ಕಲಬುರಗಿ: ಡಾ.ಬಿ ಆರ್ ಅಂಬೇಡ್ಕರ ಅಭಿವೃದ್ಧಿ ನಿಗಮದ 2018-19ನೇ ಸಾಲಿನ ವಿಶೇಷ ಪ್ಯಾಕೇಜ್ ಅನುದಾನದ ಅಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳ ಅನುದಾನ ಬಿಡುಗಡೆಗಾಗಿ ರಿಪಬ್ಲೀಕನ್ ಯುತ್ ಫೇಡರೇಷನ್ ಜಿಲ್ಲಾ ಸಮಿತಿ ಮುಖಂಡರು ಉಪ ಮುಖ್ಯಮಂತ್ರಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದರು.
ನಿಗಮದ ಯೋಜನೆಗಳಲ್ಲಿ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಆಯ್ಕೆಯಾದ ಉದ್ಯಮ ಶೀಲತಾ ಯೋಜನೆ 702 ಹಾಗೂ ವಾಹನ ಸಾಲ ಯೋಜನೆಯ 187 ಫಲಾನುಭವಿಗಳು ಆಯ್ಕೆಯಾಗಿದ್ದು , ಆಯ್ಕೆಯಾದ ಫಲಾನುಭವಿಗಳಿಗೆ ಅನುದಾನವನೂನು ಬಿಡುಗಡೆ ಮಾಡುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದರು.
ಫಲಾನುಭವಿಗಳಿಗೆ ಆರ್ಥಿಕ ತೊಂದರೆಯಾಗುತ್ತಿದ್ದು, ಶೀಘ್ರದಲ್ಲಿ ಅನುದಾನ ಬಿಡುಗಡೆ ಮಾಡಬೇಕೆಂದು ಉಸ್ತುವಾರಿ ಸಚಿವರಿಗೆ ಮನವಿ ಮಾಡಿ ವಿನಂತಿಸಿಕೊಳ್ಳಲಾಗಿದೆ ಎಂದು ಫೇಡರೇಷನ್ ಮುಖಂಡ ದಿನೇಶ ದೊಡ್ಡಮನಿ ತಿಳಿಸಿದ್ದಾರೆ.
15 ದಿನಗಳ ಒಳಗಾಗಿ ಯೋಜನೆಗೆ ಮೀಸಲಿಟ್ಟ ಅನುದಾನವನ್ನು ಬಿಡುಗಡೆ ಮಾಡದೇಹೋದಲ್ಲಿ ರಿಪಬ್ಲೀಕನ್ ಯುತ್ ಫೇಡರೇಷನ್ ಹಾಗೂ ಎಲ್ಲಾ ಫಲಾನುಭವಿಗಳು ಒಳಗೊಂಡು ಉಗ್ರವಾದ ಹೋರಾಟ ನಡೇಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಹಣಮಂತ ಇಟಗಿ ತಿಳಿಸಿದ್ದಾರೆ ಈ ಸಂದರ್ಭದಲ್ಲಿ ಸಂಘಟನೆ ಮುಖಂಡರು ಸೇರಿದಂತೆ ಫಲಾನುಭವಿಗಳು ಇದ್ದರು.