ಕಲಬುರಗಿ: ಡಾ.ಪುನೀತ ರಾಜಕುಮಾರ್ ಅಭಿಮಾನಿ ಸಂಘ ಮತ್ತು ಭೀಮ ಯುವ ಸೇನೆ ವತಿಯಿಂದ ಡಾ.ಪುನೀತ ರಾಜಕುಮಾರ ಅವರ 3 ನೇ ಪುಣ್ಯ ಸ್ಮರಣೆ ಕಾರ್ಯಕ್ರಮದ ನಿಮಿತ್ತ ಅನಾಥ ಆಕ್ರಮದ ಹಿರಿಯ ನಾಗರಿಕರಿಗೆ ಹಣ್ಣು ಹಂಪಲು ಬ್ರೆಡ್, ಬಿಸಕಟ, ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದ್ದರು.
ಈ ಸಂದರ್ಭದಲ್ಲಿ ಸಮಾಜಿಕ ಕಶರ್ಯಕರ್ತರಾದ ಮೈಲಾರಿ ದೊಡ್ಡಮನಿ ಅವರು ಮಾತನಾಡಿ ಡಾ. ಪುನೀತ ರಾಜಕುಮಾರ ಸಾಮಾಜಿಕ ಕಳಕಳಿ ಮತ್ತು ಅವರ ವಿಚಾರಗಳು ಸಮಾಜಕ್ಕೆ ಮಾದರಿಯಾಗಿದ್ದು, ಮಕ್ಕಳಿಗೆ, ಮತ್ತು ಮಹಿಳೆಯರಿಗೆ ,ತಂದೆ ತಾಯಿಯರಿಗೆ ,ಗುರು ಹಿರಿಯರಿಗೆ, ಅನಾಥರಿಗೆ ,ನಿರ್ಗತಿಕರಿಗೆ ಯಾವ ರೀತಿಯಾಗಿ ಗೌರವ, ಕರುಣೆ ,ಪ್ರೀತಿಯ ಮನೋಭಾವದಿಂದ ಎಲ್ಲಾ ಜಾತಿ ಜನಾಂಗದವರನು ಗೌರವದಿಂದ ಕಾಣುವ ಮೂಲಕ ಸಮಾಜದಲ್ಲಿ ಬದಲಾವಣೆತರಲು ಪ್ರಯತ್ನಿಸಿದರು ಎಂದು ತಿಳಿಸಿದರು.
ಯುವಪಿಳಿಗೆ ಇಂಥ ಆದರ್ಶ ವ್ಯಕ್ತಿಯ ವ್ಯಕ್ತಿತ್ವ ಮೈಗೂಡಿಸಿಕೊಳ್ಳಬೇಕು. ಪ್ರಸ್ತುತ ದಿನಗಳಲ್ಲಿ ಪುನೀತ್ ರಾಜಕುಮಾರ ಅವರ ಜೀವನ ಶೈಲಿ ,ಅವರ ಸರಳತೆ, ಅವರ ನಡೆ, ನುಡಿ , ಇತ್ಯಾದಿ ವಿಷಯಗಳು ನಮ್ಮೆಲ್ಲರ ಸಾಮಾಜಿಕ ಸೇವೆಗೆ ತುಂಬಾ ಆದರ್ಶ ಸ್ಪೂರ್ತಿ ಎಂದು ಎಂದರು.
ಪುನೀತ ರಾಜಕುಮಾರ ಅಭಿಮಾನಿ ಸಂಘ ಮತ್ತು ಭೀಮ ಯುವ ಸೇನೆಯ ಅಧ್ಯಕ್ಷರಾದ ಸಂತೋಷ ಹಾವನೂರ ಅವರು ಮಾತನಾಡಿ ಡಾ.ಪುನೀತ ರಾಜಕುಮಾರ ಅವರ 3 ನೇ ಪುಣ್ಯ ಸ್ಮರಣೆಯ ದಿನ ಪ್ರತಿ ವರ್ಷದಂತೆ ಈ ವರ್ಷವೂ ವೃದ್ಧಾಶ್ರಮದಲಿರುವ ಅನಾಥ ಮತ್ತು ನಿರ್ಗತಿಕರಿಗೆ ಹಣ್ಣು, ಹಂಪಲು , ಬ್ರೆಡ್, ಬಿಸಕಟ್ ನೀಡುವುದರ ಮೂಲಕ ಡಾ.ಪುನೀತ ರಾಜಕುಮಾರ ಅವರನ್ನು ನೆನೆಯುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಹಾಂತೇಶ ಸಿಂಗೆ, ರಜನಿಕಾಂತ ಸಿಂಗೆ, ಟ್ರಸ್ಟ್ ಅಧ್ಯಕ್ಷರಾದ ಶ್ರೀಮತಿ ಗಂಗಮ್ಮ ರೇವಣಸಿದ್ದ ಗೋರಗೋಳ, ಶ್ರೀಮತಿ ಕರುಣಾ, ಔಷಧ ನಿಯಂತ್ರಣಕರು ಸೇರಿದಂತೆ ಹಲವರು ಇದ್ದರು.