ಸುರಪುರ: ನಗರದ ಪೋಲಿಸ್ ಠಾಣೆ ಬಳಿ ಇರುವ ಟಿಪ್ಪು ಸುಲ್ತಾನ ಚೌಕ್‍ನಲ್ಲಿ ಟಿಪ್ಪು ಸುಲ್ತಾನ ಸೇವಾ ಸಂಘದ ನೇತೃತ್ವದಲ್ಲಿ ಟಿಪ್ಪು ಸುಲ್ತಾನ ಅವರ 275ನೇ ಜಯಂತಿಯನ್ನು ಆಚರಿಸಲಾಯಿತು.
ಹಾಫೀಸ್ ಅಬ್ದುಲ್ಲಾ ನೂರಿ ಮಾತನಾಡಿ ಬ್ರಿಟಿಷರೊಂದಿಗೆ ಹೋರಾಡಿದ ಟಿಪ್ಪು ಸುಲ್ತಾನ ರಣರಂಗದಲ್ಲಿ ವೀರ ಮರಣವನ್ನು ಹೊಂದಿದರು ವೀರಯೋಧ ಆಗಿದ್ದಾರೆ ಅವರ ಆಡಳಿತ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ಕೈಗೊಂಡರು ಎಂದು ಹೇಳಿದರು. ಖಾಜಾ ಖಲೀಲ್ ಅಹ್ಮದ ಅರಕೇರಿ ಅಧ್ಯಕ್ಷತೆ ವಹಿಸಿದ್ದರು.
ಎಮ್.ಪಟೇಲ,ದಾವೂದ್ ಪಠಾಣ,ಶ್ರೀನಿವಾಸ ನಾಯಕ ಬೊಮ್ಮನಳ್ಳಿ ಮಾತನಾಡಿದರು ಮುಖಂಡರುಗಳಾದ ಶಕೀಲ್ ಅಹ್ಮದ, ನಗರಸಭೆ ಸದಸ್ಯರಾದ ನಾಸೀರ್ ಹುಸೇನ ಕುಂಡಾಲೆ,ಮಹ್ಮದ ಗೌಸ್, ಶರೀಫ್ ಅಹ್ಮದ,ಖಮರುದ್ದಿನ್ ನಾರಾಯಣಪೇಟ,ರಾಜ ಮಹ್ಮದ,ಇಶಿತಿಯಾಕ್ ಹುಸೇನ ಸವಾರ,ಲಿಯಾಖತ್ ಹುಸೇನ ಉಸ್ತಾದ,ಮಹ್ಮದ ಮೌಲಾಲಿ ಸೌದಾಗರ,ಮಹ್ಮದ ಆರೀಫ್,ಇಸ್ಮಾಯಿಲ್,ಅಬೀದ್ ಹುಸೇನ ಪಗಡಿ,ಅಬೂಬಕರ,ಹಾಫೀಸ್ ಖಲೀಲುಲ್ಲಾ,ರಫೀಕ್ ಹವಾಲ್ದಾರ,ಮಶಾಕಸಾಬ ಒಂಟಿ ಇತರರು ಉಪಸ್ಥಿತರಿದ್ದರು. ಅನ್ವರ್ ಜಮಾದಾರ ನಿರೂಪಿಸಿದರು.