ದಸರಾ ಉತ್ಸವದಲ್ಲಿ ನಾಳೆ “ವಾಯ್ಸ್ ಆಫ್ ಸೇಡಂ”

0
131

ಸೇಡಂ; ಇಲ್ಲಿಯ ಐತಿಹಾಸಿಕ ಪಂಚಲಿಂಗೇಶ್ವರ ದೇವಾಲಯದಲ್ಲಿ 43 ನೇ ವರ್ಷದ ದಸರಾ ಉತ್ಸವದಲ್ಲಿ ಅ.11 ರಂದು ರಾತ್ರಿ 7.30 ಕ್ಕೆ `ವಾಯ್ಸ್ ಆಫ್ ಸೇಡಂ’ ಕಾರ್ಯಕ್ರಮ ನಡೆಯಲಿದೆ ಎಂದು ದೇವಾಲಯದ ಭಕ್ತ ಮಂಡಳಿ ಕಾರ್ಯದರ್ಶಿ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

ಗಾನ ಲೋಕದ ಪ್ರತಿಭಾನ್ವಿತರ ಈ ವಾಯ್ಸ್ ಆಫ್ ಸೇಡಂ ಸ್ಪರ್ಧೆಯಲ್ಲಿ ಅದ್ಭುತ ಗಾನ ಕೋಗಿಲೆಗಳು ಭಾಗವಹಿಸಲಿದ್ದು, ಚಾಂಪಿಯನ್ ಆಗಲು ಸೆಲೆಬ್ರಿಟಿ ರೀತಿ ಲೈವ್ ನಡೆಯಲಿದೆ. ಈ ಕಾರ್ಯಕ್ರಮವನ್ನು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಉದ್ಘಾಟಿಸುವರು. ಪುರಸಭೆ ಅಧ್ಯಕ್ಷ ವೀರೇಂದ್ರ ರುದ್ನೂರು ಮುಖ್ಯ ಅತಿಥಿಗಳಾಗಿರುವರು. ವಿನೋದ ಬಜಾಜ್ ಅಧ್ಯಕ್ಷತೆ ವಹಿಸುವರು.

Contact Your\'s Advertisement; 9902492681

ದೇವಾಲಯದ ಭಕ್ತ ಮಂಡಳಿ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ, ಉಪಾಧ್ಯಕ್ಷ ಸುಧಾಕರ ಕುಲಕರ್ಣಿ, ಸಂತೋಷ ಕುಲಕರ್ಣಿ, ಶಂಕರ ಬೋಳದ ಇತರರು ಭಾಗವಹಿಸುವರು ಎಂದು ಅವರು ತಿಳಿಸಿದ್ದಾರೆ.

ಅ. 12 ರಂದು ಸಂಜೆ 4ಕ್ಕೆ ಸೀಮೋಲ್ಲಂಘನ ಕಾರ್ಯಕ್ರಮವಿದ್ದು, ಅಂಬಾಭವಾನಿಯ ಮೂರ್ತಿಯ ಮೆರವಣಿಗೆಯು ಪಂಚಲಿಂಗೇಶ್ವರ ದೇವಾಲಯದಿಂದ ಚೌರಸ್ತಾ ಮೂಲಕ ಅಗ್ಗಿಕಟ್ಟಿ ಹಾಯ್ದು ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಪ್ರಾಂಗಣದಲ್ಲಿ ಸಮಾವೇಶವಾಗಲಿದೆ. ಅಲ್ಲಿರುವ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ, ಸಾಮೂಹಿಕ ಬನ್ನಿ ಮುಡಿಯುವ ಮೂಲಕ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ಪೂಜ್ಯರಾದ ಶ್ರೀ ಶಿವಶಂಕರ ಶಿವಾಚಾರ್ಯರು, ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು, ಶ್ರೀ ಸದಾಶಿವ ಸ್ವಾಮೀಜಿ ಭಾಗವಹಿಸುವರು ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here