ಶ್ರೀಮತಿ ಶಕುಂತಲಾ ಭೀಮಳ್ಳಿ ನಿಧನಕ್ಕೆ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ, ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ ಸಂತಾಪ

0
13

ಕಲಬುರಗಿ; ಹೈದರಾಬಾದ್ ಕರ್ನಾಟಕ ಎಜುಕೇಶನ್ ಸೊಸೈಟಿಯ ಮಾಜಿ ಅಧ್ಯಕ್ಷ ಬಸವರಾಜ ಭೀಮಳ್ಳಿ ಅವರ ಪತ್ನಿ ಶ್ರೀಮತಿ ಶಕುಂತಲಾ ಭೀಮಳ್ಳಿ ಅವರ ಅಕಾಲಿಕ ನಿಧನಕ್ಕೆ ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‍ಪರ್ಸನ್ ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕಲಬುರಗಿ ನಗರದಲ್ಲಿ ಶನಿವಾರ ಹೊರಡಿಸಿದ ಪ್ರಕಟಣೆಯಲ್ಲಿ ಪೂಜ್ಯ ಡಾ. ಅಪ್ಪಾಜಿ ಹಾಗೂ ಪೂಜ್ಯ ಡಾ. ಅವ್ವಾಜಿ ಅವರು, ಶ್ರೀಮತಿ ಶಕುಂತಲಾ ಭೀಮಳ್ಳಿಯವರು ಶುಕ್ರವಾರ ರಾತ್ರಿ ಕಲಬುರಗಿ ನಗರದ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಶ್ರೀಮತಿ ಶಕುಂತಲಾ ಭೀಮಳ್ಳಿ ಅವರ ಈ ಹಠಾತ್ ನಿಧನ ವೈಯಕ್ತಿಕವಾಗಿ ತುಂಬಲಾರದ ನಷ್ಟವಾಗಿದ್ದು, ದೇವರು ಅಗಲಿದ ಅವರ ಆತ್ಮಕ್ಕೆ ಶಾಂತಿ ದೊರಕಿಸಲಿ ಹಾಗೂ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಬಸವರಾಜ ದೇಶಮುಖ ಅವರು ಅಗಲಿದ ಶ್ರೀಮತಿ ಶಕುಂತಲಾ ಭೀಮಳ್ಳಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಶ್ರೀಮತಿ ಶಕುಂತಲಾ ಭೀಮಳ್ಳಿಯವರು ತಮ್ಮ ಪತಿ ಬಸವರಾಜ ಭೀಮಳ್ಳಿ, ಹೈದರಾಬಾದ್ ಕರ್ನಾಟಕ ಎಜುಕೇಶನ್ ಸೊಸೈಟಿಯ ಪ್ರಸಕ್ತ ಉಪಾಧ್ಯಕ್ಷರಾದ ರಾಜಾ ಭೀಮಳ್ಳಿ ಸೇರಿದಂತೆ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಡಾ. ಅಪ್ಪಾಜಿ ಮತ್ತು ಡಾ. ಅವ್ವಾಜಿಯವರ ಅಳಿಯ ರಾಜಾ ಭೀಮಳ್ಳಿಯವರು ಪೂಜ್ಯರ ಮಗಳಾದ ಶ್ರೀಮತಿ ಗೋದಾವರಿ ಭೀಮಳ್ಳಿ ಅವರನ್ನು ವಿವಾಹವಾಗಿದ್ದಾರೆ. ಮೃತರು ತಮ್ಮ ಮಗ ವಿನೋದ್ ಭೀಮಳ್ಳಿ, ಅವರ ಪತ್ನಿ ಶ್ರೀಮತಿ ನೀತಾ ಭೀಮಳ್ಳಿ ಹಾಗೂ ಮಗಳಾದ ಶ್ರೀಮತಿ ಪ್ರೀತಿ ಅಲ್ಲಂ ಸೇರಿದಂತೆ ಏಳು ಮೊಮ್ಮಕ್ಕಳನ್ನು ಸಹ ಅಗಲಿದ್ದಾರೆ.

ಶರಣಬಸವ ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್‍ನಲ್ಲಿ ಉಪಕುಲಪತಿ ಪೆÇ್ರ. ಅನಿಲಕುಮಾರ ಬಿಡವೆ ನೇತೃತ್ವದಲ್ಲಿ ವಿವಿಯ ಎಲ್ಲ ಅಧಿಕಾರಿಗಳೊಂದಿಗೆ ಸಂತಾಪ ಸೂಚಕ ಸಭೆಯನ್ನು ನಡೆಸಲಾಯಿತು ಮತ್ತು ವಿವಿಯ ಇತರ ಸಿಬ್ಬಂದಿ ಸೇರಿದಂತೆ ಇತರರು ಅಗಲಿದ ಆತ್ಮಕ್ಕೆ ಗೌರವ ಸೂಚಕವಾಗಿ ಒಂದು ನಿಮಿಷ ಮೌನಾಚರಣೆ ಆಚರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here