CHAIN” ತರಬೇತಿಗೆ DHO ಡಾ.ಶರಣಬಸಪ್ಪ ಖ್ಯಾತನಾಳ ಚಾಲನೆ

0
96

ಕಲಬುರಗಿ: ಚಿತ್ತಾಪುರ ತಾಲೂಕಿನ, ಪ್ರಾಥಮಿಕ್ ಆರೋಗ್ಯ ಸುರಕ್ಷಣಾ ಅಧಿಕಾರಿಗಳಿಗೆ “”CHAIN” ತರಬೇತಿಗೆ ಸಸಿಗೆ ನೀರು ಹಾಕುವ ಮುಖೇನ ಡಾ.ಶರಣಬಸಪ್ಪ ಖ್ಯಾತನಾಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಚಾಲನೆ ನೀಡಿದರು.

ಚೆನ್ನಾಗಿ ತರಬೇತಿ ಪಡೆದು ತಮ್ಮ ಕ್ಷೇತ್ರದಲ್ಲಿ ತಾವುಗಳು ಆರೋಗ್ಯವಾಗಿದ್ದು ತಮ್ಮ ಕ್ಷೇತ್ರದಲ್ಲಿಯ ಅಪೌಷ್ಟಿಕ ಮಕ್ಕಳು ಸಾವಿನ ದವಡೆಗೆ ಸಿಲುಕದಂತೆ ಪ್ರಾರಂಭಿಕ ಹಂತದಲ್ಲಿ ಗುರುತಿಸಿ ಕಾರ್ಯನಿರ್ವಹಿಸುವಂತೆ ಅವರು ಕರೆ ನೀಡಿದರು.

Contact Your\'s Advertisement; 9902492681

ಮುಖ್ಯ ಅತಿಥಿಗಳಾಗಿ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಜಿಲ್ಲಾ ಅನುಷ್ಠಾನಾಧಿಕಾರಿಗಳಾದ ಡಾ. ವಿವೇಕಾನಂದ ರೆಡ್ಡಿ ಸರ್ ಅವರು ತರಬೇತಿ ಯಲ್ಲಿ ಈಗಾಗಲೇ ಅನೇಕ ಮಕ್ಕಳ ಕುರಿತು ಇಲಾಖೆಯಲ್ಲಿ ತರಬೇತಿಯನ್ನು ಪಡೆದಿದ್ದು ಈ ತರಬೇತಿಯಲ್ಲಿ ಮಕ್ಕಳ ಲಸಿಕಾ ಕಾರ್ಯಕ್ರಮ ಪರಿಣಾಮಕಾರಿಯಾಗಿ ನಿರ್ವಹಿಸಿ ದಲ್ಲಿ ಅನೇಕ ಮಾರಕ ರೋಗಗಳು ತಡೆದು ಅವುಗಳಿಂದ ಅಪೌಷ್ಟಿಕತೆಯನ್ನು ಸಮುದಾಯದಲ್ಲಿ ನಿಯಂತ್ರಿಸಿ ಹಾಗೂ ಅನೇಕ ರಾಷ್ಟ್ರೀಯ ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ಪೌಷ್ಟಿಕತೆ ಕಡೆ ಗಮನವಿರಿಸಿ ಎಂದು ಮಾಹಿತಿ ನೀಡಿದರು.

ತರಬೇತಿಯ ಕೇಂದ್ರಬಿಂದುವಾದ ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸೋಮು ರಾಠೋಡ್, ಸಂಪನ್ಮೂಲ ವ್ಯಕ್ತಿಗಳಾಗಿ ಶಶಿಧರ್ ಬಳೆ, ಮಹದೇವಿ ಹತ್ತಿ, ಸುನಂದ ನಾವಿ, ಸೋಮಶೇಖರ್ ಮದನ್ ಕರ್ ಹಾಗೂ ತಾಂತ್ರಿಕ ಸಹಾಯಕರಾದ ಸಂತೋಷ್ ವೇದಿಕೆಯಲ್ಲಿದ್ದರು. ಈ ದಿವಸ 110 ತರಬೇತಿದಾರರು ಭಾಗವಹಿಸಿದ್ದು ವಿಶೇಷವಾಗಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here