ಯಾದಗಿರಿ: ಸುರ ಸಂಗೀತ ಕಲಾ ಸಂಸ್ಥೆ ಯಾದಗಿರಿ ಇವರ ಆಶ್ರಯದಲ್ಲಿ ಗದಗಿನ ಗಾನಯೋಗಿ ಶಿವಯೋಗಿ ಡಾಕ್ಟರ್ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ೯ನೇ ಪುಣ್ಯ ಸ್ಮರಣೋತ್ಸವ ಹಾಗೂ ಡಾಕ್ಟರ್ ಪಂಡಿತ ಪುಟ್ಟರಾಜ ಕವಿ ಗುರುವರ್ಯರ ಮಹಾಪುರಾಣ ಪ್ರವಚ, ಸಾಧಕರಿಗೆ ಸನ್ಮಾನ ಹಾಗೂ ಅಹೋರಾತ್ರಿ ಸಂಗೀತ ಕಾರ್ಯಕ್ರಮಗಳು ಸಮಾರಂಭ ಅಕ್ಟೋಬರ್ ೨೧ ರಿಂದ ೨೬ ರ ವರೆಗೆ ಯಾದಗಿರಿ ಶ್ರೀ ಲಕ್ಷ್ಮೀಮಾರುತಿ ದೇವಸ್ಥಾನದಲ್ಲಿ ಸಂಜೆ ೬ ಗಂಟೆಯಿಂದ ೯ ರ ವರೆಗೆ ಹಮ್ಮಿಕೊಳ್ಳಲಾಗಿದೆ. ಎಂದು ಯಾದಗಿರಿಯ ಸುರ್ ಸಂಗೀತ ಕಲಾ ಸಂಸ್ಥೆ, ಸಂಚಾಲಕರು ಆದ ಸಂಗೀತ ಶಿಕ್ಷಕ ಶರಣು ವಠಾರ, ನಿರ್ದೇಶಕರೂ ಆದ ನಿವೃತ್ತ ದೈಹಿಕ ಶಿಕ್ಷಣಾಧಿಕಾರಿಯಾದ ಎಸ್.ಕೆ.ಸೋನಾರ ತಿಳಿಸಿದರು.
ನಗರದ ವೀರಭಾರತಿ ಪ್ರತಿಷ್ಠಾನ ಕಾರ್ಯಾಲಯದ ಸಭಾಂಗಣದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಆಹ್ವಾನ ಪತ್ರಿಕೆಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು ಕಾರ್ಯಕ್ರಮದ ಅಂಗವಾಗಿ ಅ.೨೧ ರಿಂದ ನಿತ್ಯ ಪುರಾಣ ನಡೆಯಲಿದ್ದು ಕೊನೆಯ ದಿನ ನಡೆಯುವ ಸಮಾರಂಭದಲ್ಲಿ ದಂಡಗುಂಡ ಮಹಾಸಂಸ್ಥಾನ ಪೀಠಾಧಿಪತಿ ಶ್ರೀ. ಸಂಗನಬಸವ ಶಿವಾಚಾರ್ಯರು ಹಾಗೂ ಯಾದಗಿರಿ ದಾಸಬಾಳ ಮಠದ ಶ್ರೀ ಸದ್ಗುರು ವೀರೇಶ್ವರ ಮಹಾಸ್ವಾಮಿಗಳು, ಗುರುಮಠಕಲ್ ಖಾಸಾ ಮಠ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು, ತೆಲಂಗಾಣದ ನೆರೆಡಗುಂಬಾ ಪಶ್ಚಿಮಾದ್ರಿ ವಿರಕ್ತ ಸಂಸ್ಥಾನ ಮಠದ ಶ್ರೀ ಪಂಚಮ ಸಿದ್ಧಲಿಂಗ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು.
