ಕರುನಾಡ ವಿಜಯಸೇನೆಯ ವತಿಯಿಂದ ಕನ್ನಡ ರಾಜ್ಯೋತ್ಸವ 

0
20

ಕಲಬುರಗಿ: ನಗರದ ಪಿಡಿಎ ಕಾಲೇಜ ವೃತ್ತದಲ್ಲಿ 69ನೇ ಕನ್ನಡ ರಾಜ್ಯೋತ್ಸವದ ನಿಮಿತ್ಯ ಕರುನಾಡ ವಿಜಯಸೇನೆಯ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬಿಜೆಪಿ ಪಕ್ಷದ ಹಿರಿಯ ಮುಖಂಡರು ಹಾಗೂ ಡಾ. ಬಾಬು ಜಗಜೀವನ್ ರಾಮ್ ರವರ 117ನೇ ಜಿಲ್ಲಾ ಜಯಂತೋತ್ಸವ ಸಮಿತಿಯ ಜಿಲ್ಲಾಧ್ಯಕ್ಷ ರಮೇಶ್ ಎಚ್ ವಾಡೇಕರ್ ಅವರು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜ್ಯ ಸಲ್ಲಿಸಿ ಧ್ವಜಾರೋಹಣ ನೇರವರಿಸಿದರು.

ನಂತರ ಅವರು ಮಾತನಾಡಿ ಕರ್ನಾಟಕದಲ್ಲಿ ಹೊರ ರಾಜ್ಯದಿಂದ ಬಂದಂತ ಜನರು ಮತ್ತು ಕರ್ನಾಟಕದಲ್ಲಿ ಇರುವಂತ ಕನ್ನಡಿಗರು ಪ್ರತಿಯೊಬ್ಬ ವ್ಯಾಪಾರ ಮಾಡುವಂತವರು ತಮ್ಮ ತಮ್ಮ ಅಂಗಡಿಯ ನಾಮಫಲಕ ಕನ್ನಡದಲ್ಲಿ ಹಾಕಬೇಕು ಕನ್ನಡ ಭಾಷೆಯಲ್ಲಿ ವ್ಯವಾರ ಮಾಡಬೇಕು ಕರ್ನಾಟಕಕ್ಕೆ ಹೊರ ರಾಜ್ಯದಿಂದ ಬಂದಂತಹ ಜನರು ಕನ್ನಡಿಗರಿಗೆ ಗೌರವಿಸಬೇಕು.

Contact Your\'s Advertisement; 9902492681

ಕನ್ನಡಿಗರು ಕೂಡ ಮೊದಲು ಕನ್ನಡ ಭಾಷೆಯಲ್ಲಿ ಮಾತನಾಡಿ ಮತ್ತು ಹೊರ ರಾಜ್ಯದಿಂದ ಬಂದಂತ ಜನರನ್ನು ಕನ್ನಡವನ್ನು ಕಲಿಸಬೇಕು ತನು ಕನ್ನಡ ಮನ ಕನ್ನಡ ನುಡಿ ಕನ್ನಡ ಕರುನಾಡ ವಿಜಯ ಸೇನೆ ಸಂಘಟನೆ ನೆಲ ಜಲ ಭಾಷೆ ಕನ್ನಡದ ಸಂಸ್ಕøತಿಕಾಗಿ ಸದಾ ಕಾಲ ಮುಂಚೂಣಿಯಲ್ಲಿದೆ ಕಲಬುರಗಿ ಜಿಲ್ಲೆಯಲ್ಲಿ ಕನ್ನಡಕ್ಕಾಗಿ ಮತ್ತು ಅಭಿವೃದ್ಧಿಗಾಗಿ ಕನ್ನಡದ ನಾಮಪಲಕಕ್ಕಾಗಿ ಹಾಗೂ ಕನ್ನಡಿಗರಿಗಾಗಿ ಜಿಲ್ಲೆಯಲ್ಲಿ ಹಲವಾರು ಹೋರಾಟ ಮಾಡುವುದನ್ನು ನಾನು ಕಂಡಿದ್ದೇನೆ ಇದೇ ತರ ಈ ಸಂಘಟನೆ ಸದಾ ಕಾಲ ಮುಂಚೂಣಿಯಲ್ಲಿ ಇರಲಿ ಎಂದು ಹೇಳಿದರು.

