ಕನ್ನಡ ನಮ್ಮ ಅಭಿಮಾನದ ಭಾಷೆಯಾಗಲಿ | ಕನ್ನಡ ಜಾಗೃತಿ ಜಾಥಾಕ್ಕೆ ಬಿ. ಫೌಜಿಯಾ ತರನ್ನುಮ್ ಚಾಲನೆ

0
230

ಕಲಬುರಗಿ: ಕನ್ನಡ ನಾಡು-ನುಡಿ, ನೆಲ-ಜಲವು ಶ್ರೀಮಂತಗೊಳ್ಳಬೇಕಾದರೆ, ನಮ್ಮ ಮಾತೃ ಭಾಷೆ ಅಭಿಮನದ ಭಾಷೆಯಾಗಿ ಮೆರೆಯಬೇಕು ಎಂದು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಹೇಳಿದರು.

ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ರಾಜ್ಯೋತ್ಸವದ ಕನ್ನಡ ಸಂಭ್ರಮ-2024 ರ ಭಾಗವಾಗಿ ನಗರದ ಜಗತ್ ವೃತದ್ದಲ್ಲಿ ಆಯೋಜಿಸಿದ ಕನ್ನಡ ಜಾಗೃತಿ ಜಾಥಾ ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾವು ನಮ್ನ ಭಾಷೆಯನ್ನು ಪ್ರೀತಿಸಬೇಕು. ಪ್ರತಿನಿತ್ಯ ಕನ್ನಡದಲ್ಲಿಯೇ ಮಾತಾಡಬೇಕು. ಹೆಚ್ಚೆಚ್ಚು ಕನ್ನಡ ಮಾತಾಡಿದರೆ ಅದು ಮತ್ತಷ್ಟು ಶ್ರೀಮಂತಿಕೆ ಹೊಂದುತ್ತದೆ. ಹಿರಿಯರ ಕಟ್ಟಿ ಬೆಲೆಸಿದ ಕನ್ನಡ ಭಾಷೆಯ ಸೊಗಡನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

Contact Your\'s Advertisement; 9902492681

ಸದಾ ಕನ್ನಡ ಕಟ್ಟುವ ಕಾರ್ಯಚಟುವಟಿಕೆಗಳನ್ನು ಏರ್ಪಡಿಸಿಕೊಂಡು ಬರುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತು ಎಲ್ಲರಿಗೂ ಮಾದರಿಯಾಗಿದೆ. ರಾಜ್ಯೋತ್ಸವದ ನಿಮಿತ್ತ ನವೆಂಬರ್ ತಿಂಗಳಾದ್ಯಂತ ವಿವಿಧ – ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಿದ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಹಾಗೂ ಅವರ ಪದಾಧಿಕಾರಿಗಳ ಕಾರ್ಯ ಉತ್ತಮವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕನ್ನಡ ಕೇವಲ ಭಾಷೆ ಅಲ್ಲ. ಅದು ಎಲ್ಲರ ಉಸಿರಾಗಿದೆ. ಈ ಕನ್ನಡ ನಾಡಿನಲ್ಲಿ ವಾಸ ಮಾಡುತ್ತಿರುವ ಎಲ್ಲ ಜಾತಿ=ಧರ್ಮದವರು ಕನ್ನಡವನ್ನು ತಮ್ಮದಾಗಿಸಿಕೊಳ್ಳಬೇಕು. ಈ ಭಾಷೆ ರಾಜ್ಯ ಮತ್ತು ಹಳ್ಳಿಗಳ ಮೂಲೆ ಮೂಲೆಗಳಲ್ಲಿ ಬೆಳೆಯಬೇಕು.ಮನೆ-ಮನಗಳಲ್ಲಿ ಕನ್ನಡದ ದೀಪ ಪ್ರಜ್ವಲಿಸಬೇಕು. ಕನ್ನಡದ ಉಳಿವಿಗಾಗಿ ನುಡಿ ಹಬ್ಬದ ಮೂಲಕ ಜನರಿಗೆ ಪ್ರೇರೆಪಿಸಲು ಪರಿಷತ್ತು ಕನ್ನಡ ನಿತ್ಯೋತ್ಸವದ ರೀತಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದರು.