ಯಾದಗಿರಿ ಶಾಸಕ ವೆಂಕಟ್ ರೆಡ್ಡಿ ಮುದ್ನಾಳ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ್, ಮಾಜಿ ವಿಧಾನ ಪರಿಷತ್ ಸದಸ್ಯ ಚೆನ್ನಾರೆಡ್ಡಿ ತೊನ್ನೂರು ಮಾಜಿ ಕಾಡಾ ಅಧ್ಯಕ್ಷ ಶ್ರೀನಿವಾಸರೆಡ್ಡಿ ಕಂದುಕುರ್, ನಗರಸಭೆ ಮಾಜಿ ಅಧ್ಯಕ್ಷೆ ನಾಗರತ್ನ ಮೂರ್ತಿ ಅನಪೂರ್, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಸಿದ್ದಪ್ಪ ಎಸ್.ಹೊಟ್ಟಿ, ನ್ಯಾಯವಾದಿ ಸಂತೋಷ್ ಮಹಿಂದ್ರಕರ್, ರಮೇಶ್ ದೊಡ್ಡಮನಿ, ಆಶೀರ್ವಾದ ಆಸ್ಪತ್ರೆ ಎಂ.ಡಿ ಸಿ. ಎಂ.ಪಾಟೀಲ್, ವಾತ್ಸಲ್ಯ ಮಕ್ಕಳ ಆಸ್ಪತ್ರೆ ಎಂ.ಡಿ ಡಾ. ಪ್ರಶಾಂತ್ ಬಾಸೂತ್ಕರ್, ನಗರಸಭೆ ಸದಸ್ಯ ಹನುಮಂತ ಇಟಗಿ, ಚನ್ನಪ್ಪ ಸಾಹು ಠಾಣಗುಂದಿ, ಜಿಲ್ಲಾ ವಾಣಿಜ್ಯ ಕೈಗಾರಿಕೆ ಅಧ್ಯಕ್ಷ ಹನುಮಾನ ದಾಸ ಮುಂದಡಾ, ಶಿ.ಹೇ.ಮ.ಶಿ. ಸಂಸ್ಥೆ ಅಧ್ಯಕ್ಷ ರುದ್ರಗೌಡ ಬಿ ಪಾಟೀಲ್, ರಾಮಕೃಷ್ಣ ವಿವೇಕಾನಂದ ಆಶ್ರಮದ ಜಿಲ್ಲಾ ಸಂಚಾಲಕ ವೇಣುಗೋಪಾಲ ಆಗಮಿಸುವರು.
ಮುಖ್ಯ ಅತಿಥಿಗಳಾಗಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪೂರ್ಣಿಮಾ ಚೂರಿ, ನಗರಸಭೆ ಸದಸ್ಯ ಲಕ್ಷ್ಮಿ ರಮೇಶ್ ರಾಥೋಡ್, ಕಾಡಂಗೇರಾ ಇಂದಿರಾ ವಸತಿ ಶಾಲೆ ಪ್ರಾಂಶುಪಾಲ ನಾಗರೆಡ್ಡಿ ಗುಂಡಕನಾಳ, ವರ್ಕನಳ್ಳಿ ಕೆ.ಆರ್.ಸಿ.ಎಸ್ ಪ್ರಾಂಶುಪಾಲ ಹಯ್ಯಾಳಪ್ಪ ಜಾಗಿರದಾರ, ಕಾಂಗ್ರೆಸ್ ಯುವ ಮುಖಂಡ ಪಪ್ಪುಗೌಡ ಚಿನ್ನಕಾರ್, ಪ್ರಥಮ ದರ್ಜೆ ಗುತ್ತೇದಾರ್ ಶಾಂತಗೌಡ ಪಗ್ಲಾಪೂರ್ ಆಗಮಿಸುವರು.
