ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ ಎಸ್ ಇರಾಣಿ ಪದವಿ ಕಾಲೇಜಿನಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ.ಎಸ್ ಇರಾಣಿ ಪದವಿ ಕಾಲೇಜು ಹಾಗೂ ಇತಿಹಾಸ ವಿಭಾಗದ ಸಂಯುಕ್ತ ಆಶ್ರಯದಲ್ಲಿ ನಡೆದ ನೈಸರ್ಗಿಕ ಇತಿಹಾಸ ವಿಷಯದ ಕುರಿತು ನಡೆದ ರಾಷ್ಟ್ರೀಯ ಸಮ್ಮೇಳನವನ್ನು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಕಾಲೇಜಿನ ಸಂಚಾಲಕ ನಾಗಣ್ಣ ಘಂಟಿ, ಅನಿಲಕುಮಾರ್ ಮರಗೋಳ, ಡಾ.ಕಿರಣ್ ದೇಶಮುಖ್ ಇವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ರಾಯಚೂರು ವಿಶ್ವವಿದ್ಯಾಲಯ ಕುಲಪತಿಗಳಾದ ಪೆÇ್ರೀ ಹರೀಶ್ ರಾಮಸ್ವಾಮಿ, ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳಾದ ಪೆÇ್ರೀ ದಯಾನಂದ ಅಗಸರ, ಶ್ರೀ ಸತ್ಯಸಾಯಿ ವಿಶ್ವವಿದ್ಯಾಲಯ ಕುಲಪತಿಗಳಾದ ಪೆÇ್ರೀ ಕೆ ಶ್ರೀಕಾಂತ್ ಮೂರ್ತಿ, ಬೆಂಗಳೂರು ಮಹಾರಾಣಿ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ವಿ ಅನುರಾಧ ದೆಹಲಿಯ ಜವಾಹರಲಾಲ್, ನೆಹರು ವಿಶ್ವವಿದ್ಯಾಲಯ ಡಾ ಸಂಗಮೇಶ ಹಾಗೂ ಕಾಲೇಜಿನ ಪ್ರಾಚಾರ್ಯರಾದ ಡಾ ರೋಹಿಣಿಕುಮಾರ ಹಿಳ್ಳಿ ಉಪಸ್ಥಿತರಿದ್ದರು.