ಸರಕಾರ ವಕ್ಸ್ ಸಮಿತಿ ರಚಿಸಲಿ; ಭೀಮು ನೆಲೋಗಿ

0
73

ಕಲಬುರಗಿ: ‘ರಾಜ್ಯದಲ್ಲಿ ವಕ್ಸ್ ಅಸ್ತಿ ಅತಿಕ್ರಮಣ ಮತ್ತು ಕಬಳಿಕೆ ಆಗಿದ್ದು ವಕ್ಸ್ ಆಸ್ತಿಯನ್ನು ಉಳಿಸಿಕೊಳ್ಳಬೇಕಾದದ್ದು ಸರ್ಕಾರದ ಕರ್ತವ್ಯವಾಗಿದೆ. ವಕ್ಸ್ ಬಗ್ಗೆ ಜ್ಞಾನವಿಲ್ಲದ ಸಚಿವರು, ವಕ್ಸ್ ಬೋರ್ಡ್ ಚುನಾವಣಾ ಪ್ರಚಾರಕ್ಕಾಗಿ ವಕ್ಸ್ ಅದಾಲತ್‌ ನಡೆಸುವ ಮೂಲಕ ಗೊಂದಲ ಸೃಷ್ಟಿಸಿದ್ದಾರೆ. ಇದನ್ನು ಗಮನಿಸಿದರೆ ಸರ್ಕಾರವೇ ಸಾರ್ವಜನಿಕರ ಆಸ್ತಿ ಅತಿಕ್ರಮಣ ಮಾಡಿದಂತಾಗಿದೆ’ ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಜಿಲ್ಲಾ ಸಂಯೋಜಿಕರು ಭೀಮು ನೆಲೋಗಿ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ವಕ್ಸ್ ಮಂಡಳಿಯಿಂದ ಸಾರ್ವಜನಿಕರಿಗೆ ತೊಂದರೆ ಆಗಿದ್ದಲ್ಲಿ ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಸಮಿತಿ ರಚಿಸಿ ರಾಜ್ಯದಲ್ಲಿ ಕಬಳಿಕೆಯಾದ ಆಸ್ತಿಯ ವಿವರದ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ಅದನ್ನು ಬಿಟ್ಟು ವೋಟ್ ಬ್ಯಾಂಕ್ ರಾಜಕಾರಣ ಮಾಡುವುದು ಸರಿಯಲ್ಲ. ತಮ್ಮ, ತಮ್ಮ ರಾಜಕೀಯ ಪಕ್ಷಗಳ ಭೂಗಳ್ಳರನ್ನು ಉಳಿಸುವ ಸಲುವಾಗಿ ಈ ರೀತಿಯ ತಪ್ಪು ಮಾಹಿತಿ ಸಾರ್ವಜನಿಕರಲ್ಲಿ ಬಿಂಬಿಸುವುದು ಒಳ್ಳೆಯದಲ್ಲ ಎಂದಿದ್ದಾರೆ.

Contact Your\'s Advertisement; 9902492681

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಾಯಕರಿಗೆ ನೈತಿಕತೆ ಇದ್ದರೆ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವ‌ರ್ ಮಾನಪಾಡಿ ವರದಿ ಜಾರಿಗೆ ತರಲಿ, ಜಾರಿಗೆ ತರಲು ಹೋರಾಟ ಮಾಡಲಿ. ವಿಶೇಷವಾಗಿ ರಾಜ್ಯದಲ್ಲಿ ಬಿಜೆಪಿ ನಾಯಕರು ಜನರನ್ನು ದಾರಿ ತಪ್ಪಿಸುವ ಕಾರ್ಯ ಹಾಗೂ ಕೋಮುಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡುವುದು ಬಿಡ್ಲಿ ಎಂದು ಕೀವಿಹಿಂಡಿದ್ದ ಅವರು ವಕ್ಫ್ ವಿವಾದ ಬಗಿಹರಿಸಲು ಸರಕಾರ ವಕ್ಫ್  ಸಮಿತಿ ರಚಸಬೇಕೆಂದು ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here