ಸಾಧನೆಗೆ ಕಠಿಣ ಪರಿಶ್ರಮ ಬೇಕು; ಜಿಲ್ಲಾ ಕಸಾಪ ದಿಂದ ಕಿರುತೆರೆ ನಟಿ ರಾಘವಿಗೆ ತವರು ಸನ್ಮಾನ

0
352

ಕಲಬುರಗಿ: ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಕಠಿಣ ಪರಿಶ್ರಮ ಅಗತ್ಯ ಎಂದು ಕಿರುತೆರೆ ನಟಿ ರಾಘವಿ ಅಭಿಮತ ವ್ಯಕ್ತಪಡಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತವರು ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ಕಲಬುರಗಿಯ ಮಗಳಾಗಿದ್ದೇನೆ. ತವರಿನಲ್ಲಿ ಸನ್ಮಾನ ಸಿಕ್ಕಿದ್ದು ನನಗೆ ಅತ್ಯಂತ ಸಂತಸವಾಗಿದೆ. ಇದೊಂದು ಎಂದೂ ಮರೆಯದ ಕ್ಷಣ ಎಂದು ಮಾರ್ಮಿಕವಾಗಿ ಹೇಳಿದರು.

Contact Your\'s Advertisement; 9902492681

ಉತ್ತರ ಕರ್ನಾಟಕದ ಕಲಾವಿದರು ಚಿತ್ರ ರಂಗದಲ್ಲಿ ಅವಕಾಶ ಪಡೆಯಬೇಕಾದರೆ ಹೋರಾಟ ಮಾಡಬೇಕಾಗುತ್ತಿದೆ. ಈ ಭಾಗದಲ್ಲಿ ಅನೇಕ ಪ್ರತಿಭಾವಂತ ಕಲಾವಿದರಿದ್ದಾರೆ. ಆದರೆ ಅವರಿಗೆ ಸೂಕ್ತ ವೇದಿಕೆ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕಲ್ಯಾಣ ನಾಡಿನಲ್ಲಿ ಪ್ರತಿಭೆಗಳಿಗೆ ಕೊರತೆವಿಲ್ಲ. ಅವರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವಾಗಬೇಕಿದೆ. ಹಾಗಾಗಿ ನಮ್ಮ ಭಾಗದ ಕಲಾವಿದರನ್ನು ಬೆಳೆಸುವುದು ಕನ್ನಡ ಸಾಹಿತ್ಯ ಪರಿಷತ್ತಿನ ಕರ್ತವ್ಯವಾಗಿದೆ. ಈ ನೆಲ ಪ್ರತಿಭಾವಂತರ ನಾಡಾಗಿದೆ. ಸಾಧಕರನ್ನು ಸತ್ಕರಿಸುವದರ ಜತೆಗೆ ಸಾಧಕರನ್ನಾಗಿ ನಿರ್ಮಿಸಲು ಪ್ರೇರಣೆ ಕೊಡುವ ಕಾರ್ಯವೂ ಸಹ ಪರಿಷತ್ತು ಮಾಡುತ್ತಿದೆ ಎಂದರು.

ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ತತ್ವಪದ ಗಾಯಕ ಅಮೃತಪ್ಪ ಅಣೂರ ಕವಿಗಳು, ನ್ಯಾಯವಾದಿ ಶಿವಲಿಂಗಪ್ಪ ಅಷ್ಟಗಿ, ವಿನೋದಕುಮಾರ ಜೇನವೇರಿ ಮಾತನಾಡಿದರು.

ಪ್ರಮುಖರಾದ ರಾಜೇಂದ್ರ ಮಾಡಬೂಳ, ಕಸಾಪ ದಕ್ಷಿಣ ವಲಯ ಅಧ್ಯಕ್ಷ ಶಾಮಸುಂದರ ಕುಲಕರ್ಣಿ, ಶಿವಾನಂದ ಸುರವಾಸಿ, ರಾಜು ಕೋಷ್ಟಿ, ಗಣೇಶ ಚಿನ್ನಾಕಾರ, ಪ್ರಭವ ಪಟ್ಟಣಕರ್, ಎಂ ಎನ್ ಸುಗಂಧಿ, ಮಂಜುನಾಥ ಕಂಬಾಳಿಮಠ, ಚಂದ್ರಶೇಖರ ಮ್ಯಾಳಗಿ, ಶ್ರೀನಿವಾಸ ಬಲ್ಪೂರ್, ಗೀತಾಂಜಲಿ ಮೈನಾಳೆ, ರಾಜಕುಮಾರ ಭಂಡಾರಿ, ಚಂದ್ರಕಾಂತ ಸೂರನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here