ಒಳ ಮೀಸಲಿಗೆ ಡಾ. ಖರ್ಗೆ ಮನಸ್ಸು ಮಾಡಲಿ: ಮಂಜುನಾಥ

0
29

ಕಲಬುರಗಿ: ಕಲ್ಯಾಣ ಕರ್ನಾಟಕದಲ್ಲಿ ವಿದ್ಯಾಭ್ಯಾಸ ಮತ್ತು ಉದ್ಯೋಗದ ಮೀಸಲಾತಿಗೆ 371ಕ್ಕೆ ತಿದ್ದುಪಡಿ ತಂದು ಡಾ. ಮಲ್ಲಿಕಾರ್ಜುನ ಖರ್ಗೆ ಹಾಗೂ ಡಾ. ಧರಮ್ ಸಿಂಗ್ ಅವರು ಶ್ರಮ ವಹಿಸಿದಂತೆ ನ್ಯಾ. ಸದಾಶಿವ ಆಯೋಗದ ವರದಿ ಜಾರಿಗೂ ಡಾ. ಖರ್ಗೆ ಅವರು ಶ್ರಮ ವಹಿಸಬೇಕು ಎಂದು ಮಾದಿಗ ಸಮಾಜದ ಯುವ ನಾಯಕರಾದ ಮಂಜುನಾಥ ಎನ್, ರವರು ಹೇಳಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವಿದ್ದು, ಒಳ ಮೀಸಲು ಜಾರಿಗೆ ತರಲು ಅವರು ಮೌನ ಮುರಿಯಬೇಕು. ಆಲ್ಲದೇ, ಸದಾಶಿವ ಆಯೋಗದ ಮೀಸಲಾತಿ ಕುರಿತ ವರದಿ ಜಾರಿಗೆ ಮನಸ್ಸು ಮಾಡಬೇಕು ಎಂದು ಹೇಳಿರುವ ಅವರು, ಈ ಕೂಡಲೇ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದ ‌ಸದಸ್ಯರನ್ನು ವರದಿ ಅಂಗೀಕಾರ ಮಾಡುವಂತೆ ಒತ್ತಡ ಹೇರಬೇಕು ಎಂದು ಮಂಜುನಾಥ ಎನ್,ರವರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here