ಭಕ್ತರಲ್ಲಿ ಆಧ್ಯಾತ್ಮ ಆರೋಗ್ಯ ಮತ್ತು ಧರ್ಮದ ಅರಿವು ಮೂಡಿಸುತ್ತಿರುವ ತೊಟ್ನಳ್ಳಿ ತ್ರೀಮೂರ್ತಿ ಶ್ರೀಗಳು

0
22

ಕಲಬುರಗಿ: ರಾಷ್ಟ್ರೀಯ ಆಯುರ್ವೇಧ ದಿನಾಚಾರಣೆ ನಿಮಿತ್ಯ ಆದ್ಯಾತ್ಮ ಮತ್ತು ಆಯುರ್ವೇದಕ್ಕೆ ಹೆಸರಾದ ಟೊಟ್ನಳ್ಳಿಯ ಶ್ರೀ ಮಹಾಂತೇಶ್ವರ ಮಠದ ಪೂಜ್ಯರಾದ ಶ್ರೀ ಷ.ಬ್ರ. ಡಾ.ತ್ರೀಮುರ್ತಿ ಶಿವಾಚಾರ್ಯರರಿಗೆ ಟೆಂಗಳಿ ಅಂಡಗಿ ಪ್ರತಿಷ್ಠಾನ ಅಧ್ಯಕ್ಷ ಶಿವರಾಜ ಅಂಡಗಿ ಪೂಜ್ಯರಿಗೆ ಸನ್ಮಾನಿಸಿ ಗೌರವಿಸಿ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ನಂತರ ಅವರು ಮಾತನಾಡುತ್ತಾ ಶ್ರೀಮಠದ ಪೂರ್ವ ಗುರುಗಳಾದ ಆಯುರ್ವೇದ ಕೇಸರಿ ಲಿಂ. ಗುರುಪಾದೇಶ್ವರ ಮಹಾಸ್ವಾಮಿಗಳು ಆಯುರ್ವೇದ ಚಿಕಿತ್ಸಾ ಪದ್ದತಿಯಲ್ಲಿ ಸಿದ್ದಹಸ್ತರು ಪೂಜ್ಯರ ಹಸ್ತದಿಂದ ಉಪಚಾರವನ್ನು ಪಡೆದು ಅನೇಕರು ವಾಸಿಯಾಗದ ರೋಗಗಳಿಂದ ಮುಕ್ತರಾಗಿ ಪುನರ್ಜನ್ಮವನ್ನು ಪಡೆದದ್ದು ಸುತ್ತಲಿನ ನೂರಾರು ಹಳ್ಳಿಗಳಲ್ಲಿ ಪ್ರಾತಃಸ್ಮರಣೀಯರು.

Contact Your\'s Advertisement; 9902492681

ಆಯುರ್ವೇದ ಜ್ಞಾನವನ್ನು ಪಡೆಯುವುದರ ಜೊತೆಗೆ ಪ್ರಸ್ತುತ್ರ ಶ್ರೀಮಠದ ಪೂಜ್ಯರಾದ ಶ್ರೀ ಷ.ಬ್ರ. ಡಾ. ತಿಮೂರ್ತಿ ಶಿವಾಚಾರ್ಯರು ಶ್ರೀ ಮಾಹಾಂತೇಶ್ವರ ಹಿರೇಮಠ ತೊಟ್ನಳ್ಳಿ ಸಂಗಾವಿ (ಎಮ್) ಅವರು ಹೋಮಿಯೋಪಥೀಕ್ ವೈದ್ಯಕೀಯ ಶಿಕ್ಷಣವನ್ನು ಧಾರವಾಡದ ಡಾ.ಬಿ.ಡಿ. ಜತ್ತಿ ಹೋಮಿಯೋಪಥಿಕ್ ಕಾಲೇಜಿನಲ್ಲಿ ವಿದ್ಯಾಬ್ಯಾಸ ಮುಗಿಸಿಕೊಂಡು ಗ್ರಾಮಕ್ಕೆ ಮರಳಿ ಶ್ರೀಮಠದ ಭಕ್ತರಿಗೆ ಆಧ್ಯಾತ್ಮದ, ಆರೋಗ್ಯದ ಮತ್ತು ಧರ್ಮದ ಜಾಗೃತಿಯ ಅರಿವನ್ನು ಮೂಡಿಸುವರ ಜೊತೆಗೆ ಅನೇಕ ದೀರ್ಘಕಾಲದ ರೋಗಗಳಿಗೆ ಹಲವು ಕ್ಲಿಷ್ಟ ಚರ್ಮರೋಗಗಳು ಅನೇಕ ಸ್ತ್ರೀರೋಗ ಹಾಗೂ ಉದರರೋಗಗಳಿಗೆ ಪೂಜ್ಯರು ನೀಡುವ ಉಪಚಾರ ಸುತ್ತರಿನ ಗ್ರಾಮಗಳಲ್ಲಿ ಹೆಸರುವಾಸಿಯಾಗಿದೆ ಎಂದು ಶಿವರಾಜ ಅಂಡಗಿ ಮಾತನಾಡಿದ್ದರು.

ಈ ಸನ್ಮಾನ ಸಮಾರಂಭದಲ್ಲಿ ಹಿರಿಯರಾದ ಮಲ್ಲಿನಾಥ ದೇಶಮುಖ, ವೀರಣ್ಣ ಪೊಲೀಸ ಪಾಟೀಲ ಮತ್ತು ಗುರುಪಾದಪ್ಪ ಅಣ್ಣೆಪಗೋಳ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here