕುಮ್ಮನೂರ್, ಪ್ರೊ.ಬಸವರಾಜ ಗುಲಶೆಟ್ಟಿ, ಪ್ರೊ.ಶಂಕ್ರಪ್ಪ ಹತ್ತಿ, ಪ್ರೊ.ಗುರುಬಸಪ್ಪ, ಡಾ.ಗಾಂಧೀಜೀ ಮೊಳಕೇರಿ, ರೌಫ ಖಾದ್ರಿ, ಅಬ್ದುಲ್ ರಹೀಂ , ಎಮ್ ಬಿ ನಿಂಗಪ್ಪ, ಅಸ್ಲಂ ಚೌಂಗೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.