ವಿಶೇಷ ಸನ್ಮಾನ, ಪ್ರಶಸ್ತಿ ಪ್ರದಾನ: ಕಾರ್ಯಕ್ರಮದಲ್ಲಿ ವಿಶೇಷ ಸನ್ಮಾನವನ್ನು ಶ್ರೀ ಅಂಬ್ರೇಶ್ ಗವಾಯಿಗಳಿಗಳು ಶೇಳ್ಳಿಗಿ ಅವರಿಗೆ (ಸಂಗೀತ ಕ್ಷೇತ್ರದ ಸಾಧನೆಗಾಗಿ) ಡಾ.ಪಂ.ಪುಟ್ಟರಾಜ ಗವಾಯಿ ಪ್ರಶಸ್ತಿ, ಹಾಗೂ ವೇ.ಮೂ. ಸಂಗಯ್ಯ ಕುಕ್ಕುಂದಾ ಅವರಿಗೆ (ವಿ.ತಬಲಾವಾದಕರು) ಕಿರಣ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸಲಾಗುತ್ತಿದ್ದು ಸನ್ಮಾನಿತರ ವಿವರ ಇಂತಿದೆ: ಸಿದ್ದಲಿಂಗ ರೆಡ್ಡಿ ಉಳ್ಳೆಸೂಗೂರು, (ರಾಜಕೀಯ), ಯಾದಗಿರಿ ತಾಲೂಕು ವೀರಶೈವ ಸಮಾಜ ಅಧ್ಯಕ್ಷ ಅಯ್ಯಣ್ಣ ಹುಂಡೇಕಾರ್, (ಸಮಾಜ ಸೇವೆ), ಅ.ಭಾ.ವೀ.ಸ. ಅಧ್ಯಕ್ಷ ಆರ್. ಮಹದೇವಪ್ಪ ಅಬ್ಬೆತುಮಕೂರ್, (ವೀರಶೈವ ಮಹಾಸಭಾ ಸೇವೆ), ಸಿದ್ದಣ್ಣ ಸಾಹುಕಾರ (ರಾಷ್ಟ್ರ ಪ್ರಶಸ್ತಿ ಪುರಸ್ಕೃತ), ವೀರಭಾರತಿ ಪ್ರತಿಷ್ಠಾನ ಅಧ್ಯಕ್ಷ ವೈಜನಾಥ್ ಹಿರೇಮಠ,
ಅಲ್ಲಮಪ್ರಭು ಅಭಿವೃದ್ಧಿ ಅಕಾಡೆಮಿ ಅಧ್ಯಕ್ಷ ಸೋಮಶೇಖರ ಮಣ್ಣೂರ್, ತನಾರತಿ ಪ್ರತಿಷ್ಠಾನ ಅಧ್ಯಕ್ಷ ಸಿದ್ದರಾಜರೆಡ್ಡಿ, ಜನಶ್ರೀ ಸಂಸ್ಥೆ ಅಧ್ಯಕ್ಷ ಮೈಲಾರಪ್ಪ ಜಾಗಿರ್ದಾರ್, ಕೆ ಆರ್ ಸಿ ಎಸ್ ವರ್ಕನಳ್ಳಿ ನಿಲಯ ಪಾಲಕ ಬಸವಣ್ಣಪ್ಪ ಪ್ಯಾಟಿ, ಜೈ ಕರ್ನಾಟಕ ಸೈನ್ಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಜಲಪ್ಪನವರ, ಬಿಜೆಪಿಯ ಯುವ ಮುಖಂಡ ಬಸವರಾಜ ಗೊಂದೇನೂರ್, ಸೋಮಶೇಖರ್ ವಣಿಕ್ಯಾಳ, ಮಲ್ಲನಗೌಡ ಕೌಳೂರು, ಜಿಲ್ಲಾ ತಾಂತ್ರಿಕ ಉಪ ಕೃಷಿ ಕಚೇರಿ ಅಧಿಕಾರಿ ರಾಜಕುಮಾರ್, ಪ್ರಥಮ ದರ್ಜೆ ಗುತ್ತೇದಾರ್ ಮಾಳಿಂಗರಾಯ ಅನಕಸೂಗೂರ್, ನಗರಸಭೆ ಮಾಜಿ ಸದಸ್ಯ ನಾಗಪ್ಪ ಬೆನಕಲ್, ಸುಭಾಷ ರೆಡ್ಡಿ ಪೋ. ಪಾಟೀಲ್ ಬೀರನೂರ, ಸಾಹಿತಿ ಕುಪೇಂದ್ರ ವಠಾರ, ಪ್ರಾಂಶುಪಾಲ ಗಾಳೆಪ್ಪ ಪೂಜಾರಿ, ಬಸವರಾಜು ಪತ್ತಾರ್, ವಿವೇಕ ಜಾಗೃತ ಬಳಗ ಅಧ್ಯಕ್ಷ ಮುಖ್ಯಗುರು ಶರಣಬಸವಪ್ಪ ನಾಸಿ, ಮಲ್ಲಿಕಾರ್ಜುನ ಬ. ಅನು ಸೂಗೂರು, ಸಂಗಪ್ಪ ಪಂಚಪ್ಪ ಲಾಳಸಂಗಿ,
ಸುಭಾಷ್ ಆಯರಕರ, ಶಿಕ್ಷಕ ಶಂಕ್ರಪ್ಪ ನಗಿಮುಖ, ರಕ್ಷಾ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ಕೃಷ್ಣಮೂರ್ತಿ, ರಫೀಕ್ ಗೌಡ ಉಳ್ಳೆಸೂಗೂರು, ಸಾಹಿತಿ ಶೋಭಾ ನಾ. ಸಾಲುಮಂಟಪಿ, ನವಲಿ ಎಸ್.ಜಯಲಕ್ಷ್ಮಿ, ನ್ಯಾಯವಾದಿ ಶ್ರೀಮತಿ ಸುಮನ್, ಅನ್ನಪೂರ್ಣ ಡಾ. ಸಿಎಂ ಪಾಟೀಲ್, ಪ್ರಭಾವತಿ ಪಾಟೀಲ್, ಪ್ರತಿಭಾ ಎಸ್ ಸೋನಾರ್ ಇವರಿಗೆ ಸನ್ಮಾನಿಸಲಾಗುವುದು ಎಂದು ವಿವರಿಸಿದರು.
ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸುವ ಕಲಾವಿದರು:ಬೆಂಗಳೂರು ದೂರದರ್ಶನ ಹಾಗೂ ಆಕಾಶವಾಣಿ ಕಲಾವಿದ ಸಿದ್ದಲಿಂಗಯ್ಯ ಹಿರೇಮಠ, ಹಾಗೂ ಹನುಮಂತ ಕುಮಾರ, ಮೈಸೂರಿನ ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದ ರಮೇಶ್ ಕೆ, ಹಾಗೂ ಪಂ.ಭೀಮಾಶಂಕರ ಬಿದನೂರ, ಸೇರಿದಂತೆ ಕಲ್ಯಾಣ ಕರ್ನಾಟಕದ ಕಲಾವಿದರು ಭಾಗವಹಿಸುವರು.
ವೇದಿಕೆ ಮೇಲೆ ಸಂಸ್ಥೆಯ ಅಧ್ಯಕ್ಷ: ವೆಂಕಟೇಶ, ವೀರಭಾರತಿ ಪ್ರತಿಷ್ಠಾನ ಅಧ್ಯಕ್ಷ ವೈಜನಾಥ ಹಿರೇಮಠ, ಜಿಲ್ಲಾ ವೃತ್ತಿ ರಂಗಭೂಮಿ ಕವಿ ಕಲಾವಿದರ ಸಂಘದ ಜಿಲ್ಲಾಧ್ಯಕ್ಷ ಶರಣು ಎಸ್. ನಾಟೇಕರ್, ಸಾಯಿಬಣ್ಣ ಕುರಕುಂದಿ ಸೇರಿದಂತೆ ಯಂಕಪ್ಪ ವಿಠ್ಠಲ ಇದ್ದರು.