ವಾಡಿ; ಮಕ್ಕಳ ದಿನಾಚರಣೆ ಸಂಭ್ರಮ

0
22

ವಾಡಿ: ಮಾಜಿ ಪ್ರಧಾನಿ ಪಂಡೀತ್ ಜವಾಹರಲಾಲ್ ನೆಹರು ಅವರ ಜನ್ಮದಿನ ಪ್ರಯುಕ್ತ ಪಟ್ಟಣದ ವಿವಿಧ ಶಾಲೆಗಳಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು. ಶಿಕ್ಷಕರು ಮಕ್ಕಳಿಗಾಗಿ ಏರ್ಪಡಿಸಿದ್ದ ಸರಳ ಆಟಗಳು ಮತ್ತು ನೃತ್ಯ ಪ್ರದರ್ಶನಗಳು ಗಮನ ಸೆಳೆದವು. ಮಕ್ಕಳಿಗಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪುಟಾಣಿಗಳಿಗೆ ಶಾಲಾ ಆಡಳಿತ ಮಂಡಳಿಗಳ ಪದಾಧಿಕಾರಿಗಳು ಹಾಗೂ ಪಟ್ಟಣದ ಗಣ್ಯರು ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಿದರು.

ಕೆರಿತಾಂಡಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಚಾಚಾ ನೆಹರು ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿ ಮಾತನಾಡಿದ ಮುಖ್ಯಶಿಕ್ಷಕಿ ರೇಣುಕಾ ಬೇವಿನಮರ, ದೇಶದಾದ್ಯಂತ ಮಕ್ಕಳ ದಿನಾಚರಣೆ ಜಾರಿಗೆ ನೆಹರು ಕಾರಣರಾಗಿದ್ದಾರೆ. ಮಕ್ಕಳೆಂದರೆ ಪಂಚಪ್ರಾಣವಾಗಿಸಿಕೊಂಡಿದ್ದ ಅವರು ಮಕ್ಕಳಿಗಾಗಿ ಹಲವು ಕನಸುಗಳನ್ನು ಕಂಡಿದ್ದರು. ವೈಯಕ್ತಿಕ ಬದುಕು ಮತ್ತು ರಾಜಕೀಯ ಜೀವನದಲ್ಲಿ ಸಮಯ ಸಿಕ್ಕಾಗಲೊಮ್ಮೆ ಮಕ್ಕಳೊಂದಿಗೆ ಬಹಳ ಸರಳವಾಗಿ ಬೆರೆಯುತ್ತಿದ್ದರು. ನೆಹರು ಅವರ ಜೀವನ ನಮಗೆಲ್ಲ ಆದರ್ಶವಾಗಿದೆ ಎಂದರು.

Contact Your\'s Advertisement; 9902492681

ವಿದ್ಯಾರ್ಥಿನಿಯರು ಪ್ರಾರ್ಥನಾ ಗೀತೆ ಹಾಡಿದರು. ಶಿಕ್ಷಕರಾದ ಶಾಂತಮ್ಮ ಮಾನವಿ, ಅತಿಥಿ ಶಿಕ್ಷಕರಾದ ರಾಧಾ ರಾಠೋಡ, ಜಯಶ್ರೀಸ್ವಾಮಿ ಮಠಪತಿ, ಸೀತಾ ಹೇರೂರ, ಅಂಗನವಾಡಿ ಕಾರ್ಯಕರ್ತೆ ಅನ್ನಪೂರ್ಣ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅಲ್ಲದೆ ಶ್ರೀಶೈಲ ಮಲ್ಲಿಕಾರ್ಜುನ ವಿದ್ಯಾರ್ವಧಕ ಸಂಸ್ಥೆ, ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಕನ್ಯಾ ಪ್ರೌಢ ಶಾಲೆ, ಶ್ರೀಬಸವ ಆಂಗ್ಲ ಮಾಧ್ಯಮ ಶಾಲೆ, ಸಂತ ಅಂಬ್ರೋಸ್ ಕಾನ್ವೆಂಟ್ ಶಾಲೆ, ಅಂಬಾಭವಾನಿ ಶಿಕ್ಷಣ ಸಂಸ್ಥೆ, ಮಹಾತ್ಮಾ ಗಾಂಧಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ದಿನ ಆಚರಿಸಲಾಯಿತು. ಶಿಕ್ಷಕರಾದ ಶೇಖ್ ಅನ್ವರ್‍ಖಾನ್, ರಜನಿ ಪಾಟೀಲ, ಕವಿತಾ ಪಾಟೀಲ, ಶಿವುಕುಮಾರ ಮಲಕಂಡಿ, ಇಂದ್ರಾ ಜಿ.ಕೆ, ಜಯಾರಾಣಿ ವಸಂತಾ, ಡಾನ್ ಬಾಸ್ಕೊ, ಬಸವರಾಜ ಮೂಲಿಮನಿ, ಚಿದಾನಂದ ಮಠಪತಿ ಹಾಗೂ ಮುಖಂಡರಾದ ಶಾಂತಪ್ಪ ಶೆಳ್ಳಗಿ, ಶರಣಗೌಡ ಪಾಟೀಲ ಚಾಮನೂರ, ಅಣ್ಣಾರಾವ ಪಸಾರೆ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here