ಕಲಬುರಗಿ: ಬಿಜಾಪುರ, ಯಾದಗಿರಿ, ಕಲಬುರಗಿ, ತುಮಕೂರು, ಚಿತ್ರದುರ್ಗಲ್ಲಿ ಮಜೀದ್ ಗಳು ಸರ್ಕಾರಕ್ಕೆ ಪತ್ರ ಬರೆದಿವೆ. ಮಜೀದ್ ಗಳು ಈ ಸರ್ಕಾರವನ್ನ ಹ್ಯಾಂಡಲ್ ಮಾಡ್ತಿವೆ ಎಂದು ವಿಧಾನ ಪರಿಷತ್ ವಿಪಕ್ಷನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಜೀದ್ ಗಳು ಸರ್ಕಾರ ಹ್ಯಾಂಡಲ್ ಮಾಡ್ತಿರುವ ಪರಿಸ್ಥಿತಿ ಇವರು ತಂದುಕೊಂಡಿದ್ದಾರೆ. ತಕ್ಷಣ ವಕ್ಫ್ ಬೋರ್ಡ್ ಅಬಾಲಿಸ್ ಮಾಡಬೇಕು. ಎಲ್ಲೇಲ್ಲಿ ಎಷ್ಟೆಷ್ಟು ಆಸ್ತಿ ಇದೆ ಅಂತಾ ವಕ್ಫ್ ಬೋರ್ಡ್ ಘೋಷಣೆ ಮಾಡಲಿ. ಹಿಂದೂ ಮಠಗಳು, ದೇವಸ್ಥಾನಗಳು ನಮ್ಮದೂ ಅಂತಾ ನೋಟಿಸ್ ಕೊಡ್ತಿದ್ದಾರೆ. ಈ ದೇಶ ಯಾರಪ್ಪನ ಆಸ್ತಿಯೂ ಅಲ್ಲ, ಇದು ಹಿಂದೂಸ್ತಾನ್. ಇದೇ ರೀತಿ ಮುಂದುವರೆದರೆ ಈ ದೇಶಕ್ಕೆ ಗಂಡಾಂತರ ಇದೆ ಎಂದು ಕಿಡಿಕಾರಿದರು.
ಇದೆ ವೇಳೆ ಒಳ ಮೀಸಲಾತಿಗೆ ಕ್ಯಾಬಿನೆಟ್ ನಲ್ಲಿ ನಿರ್ಮಾಣ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ಕಾಲಹರಣ ಮಾಡವ ಪ್ಲ್ಯಾನ್ ಇದು. ವರದಿ ಎಲ್ಲವೂ ರೆಡಿ ಇತ್ತು, ಆದ್ರೆ ಇವರು ಕಾಲಹರಣ ಮಾಡ್ತಿದ್ದಾರೆ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲೇ ಜಾರಿಗೆ ತರುತ್ತೇವೆ ಅಂತಾ ಅವರು ಪ್ರಾಣಾಳಿಯಲ್ಲೇ ಹೇಳಿದ್ರು, ಸರ್ಕಾರ ಬಂದು ಇಷ್ಟು ದಿನ ಆದರೂ ಇನ್ನು ಮಾಡ್ತಿಲ್ಲ. ಈ ಸರ್ಕಾರ, ಮೋಸ ವಂಚನೆಗೆ ಹೆಸರಾಗಿದೆ. ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.