ಕಲಬುರಗಿ; ಮಳಖೇಡ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಲು ದೇಗಾಂವ ಆಗ್ರಹ

0
18

ಕಲಬುರಗಿ: ಕರ್ನಾಟಕ ಇತಿಹಾಸದ ಚರಿತ್ರೆ ಪುರುಷ,ರಾಷ್ಟ್ರಕೂಟರ ಸಾಮ್ರಾಟ,ಅಮೋಘ ವರ್ಷ ನೃಪತುಂಗ ಮಹಾರಾಜ ಪ್ರತಿಮೆಯನ್ನು ಕಲಬುರಗಿ ನಗರದ ಹೃದಯ ಭಾಗದಲ್ಲಿ ಸ್ಥಾಪಿಸಿ,ರಾಷ್ಟ್ರಕೂಟರ ರಾಜಧಾನಿ ಕೇಂದ್ರವಾಗಿದ್ದ ಮಾನ್ಯಖೇಡ ( ಮಳಖೇಡ ) ಅಭಿವೃದ್ಧಿ ಪ್ರಾಧಿಕಾರ ರಚಿಸಿ ಅಭಿವೃದ್ಧಿ ಪಡಿಸಬೇಕೆಂದು ಕರ್ನಾಟಕ ನವನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ರವಿ ದೇಗಾಂವ ಕರೆ ನೀಡಿದರು.

ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಕಲಬುರಗಿ ನಗರದ ಜಗತ್ ವೃತ್ತದ ಹತ್ತಿರ ಕರ್ನಾಟಕ ನವನಿರ್ಮಾಣ ಸೇನೆ  ಜಿಲ್ಲಾ ಕಛೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ,ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಕರ್ನಾಟಕ ಸರಕಾರ ನವೆಂಬರ್ ಒಂದರಂದು ಮಾತ್ರ ಕನ್ನಡ ಪ್ರೀತಿ ತೋರಿಸುವ ಕೆಲಸ ಮಾಡಬಾರದು ಈ ನಾಡಿನ ಚರಿತ್ರೆ ಉಳಿಸಿ,ಬೆಳಗಿಸಿ,ಬೆಳಗುವ ಕೆಲಸ ಮಾಡಬೇಕಿದೆ.ಸರಕಾರ ಮತ್ತು ಜನಪ್ರತಿನಿಧಿಗಳಿಗೆ ಕನ್ನಡ ಪ್ರೇಮ ನಾಲಿಗೆಯಲ್ಲಿ ನಲಿದಾಡದೇ ಹೃದಯದಿಂದ ಬರಬೇಕಿದೆ.

Contact Your\'s Advertisement; 9902492681

ರಾಷ್ಟ್ರಕೂಟರ ರಾಜಧಾನಿ ಮಳಖೇಡ ಅಭಿವೃದ್ಧಿ ಪಡಿಸಿ ಇತಿಹಾಸ ಪ್ರಸಿದ್ಧ ತಾಣವನ್ನಾಗಿಸುವ ಕೆಲಸ ಇಲ್ಲಿಯವರೆಗೆ ಯಾವ ಸರಕಾರಗಳಿಂದ ಆಗಿಲ್ಲ.ಕಲಬುರಗಿ ಜಿಲ್ಲಾಡಳಿತ ಮಳಖೇಡ ವಿಚಾರದಲ್ಲಿ ಮಲಗಿರುವಂತೆ ನಟಿಸುತ್ತಲೇ ಕಾಲ ಹರಣ ಮಾಡುತ್ತಿದೆ.ತನ್ನ ಜಿಲ್ಲೆಯ ಐತಿಹಾಸಿಕ ಚರಿತ್ರೆಯನ್ನು ಬೆಳಗಿಸುವ ಒಂದೇ ಒಂದು ಸಣ್ಣ ಕೆಲಸ ಜಿಲ್ಲಾಡಳಿತದಿಂದ ಇಲ್ಲಿಯವರೆಗೆ ಆಗಿಲ್ಲ.ಕನ್ಮಡದ ವಿಚಾರದಲ್ಲಿ ಇದು ಅಕ್ಷ್ಯಮ ಅಪರಾಧ.ಕರ್ನಾಟಕ ನವನಿರ್ಮಾಣ ಸೇನೆ ಹಲವು ವರ್ಷಗಳಿಂದ ಈ ವಿಚಾರದಲ್ಲಿ ಧ್ವನಿ ಎತ್ತುತ್ತಲೇ ಬಂದಿದೆ.

ಮುಂಬರುವ ದಿನಗಳಲ್ಲಿ ಕರ್ನಾಟಕ ನವನಿರ್ಮಾಣ ಸೇನೆ ಕಲಬುರಗಿ ಜಿಲ್ಲಾ ಘಟಕವು ಪ್ರತಿ ತಾಲೂಕು ಕೇಂದ್ರಗಳಲ್ಲಿ ಈ ವಿಚಾರದಲ್ಲಿ ಜನಾಂಧೋಲನ ರೂಪಿಸಲಿದೆ ಎಂದರು.ಸೇನೆಯ ಪದಾಧಿಕಾರಿಗಳು ಇತಿಹಾಸ ಪ್ರೇಮವನ್ನು ತಮ್ಮ ಹೋರಾಟದ ಕಾರ್ಯ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂತೋಷ್ ಪಾಟೀಲ್, ಆನಂದ್ ಪಾಲ್ಕೇ, ಚಂದ್ರು ಸಲಗರ್, ಅಶ್ವತ್ ತಾರಫೈಲ್, ಈರಣ್ಣ ಪಾಟೀಲ್, ಶರಣಯ್ಯ ಹಿರೇಮಠ, ಸಂತೋಷ್ ಕೇರೂರ್, ದತ್ತು ಚುಂಚನಸೂರ್, ರಾಘವೇಂದ್ರ ಪಾಟೀಲ್, ಶೇಖರ್ ವಾಗ್ದರ್ಗಿ, ಮಂಜು ಕಡಗಂಚಿ, ಈಶ್ವರ್ ಹೇರೂರ ಸೇರಿದಂತೆ ಸೇನೆಯ ಜಿಲ್ಲೆಯ ತಾಲೂಕು, ನಗರ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here