ಪಿಯುಸಿ ಪ್ರಾಯೋಗಿಕ ಪರೀಕ್ಷೆ ಸುತ್ತೋಲೆ ವಾಪಸ್; ಸಚಿವರ ಕ್ರಮಕ್ಕೆ ನಮೋಶಿ ಸ್ವಾಗತ

0
67

ಕಲಬುರಗಿ: ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಸುತ್ತೋಲೆ ವಾಪಸ್ ಶಿಕ್ಷಣ ಸಚಿವರ ಕ್ರಮಕ್ಕೆ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಸ್ವಾಗತಿಸಿ ಶಿಕ್ಷಣ ಸಚಿವರಿಗೆ ಅಭಿನಂದನೆ ವ್ಯಕ್ತಪಡಿಸಿದ್ದಾರೆ.

2025 ನೇ ಸಾಲಿನ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಯಾದೃಚ್ಛಿಕರಿಸುವ (Randamise)  ಬಗ್ಗೆ ಅಗತ್ಯ ಕ್ರಮ  ಕೈಗೊಳ್ಳುವಂತೆ 1ಮತ್ತು 5 ರಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುತ್ತೋಲೆ ಹೊರಡಿಸಿತ್ತು.

Contact Your\'s Advertisement; 9902492681

ಈ ಸುತ್ತೋಲೆಗೆ ನಾನು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದೆ ನಂತರ ತಕ್ಷಣ 2 ರಂದೆ ಶಿಕ್ಷಣ ಸಚಿವರಿಗೆ ಪತ್ರ ಬರೆದು ಈ ಸುತ್ತೋಲೆಗಳೆನ್ನು ಹಿಂಪಡೆಯಬೇಕೆಂದು ಆಗ್ರಹ ವ್ಯಕ್ತಪಡಿಸಿದ್ದೆ.

ನಂತರ 8 ಮಂಗಳವಾರ ಬೆಂಗಳೂರಿನಲ್ಲಿ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ರವರನ್ನು ಖುದ್ದಾಗಿ ಭೇಟಿ ಮಾಡಿ ಈ ರೀತಿ ಸುತ್ತೋಲೆ ಹೋರಡಿಸಿದರೆ ವಿಧ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಕಾಲೇಜುಗಳಿಗೆ ಆಗುವ ತೊಂದರೆಯನ್ನು ವಿವರಿಸಿ ಇದನ್ನು ತಕ್ಷಣ ವಾಪಸ್ ಪಡೆಯುವಂತೆ ಆಗ್ರಹಿಸಿದರು.

ಅಂದು ನನ್ನ ವಿವರಣೆಯನ್ನು ಸಮಾಧಾನದಿಂದ ಆಲಿಸಿದ ಶಿಕ್ಷಣ ಸಚಿವರು ಸುತ್ತೋಲೆ ಯಿಂದ ಆಗುವ ಸಮಸ್ಯೆಯನ್ನು ಅರಿತು ಈಗ ಆ ಸುತ್ತೋಲೆ ಹಿಂಪಡೆಯಲು ಮಂಡಳಿಗೆ ಆದೇಶಿಸಿದ್ದಾರೆ.

ಅದರಂತೆ ಮಂಡಳಿ ಆದೇಶಿಸಿ ಈ ಹಿಂದೆ ನಡೆಯುವಂತೆ ಪ್ರಾಯೋಗಿಕ ಪರೀಕ್ಷೆಗೆ ನಡೆಯಲು ಕಾರಣಿ ಭೂತವಾಗಿರುವ ಶಿಕ್ಷಣ ಸಚಿವರಾದ ಕುಮಾರ ಬಂಗಾರಪ್ಪಗೆ ಅಭಿನಂದನೆ ವ್ಯಕ್ತಪಡಿಸಿ ಕೃತಜ್ಞೆತೆ ಸಲ್ಲಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here