ಕಲಬುರಗಿ: ಜೇವರ್ಗಿ ತಾಲೂಕಿನ ಹರನೂರ್ ಗ್ರಾಮ ಪಂಚಾಯತ ಕೇಂದ್ರ ಸ್ಥಾನವಾದ ಹರನೂರ್ ಗ್ರಾಮದಲ್ಲಿ ಮಹಾತ್ಮಾ ಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ 2025-26ನೇ ಸಾಲಿನ ಕಾರ್ಮಿಕ ಆಯವ್ಯಯ ಸಿದ್ದಪಡಿಸಲು ಮಂಗಳವಾರ ಗ್ರಾಮ ಸಭೆ ಜರುಗಿತು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಸಂಗೀತಾ ಪಿ. ಭಂಡಾರಿ ಅವರು, ಸ್ವಾಗತಿಸಿ ಗ್ರಾಮ ಸಭೆಯನ್ನು ಉದ್ದೇಶಿಸಿ ಪ್ರಸ್ತವಿಕವಾಗಿ ಮಾತನಾಡಿದರು, ಈಗಾಗಲೇ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಹರನೂರ್, ಹೆಗ್ಗಿನಾಳ, ನೀರಲ್ಕೋಡ್ ರೇವನೂರ್ ಮತ್ತು ಹಂಚಿನಾಳ ಗ್ರಾಮಗಳಲ್ಲಿ “ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ” ಅಭಿಯಾನದಡಿ ಮನೆ-ಮನೆಗೆ ಭೇಟಿ, ಕರಪತ್ರ, ಬಿತ್ತಿಪತ್ರ ಕ್ಯೂ ಆರ್ ಕೂಡ್ ಸ್ಕ್ಯಾನ್ ಬಳಸಿ ಬೇಡಿಕೆ ಸಲ್ಲಿಕೆ ಬಗ್ಗೆ ಐಇಸಿ ಕಾರ್ಯಕ್ರಮಗಳು ಹಮ್ಮಿಕೊಂಡು ವಾರ್ಡ್ ಸಭೆ ಮಾಡಿ ರೈತರು ಹಾಗೂ ಕೂಲಿ ಕಾರ್ಮಿಕರಿಂದ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿ ಬೇಡಿಕೆ ಬೇಡಿಕೆ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದರು.
ಇನ್ನೂ ಕಾಮಗಾರಿ ಬೇಡಿಕೆ ಸಲ್ಲಿಸದೇ ಇರುವರು ಈಗ ಬೇಡಿಕೆ ಸಲ್ಲಿಸಿ ಎಂದು ಹೇಳಿದರು. ನಂತರ ನರೇಗಾ ಯೋಜನೆ ತಾಲೂಕು ಐಇಸಿ ಸಂಯೋಜಕ ಚಿದಂಬರ ಪಾಟೀಲ್ ಅವರು ಮಾತನಾಡಿ, ಉದ್ಯೋಗ ಖಾತರಿ ಯೋಜನೆಯಲ್ಲಿ ಮತ್ತಷ್ಟು ಪರದರ್ಶಕತೆ ತರಲು ಈ ಬಾರಿ ಆನ್ಲೈನ್ ಕ್ರಿಯಾಯೋಜನೆ ಸಿದ್ದಪಡಿಸಲಾಗುತ್ತಿದ್ದು, ಸಾರ್ವಜನಿಕರು ಕ್ಯೂ.ಆರ್. ಕೋಡ್, ಆನಲೈನ್ ಮೂಲಕ ಕೂಲಿ ಹಾಗೂ ವೈಯಕ್ತಿಕ ಕಾಮಗಾರಿಗಳಿಗೆ ಬೇಡಿಕೆ ಸಲ್ಲಿಸಬೇಕು ಎಂದು ಹೇಳಿದರು.
ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ ಎಂದರು. ಇದೇ ವೇಳೆ ರೈತರು, ಕೂಲಿಕಾರರಿಂದ ಸ್ವೀಕೃತವಾದ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿ ಗುಚ್ಛದ ಬಗ್ಗೆ ಚರ್ಚಿಸಿ ಸಭೆಯನ್ನು ಮುಕ್ತಾಯಗೊಳಿಸಲಾಯಿತು.
ಗ್ರಾಮ ಪಂಚಾಯತ್ ಸದಸ್ಯ ಶಾಂತಯ್ಯ ರವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ , ಶಿವನಗೌಡ, ಲಕ್ಷ್ಮಣ, ಹಣಮಂತ್ರಾಯ್ ಸುಭೆಧಾರ್, ಬಸವರಾಜ್ ಗೊಗಿ, ಸೈಬಣ್ಣ ಗ್ರಾ. ಪಂ ಕಾರ್ಯದರ್ಶಿಗಳು ಕರಿಗುಳ್ಳೆಪ್ಪಾ ಸಿಂದಗಿ, ತೋಟಗಾರಿಕೆ ಇಲಾಖೆ ಎ ಎಚ್ ಓ ಶಿವಕುಮಾರ್, ಗ್ರಾ. ಪಂ ಸಿಬ್ಬಂದಿ ಹಾಗೂ ಗ್ರಾಮಸ್ಥರು ಹಾಜರಿದ್ದರು.