ಕವಿಸೇ ಕಲಬುರಗಿ ಜಿಲ್ಲಾಧ್ಯಕ್ಷ ಪೃಥ್ವಿರಾಜ ಎಸ್ ರಾಂಪುರ ಮಾತನಾಡಿ ಮೊದಲಿಗೆ ಸಮಸ್ತ ಕನ್ನಡದ ಮುದ್ದು ಮನಸ್ಸುಗಳಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಕನ್ನಡ ರಾಜ್ಯೋತ್ಸವ ಆಚರಣೆ ಪ್ರತಿವರ್ಷ ಬರುವುದು ನವೆಂಬರ್ ಒಂದು ದಿನಕ್ಕೆ ಅಷ್ಟೇ ನಾವು ಸೀಮಿತವಾಗಿರಬಾರದು ವರ್ಷಕ್ಕೆ 365/366 ಪ್ರತಿದಿನ ಕೂಡ ನಾವು ಕನ್ನಡ ತಾಯಿಯ ಸೇವೆ ಮಾಡುವಲ್ಲಿ ದಿನನಿತ್ಯ ಹೊಂದಿರಬೇಕು ಕರ್ನಾಟಕದಲ್ಲಿ ಹುಟ್ಟಿದಂತಹ ಪ್ರತಿಯೊಬ್ಬ ಕನ್ನಡಿಗರು ಸೌಭಾಗ್ಯರು ಈ ಕರ್ನಾಟಕದಲ್ಲಿ ನೆಲ ಜಲ ಸಂಸ್ಕೃತಿಕ ತುಂಬಾ ಶ್ರೇಷ್ಠವಾದಂತದ್ದು ನಾವು ಯಾವ ರಾಜ್ಯದ ಭಾಷೆಗೆ ವಿರುದ್ಧರೂ ಅಲ್ಲ ನಮ್ಮ ನಾಡಿಗೆ ಬಂದು ನಮ್ಮ ಕನ್ನಡದ ಭಾಷೆ ಹಾಡದಂತ ಅವಿವೇಕಿಗಳಿಗೆ ನಾವು ವಿರುದ್ಧರು ನನ್ನ ಕನ್ನಡ ಭಾಷೆಗೆ ಅವಮಾನ ಮಾಡಿದರೆ ನನ್ನ ಹೆತ್ತ ತಾಯಿಗೆ ಅವಮಾನ ಮಾಡಿದಂತೆ ಕನ್ನಡವೇ ನಿತ್ಯ ಕನ್ನಡವೇ ಸತ್ಯ ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನಾವೆಲ್ಲರೂ ಕನ್ನಡಿಗರಾಗಿರೋಣ ಕರ್ನಾಟಕದಲ್ಲಿ ಕನ್ನಡಿಗನೇ ಯಜಮಾನ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಉಪಾಧ್ಯಕ್ಷರಾದ ರಾಜೇಂದ್ರ ಟೈಗರ್, ಶಂಕರ್ ದೊಡ್ಮನಿ, ಜಿಲ್ಲಾ ಯುವ ಘಟಕ ಅಧ್ಯಕ್ಷ ನಾಗರಾಜ ಮೈತ್ರಿ, ಜಿಲ್ಲಾ ಗೌರವಾಧ್ಯಕ್ಷ ಉಸ್ಮಾನ್ ಸಾಬ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಶಂಕರ್ ದೊದ್ದಮನಿ, ನಗರ ಅಧ್ಯಕ್ಷ ರಾಜು ಹೆಚ್ ಗುಂಟ್ರಾಳ, ನಗರ 54 ವಾರ್ಡ್ ಅಧ್ಯಕ್ಷ ಸಚಿನ್ ತಳವಾರ, ತಾಲೂಕ ಅಧ್ಯಕ್ಷ ಕಲ್ಯಾಣಿ ಎಸ್ ತಳವಾರ್, ಜಿಲ್ಲಾ ಸಾಮಾಜಿಕ ಜಾಲತಾಣ, ಅಧ್ಯಕ್ಷ ಮೋಹನ್ ಚಿಕ್ಮಟ್ಟಿ, ನಗರ ಮಹಿಳಾ ಘಟಕ ಅಧ್ಯಕ್ಷ ಲಕ್ಷ್ಮೀಬಾಯಿ ದೇವಿಂದ್ರಪ್ಪ, ತಾಲೂಕು ಉಪಾಧ್ಯಕ್ಷ ಪ್ರಭುಲಿಂಗ, ನಗರ ಪ್ರಧಾನ ಕಾರ್ಯದರ್ಶಿ ಸತೀಶ್ ಪೆÇಲೆ, ನಗರ ರೈತ ಘಟಕ ಅಧ್ಯಕ್ಷ ಶಿವಪ್ಪ ಹುಡುಗಿ, ಶೇಖರ್ ಭಂಡಾರಿ, ಸಿದ್ದು ಸರಡಗಿ, ರಾಜು ಗುಂಟ್ರಳ, ಪ್ರಶಾಂತ ಸಂಣೂರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here