ಕಲಬುರಗಿ; 8ನೇ ಜಿಲ್ಲಾ ಸಮ್ಮೇಳನ 14 ಹಾಗೂ 15 ಅಕ್ಟೋಬರ್ ರಂದು ನಗರದ ಜೇವರ್ಗಿ ಕ್ರಾಸ್ ನಲ್ಲಿರುವ ಶಮ್ಸ್ (ಜೆಕೆ) ಫಂಕ್ಷನ್ ಹಾಲನಲ್ಲಿ ನಡೆಯಲಿದೆ ಎಂದು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಭುದೇವ ಯಳಸಂಗಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಂIಖಿUಅ) 1920 ರಲ್ಲಿ ಜನ್ಮ ತಾಳಿ ದೇಶದ ದುಡಿಯುವ ವರ್ಗದ ಪ್ರಪ್ರಥಮ ಸಂಘಟನೆಯಾಗಿದೆ. ಎಐಟಿಯುಸಿ ಸಂಘಟನೆಯು ದುಡಿಯುವ ವರ್ಗವನ್ನು ಸಂಘಟಿಸಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದೆ.
ಅಲ್ಲದೇ ಬ್ರಿಟೀಷ ಸರಕಾರ ಹಾಗೂ ಭಾರತ ಸರಕಾರದ ವಿರುದ್ದ ಕಾರ್ಮಿಕರ ಹಕ್ಕುಗಳಿಗಾಗಿ ನಿರಂತರವಾಗಿ ಚಳುವಳಿ ಮಾಡಿರುವ ಹಿನ್ನಲೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಹಲವಾರು ಕಾರ್ಮಿಕ ಕಾನೂನುಗಳನ್ನು ರಚಿಸಿರುವುದು ತಮಗೆ ಈಗಾಗಲೇ ತಿಳಿದಿರುವ ವಿಷಯವಾಗಿದೆ.
ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಸಂವಿಧಾನದಂತೆ ಪ್ರತಿ ಮೂರು ವರ್ಷಕ್ಕೊಮ್ಮೆ ಜಿಲ್ಲೆ, ರಾಜ್ಯ, ಕೇಂದ್ರ ಸಮಿತಿಗಳ ಸಮ್ಮೇಳನ ನಡೆಸಿ, ದುಡಿಯುವ ವರ್ಗದ ಸಮಸ್ಯೆಗಳ ಕುರಿತು ಚರ್ಚಿಸಿ, ನಿರ್ಣಯ ಕೈಗೊಂಡು ಮುಂದಿನ ಹೋರಾಟಕ್ಕೆ ಸಿದ್ದತೆ ಮಾಡಬೇಕಿದೆ. ಹೀಗಾಗಿ ಎಐಟಿಯುಸಿ ಜಿಲ್ಲಾ ಸಮ್ಮೇಳನ ಆಯೋಜಿಸಲಾಗಿದೆ.ಕೇಂದ್ರ ಮತ್ತು ರಾಜ್ಯ ಸರಕಾರಗಳ ತಪ್ಪು ಆರ್ಥಿಕ ನೀತಿಗಳಿಂದಾಗಿ ಸರಕಾರಿ ರಂಗದ ಹಲವಾರೂ ಕೈಗಾರಿಕೆಗಳು, ಸಣ್ಣ ಕೈಗಾರಿಕೆಗಳು ಮುಚ್ಚಿ ಲಕ್ಷಾಂತರ ಕಾರ್ಮಿಕರು ಬೀದಿ ಪಾಲಾಗಿದ್ದಾರೆ.
ಅಲ್ಲದೆ ಹಲವಾರು ಕೈಗಾರಿಕೆಗಳು ಖಾಸಗಿ ಮಾಲಿಕರ ಪಾಲಾಗಿವೆ. ದೇಶದ ಬ್ಯಾಂಕ್, ವಿಮಾ ಕಂಪನಿಗಳು ವಿದೇಶಿ ಬ್ಯಾಂಕ್‌ಗಳೊಂದಿಗೆ ಅನಾರೋಗ್ಯಕರವಾದ ಸ್ಪರ್ಧೆ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳು ರಾಷ್ಟ್ರೀಯ ಮತ್ತು ಬಹುರಾಷ್ಟ್ರೀಯ ಕಂಪನಿಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುವ ಮೂಲಕ ಸ್ವದೇಶಿ ಹಾಗೂ ವಿದೇಶಿ ಬಂಡವಾಳಗಾರರಿಗೆ ಮಣಿ ಹಾಕಲಾಗುತ್ತಿದೆ. ಇದು ದೇಶದ ಸಂವಿಧಾನ ವಿರೋಧಿ ನಡೆಯಾಗಿದೆ.
