ಕಲಬುರಗಿ: ರಾಜ್ಯದಲ್ಲಿರುವ ಇಮಾಮ್, ಮುಅಜ್ಜೀನ್’ಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರಕಾರಕ್ಕೆ ಕಲಬುರಗಿಯ ಇಮಾಮ್ & ಮುಅಜ್ಜೀನ್ ಸಂಘ ಒತ್ತಾಯಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಸೈಯ್ಯದ್ ಹುಸೇನ್ ರಜವಿ, ಇಮಾಮ್, ಮುಅಜ್ಜೀನ್’ಗಳು ವಕ್ಫ್ ಇಲಾಖೆಯಿಂದ ಕಡಿಮೆ ಗೌರವಧನದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಅವರ ಜೀವನೋಪಾಯಕ್ಕೆ ಬಹಳಷ್ಟು ತೊಂದರೆ ಅನುಭವಿಸುವಂತಾಗಿದೆ. ಹಾಗಾಗಿ ಗೌರವಧನ ಹೆಚ್ಚಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದ್ದಾರೆ.
ದೆಹಲಿಯಂತೆ ಇಮಾಮ್ ಗಳಿಗೆ ೧ ೮ ೦ ೦ ೦ & ಮುಅಜ್ಜೀನ್’ಗಳಿಗೆ ೧ ೪ ೦ ೦ ೦ ನೀಡಬೇಕು, ವಸತಿ ಯೋಜನೆಗಳಲ್ಲಿ ಭೂಮಿ ಹಂಚಿಕೆ, ಅರೋಗ್ಯ ಕಾರ್ಡ್ ವಿತರಣೆ, ಮಕ್ಕಳಿಗೆ ವಿಶೇಷ ವಿದ್ಯಾರ್ಥಿ ವೇತನ, ಇಮಾಮ್ & ಮುಅಜ್ಜೀಮ್ ಗಳ ನೇಮಕಾತಿ & ಪರಿಹಾರಕ್ಕಾಗಿ ಅವರ ಹಕ್ಕುಗಳನ್ನು ರಕ್ಷಿಸಲು ನಿಯಂತ್ರಣ ಸಮಿತಿ ರಚಿಸಿ ಕಾಯ್ದೆಯ ರಚನೆ ಯೂ ಮಾಡಬೇಕೆಂದು ಒತ್ತಡ ಹೇರಿದ್ದಾರೆ.
ಈ ಸಂದರ್ಭದಲ್ಲಿ ಜನತಾ ಪರಿವಾರ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಶಿರಾಜ್ ಶಹಾಬಾದಿ, ಶೇಖ್ ಸಲೀಂ ನಿಜಾಮಿ, ಸಿರಾಜ್ ಶಾಬ್ದಿ, ಖಾಲಿದ್ ಅಬ್ರಾರ್, ಅಜರ್ ಮುಬಾರಕ್ ಸೇರಿದಂತೆ ಇತರೆ ಇಮಾಮ್ & ಮುಅಜ್ಜೀನ್ ಗಳು ಇದ್ದರು.