ಸುರಪುರ: ಶ್ರೀಮಂತ ಬಡವ ಎಂದು ಭೇದ ಭಾವ ಮಾಡದೇ ಒಬ್ಬರಿಗೊಬ್ಬರು ಸಹಾಯ ಮಾಡಬೇಕು ಎಂದು ಜಿಲ್ಲಾ ಮೇಲ್ವಿಚಾರಕರಾದ ರೆವರೆಂಡ್ ಎಸ್ ಸತ್ಯಮಿತ್ರ ಹೇಳಿದರು.
ಸುರಪುರ ನಗರದ ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್ ನಲ್ಲಿ ನಡೆದ ಸುಗ್ಗಿಹಬ್ಬ ಆಚರಣೆಯ ಆರಾಧನೆಯಲ್ಲಿ ಮಾತನಾಡಿದ ಅವರು, ಲೋಕದಲ್ಲಿ ಎಲ್ಲರನ್ನು ಸಮಾನತೆಯಿಂದ ಕಾಣಬೇಕು. ಶ್ರೀಮಂತರಾದವರು ಬಡವರಿಗೆ ಸಹಾಯ ಮಾಡಬೇಕು. ತೆಗೆದುಕೊಳ್ಳುವುದಕ್ಕಿಂತ ಕೊಡುವುದರಲ್ಲಿ ತೃಪ್ತಿ ಕಾಣಬೇಕು ಅಂಥವರನ್ನು ದೇವರು ಆಶೀರ್ವದಿಸುತ್ತಾನೆ ಎಂದು ಹೇಳಿದರು.
ಈ ಸುಗ್ಗಿ ಹಬ್ಬದ ಆರಾಧನೆಯಲ್ಲಿ ವಿಶೇಷ ಹಾಡುಗಳು, ಮಕ್ಕಳಿಂದ ನೃತ್ಯ ಕಾರ್ಯಕ್ರಮಗಳು ಜರುಗಿದವು.ಈ ಆರಾಧನೆಯಲ್ಲಿ ಸಭಾಪಾಲಕರಾದ ರೆವರೆಂಡ್ ಪ್ರಕಾಶ್ ಹಂಚಿನಾಳ, ಸುನೀಲಾ ಶಾಂತಕುಮಾರ, ಮನೋಹರಮ್ಮ ಸತ್ಯಮಿತ್ರ, ಸುಜಾತ ಹಂಚಿನಾಳ, ಸೋನಾಸುಕುಮಾರಿ, ಆಲಿಸ್ ಜಾನವೆಸ್ಲಿ, ಸುಮತಿ ವಸಂತ, ಸುಜಾತ ಜಯಪ್ಪ, ಲಲಿತಾ ದೇವಪುತ್ರ, ಸುಕುಮಾರಿ ಇಮ್ಮಾನುವೇಲ್, ಸಾಗರಿಕ, ಅನಿತಾ ರಮೇಶ, ರೆಬೆಕ್ಕ,ಸ್ಟೆಲ್ಲಾ, ಸುನೀತಾ,ಪವಿತ್ರಾ, ರತ್ನಮ್ಮ,ಶಾಲಿನಿ, ಶೋಭಾ, ಸೌಮ್ಯ, ಎಸ್ತೆರ, ಮೆಥೋಡಿಸ್ಟ್ ಚರ್ಚನ ಮುಖಂಡರುಗಳಾದ ಸಾಮೂವೇಲ್ ಮ್ಯಾಥ್ಯೂ, ವಸಂತಕುಮಾರ, ಪಾಲನಾಯ್ಕ,ಅಮಿತ್ ಪಾಲ, ಜಯಪ್ಪ,ರಮೇಶ,ದೇವಪುತ್ರ, ಮಾನುವೆಲರಾಜ್ ತಂಗಪಾಂಡೆ, ವಿಜಯಕುಮಾರ, ಜಸ್ಟಿನ್ ಜಿಮ್ಮಿ, ಥಾಮಸ ಮ್ಯಾಥ್ಯೂ, ನವೀನಕುಮಾರ, ಹನೋಕ್, ನಿರ್ಮಲಕುಮಾರ, ಸುನಾಥ, ಪೀನಿಹಾಸ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.