ಈ ಸಮ್ಮೇಳನದ ಅಂಗವಾಗಿ ನಡೆಯುವ ರ‍್ಯಾಲಿಯನ್ನು 14 ರಂದು ಬೆಳಿಗ್ಗೆ 11 ಗಂಟೆಗೆ ಕನ್ನಡ ಭವನದ ಆವರಣದಲ್ಲಿ ವಿಧಾನ ಪರಿಷತ್ ಮಾಜಿ ಸಭಾಪತಿ ಶ್ರೀ ಡೇವಿಡ್ ಸಿಮೇಯೋನ್ ಚಾಲನೆ ನೀಡಲಿದ್ದಾರೆ. ಜಿಲ್ಲಾಧ್ಯಕ್ಷರಾದ ಎಚ್ ಎಸ್ ಪತಕಿ ಮಾತನಾಡುತ್ತ ಕನ್ನಡ ಭವನದಿಂದ ಪ್ರಾರಂಭವಾದ ರ‍್ಯಾಲಿ ಸರ್ಧಾರ್ ವಲ್ಲಭಬಾಯಿ ಪಟೇಲ್ ವೃತ್ತ, ಜೇವರ್ಗಿ ಕ್ರಾಸ್ ಮೂಲಕ ಮಧ್ಯಾಹ್ನ 1 ಗಂಟೆಗೆ ಶಮ್ಸ್ ಫಂಕ್ಷನ್ ಹಾಲ್‌ನಲ್ಲಿ ಈ ರ‍್ಯಾಲಿ ಸಮಾವೇಶಗೊಳ್ಳಲಿದೆ.
ಈ ಸಮ್ಮೇಳನದ ಅಂಗವಾಗಿ ಹೊಸತು ಪತ್ರಿಕೆಯ ಸಂಪಾದಕರು ಹಾಗೂ ಪ್ರಗತಿಪರ ಚಿಂತಕರಾದ ಡಾ. ಸಿದ್ದನಗೌಡ ಪಾಟೀಲ ರವರು ಧ್ವಜಾರೋಹಣ ನೆರವರಿಸಲಿದ್ದು, ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ್ ಡಿ.ಎ ರವರು ಸಮ್ಮೇಳನ ಉದ್ಘಾಟನೆ ಮಾಡಲಿದ್ದಾರೆ.
15 ರಂದು ಶಮ್ಸ್ ಫಂಕ್ಷನ್ ಹಾಲ್‌ನಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯುವ ಪ್ರತಿನಿಧಿ ಸಮ್ಮೇಳನದಲ್ಲಿ ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ್ ಡಿ.ಎ ರವರು ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನಾ ವರದಿ ಮಂಡಿಸಲಿದ್ದಾರೆ. ತದನಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವರದಿ ಮಂಡಿಸಲಿದ್ದು, ಸದರಿ ವರದಿ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿ ಹಾಗೂ ದುಡಿಯುವ ವರ್ಗದ ಹಲವಾರು ಸಮಸ್ಯೆಗಳ ಕುರಿತು ಚರ್ಚಿಸಿ ನಿರ್ಣಯ ಅಂಗೀಕರಿಸಲಾಗುವದು
ಈ ಸಮ್ಮೇಳದಲ್ಲಿ ಕಲಬುರಗಿ ಜಿಲ್ಲೆಯ ಸಾರಿಗೆ ನೌಕರರು, ಅಂಗನವಾಡಿ, ಬಿಸಿಊಟ, ಆಶಾ ಕಾರ್ಯಕರ್ತೆಯರು, ಕಟ್ಟಡ ಕಾರ್ಮಿಕರು, ಕಲ್ಲು ಗಣಿ ಕಾರ್ಮಿಕರು, ಸಿಮೆಂಟ ಕೈಗಾರಿಕೆಯ ಕಾರ್ಮಿಕರು, ಆಟೋ ರಿಕ್ಷಾ ಕಾರ್ಮಿಕರು, ಟೇಲರ‍್ಸ್ ಕಾರ್ಮಿಕರು, ಉಗಾರ್ ಶುಗರ್ ಸೆಕ್ಯೂರಿಟಿ ಗಾರ್ಡ ಕಾರ್ಮಿಕರು ಹೀಗೆ ವಿವಿಧ ಕ್ಷೇತ್ರಗಳ ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರು, ಬುದ್ದಿ ಜೀವಿಗಳು, ಜನಪರ ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ರ‍್ಯಾಲಿ ಹಾಗೂ ಬಹಿರಂಗ ಸಭೆಯಲ್ಲಿ ಭಾಗವಹಿಸಬೇಕೆಂದು ಎಐಟಿಯುಸಿ ಕಲಬರಗಿ ಜಿಲ್ಲಾ ಸಮಿತಿ ವತಿಯಿಂದ ವಿನಂತಿಸುತ್ತೆವೆ. ಪತ್ರಿಕಾಗೋಷ್ಠಿಯಲ್ಲಿ ಖಜಾಂಚಿಯಾದ ಸಿದ್ದಪ್ಪ ಪಾಲ್ಕಿ,ಜಿಲ್ಲಾ ಕಾರ್ಯದರ್ಶಿಗಳಾದ ನ್ಯಾಯವಾದಿ
ಹಣಮಂತರಾಯ ಅಟ್ಟೂರ,ಶಿವಲಿಂಗಮ್ಮ ಲೇಂಗಟಿಕರ, ಚಿತ್ತಾಪೂರ ಮತ್ತು ಶಹಾಬಾದ, ಅಧ್ಯಕ್ಷರಾದ ವಿಶಾಲ ನಂದೂರಕರ್ ಉಪಸ್ಥಿತರಿದ್ದರು