ಮಕ್ಕಳ ಜಯಘೋಷಗಳ ಮಧ್ಯೆ ಕನ್ನಡದ ಕಲರವ ಅರಳಿತು. ನಾಡ ಧ್ವಜ ಕೈಯಲ್ಲಿಡಿದ ಶಾಲಾ ಮಕ್ಕಳು ಹಾಗೂ ಯುವಕರು ಪುಟ್ಟ ಪುಟ್ಟ ಹೆಜ್ಜೆಗಳು ಹಾಕಿ ಕನ್ನಡ ಜಾಗೃತಿ ಜಾಥಾಕ್ಕೆ ವಿಶೇಷ ಕಳೆ ತಂದರು. ಡೊಳ್ಳು ಕುಣಿತ , ಶಾಲಾ ಮಕ್ಕಳ ನೃತ್ಯ ನೋಡುಗರ ಗಮನ ಸೆಳೆದವು. ನಗರದ ಕನ್ನಡಪರ ಸಂಘಟನೆಯ ಪದಾಧಿಕಾರಿಗಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಮಧ್ಯಾಹ್ನದ ಬಿಸಿಲು ಲೆಕ್ಕಿಸದೇ ದಣಿವರಿಯದೆ ಕನ್ನಡ ಭವನಕ್ಕೆ ಆಗಮಿಸಿದ ಜಾಥಾಕ್ಕೆ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.

ಸಹಾಯಕ ಆಯುಕ್ತರಾದ ಸಾಹಿತ್ಯ ಎಂ. ಆಲದಕಟ್ಟಿ, ಮಕ್ಕಳ ಸಾಹಿತಿ ಎ.ಕೆ. ರಾಮೇಶ್ವರ, ಹೋರಾಟಗಾರರಾದ ಮಲ್ಲಿಕಾರ್ಜುನ ಸಾರವಾಡ, ಜಗನ್ನಾಥ ಸೂರ್ಯವಂಶಿ, ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಪ್ರಮುಖರಾದ ರವೀಂದ್ರಕುಮಾರ ಭಂಟನಳ್ಳಿ, ಕಲ್ಯಾಣಕುಮಾರ ಶೀಲವಂತ, ರಾಜೇಂದ್ರ ಮಾಡಬೂಳ, ವಿನೋದಕುಮಾರ ಜೇನವೇರಿ, ಬಾಬುರಾವ ಪಾಟೀಲ, ಧರ್ಮರಾಜ ಜವಳಿ, ರಮೇಶ ಡಿ ಬಡಿಗೇರ, ಶಕುಂತಲಾ ಪಾಟೀಲ, ಜ್ಯೋತಿ ಕೋಟನೂರ, ಸಂದೀಪ ಭರಣಿ, ಶಿಲ್ಪಾ ಜೋಶಿ, ಸುಮಾ ಕವಾಲ್ದಾರ್, ಗೋಪಾಲ ನಾಟೀಕರ್, ಎಂ ಎನ್ ಸುಗಂಧಿ, ಶಿವಶರಣ ಬಡದಾಳ, ಚಂದ್ರಕಾಂತ ಸೂರನ್, ರೂಪಾ ಪೂಜಾರಿ, ಕುಪೇಂದ್ರ ಬರಗಾಲಿ, ವೀರಭದ್ರ ಚಿತ್ತಾಪೂರ, ಗಣೇಶ ಚಿನ್ನಾಕಾರ, ಶಿವಲಿಂಗಪ್ಪ ಅಷ್ಟಗಿ, ನಾಗಪ್ಪ ಸಜ್ಜನ್, ಎಸ್ ಕೆ ಬಿರಾದಾರ, ಸುರೇಶ ಲೇಂಗಟಿ, ಸಂತೋಷ ಕುಡಳ್ಳಿ, ವೀರಸಂಗಪ್ಪ ಬುಳ್ಳಾ, ಶ್ರೀನಿವಾಸ ಬಲ್ಪೂರ, ಡಾ.ಬಸವರಾಜ ಚೆನ್ನಾ, ಚಂದ್ರಶೇಖರ ಮ್ಯಾಳಗಿ, ಮಹಾದೇವ ಪಾಟೀಲ, ಮಂಜುನಾಥ ಕಂಬಾಳಿಮಠ, ರೇವಣಸಿದ್ದಪ್ಪ ಜೀವಣಗಿ, ಸೈಯದ್ ನಜಿರುದ್ದೀನ್ ಮುತ್ತವಲಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here