ಕಲಬುರಗಿ; 10 ಕೃತಿಗಳಿಗೆ `ಅಮ್ಮ ಪ್ರಶಸ್ತಿ’

0
23

ಕಲಬುರಗಿ; ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ `ಅಮ್ಮ ಪ್ರಶಸ್ತಿ’ಗೆ ವಿದ್ಯಾರಶ್ಮಿ ಪೆಲತ್ತಡ್ಕ, ಪ್ರಭಾವತಿ ದೇಸಾಯಿ, ವೀರೇಂದ್ರ ರಾವಿಹಾಳ್, ಪೂರ್ಣಿಮಾ ಮಾಳಗಿಮನಿ, ದ್ವಾರನಕುಂಟೆ ಪಾತಣ್ಣ, ಗುರುಪ್ರಸಾದ ಕಂಟಲಗೆರೆ, ಡಾ.ಪರವಿನ ಸುಲ್ತಾನಾ, ಡಾ.ಪ್ರಕಾಶ ಭಟ್, ಡಾ.ಎಚ್.ಎಸ್.ಸತ್ಯನಾರಾಯಣ ಹಾಗೂ ಮಂಜುನಾಥ ಚಾಂದ್ ಅವರ ಕೃತಿಗಳು ಆಯ್ಕೆಯಾಗಿವೆ ಎಂದು `ಅಮ್ಮ ಪ್ರಶಸ್ತಿ’ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿದ್ಯಾರಶ್ಮಿ ಪೆಲತ್ತಡ್ಕ (ಕೆರೆ-ದಡ), ಪ್ರಭಾವತಿ ದೇಸಾಯಿ (ಸೆರಗಿಗಂಟಿದ ಕಂಪು), ವೀರೇಂದ್ರ ರಾವಿಹಾಳ್ (ಡಂಕಲ್ ಪೇಟೆ), ಪೂರ್ಣಿಮಾ ಮಾಳಗಿಮನಿ (ಮ್ಯಾಜಿಕ್ ಸೌಟು), ದ್ವಾರನಕುಂಟೆ ಪಾತಣ್ಣ (ರಾಣಿ ಅಹಲ್ಯಾಬಾಯಿ ಹೋಳ್ಕರ್), ಗುರುಪ್ರಸಾದ ಕಂಟಲಗೆರೆ (ಅಟ್ರಾಸಿಟಿ), ಡಾ.ಪರವಿನ ಸುಲ್ತಾನಾ (ಶರಣರ ನಾಡಿನ ಸೂಫಿ ಮಾರ್ಗ), ಡಾ.ಪ್ರಕಾಶ ಭಟ್ (ಹಳ್ಳಿಗಳನ್ನು ಕಟ್ಟುವ ಕಷ್ಟ ಸುಖ), ಡಾ.ಎಚ್.ಎಸ್.ಸತ್ಯನಾರಾಯಣ (ಬಿದಿರ ತಡಿಕೆ) ಹಾಗೂ ಮಂಜುನಾಥ ಚಾಂದ್ (ಪ್ರಿಯ ಮೀರಾ) ಕೃತಿಗಳನ್ನು 24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.

Contact Your\'s Advertisement; 9902492681

ಪ್ರಶಸ್ತಿಯು ತಲಾ 2500 ರೂ. ನಗದು ಪುರಸ್ಕಾರ, ನೆನಪಿನ ಕಾಣಿಕೆ, ಪ್ರಮಾಣ ಪತ್ರ, ಸತ್ಕಾರ ಮತ್ತು ಈ ನೆಲದ ಸಿರಿಧಾನ್ಯ ತೊಗರಿ ಬೇಳೆ ಒಳಗೊಂಡಿರುತ್ತದೆ. ಎಲ್ಲ ವಿಭಾಗದಲ್ಲಿ ಲೇಖಕರು ಪ್ರಶಸ್ತಿಯನ್ನು ಹಂಚಿಕೊಂಡಿದ್ದು, ಇದೇ ನವೆಂಬರ್ 26 ರಂದು ಸಂಜೆ 5.30ಕ್ಕೆ ಸೇಡಮ್‍ನ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಜರುಗುವ ಸಮಾರಂಭದಲ್ಲಿ `ಅಮ್ಮ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಅಮ್ಮ ಪ್ರಶಸ್ತಿಗೆ 24 ರ ವರ್ಷದ ಸಂಭ್ರಮ : ಪತ್ರಕರ್ತ-ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ಅಮ್ಮನ ನೆನಪಿನಲ್ಲಿ ಸ್ಥಾಪಿಸಿದ `ಅಮ್ಮ ಪ್ರಶಸ್ತಿ’ಗೆ ಈಗ 24 ನೇ ವರ್ಷದ ಸಂಭ್ರಮ. ಕನ್ನಡದ ಪ್ರತಿಭಾವಂತ ಬರಹಗಾರರು `ಅಮ್ಮ ಪ್ರಶಸ್ತಿ’ಗಾಗಿ ತಮ್ಮ ಕೃತಿಗಳನ್ನು ಕಳುಹಿಸುವ ಮೂಲಕ ಪ್ರಶಸ್ತಿಯನ್ನು ಗುರುತಿಸಿದ್ದಾರೆ ಹಾಗೂ ಗೌರವಿಸಿದ್ದಾರೆ.  ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ `ಅಮ್ಮ ಪ್ರಶಸ್ತಿ’ ರಾಜ್ಯದ ಗಣನೀಯ ಪ್ರಶಸ್ತಿಗಳಲ್ಲಿ ಒಂದಾಗಬೇಕು ಎಂಬ ಪ್ರತಿಷ್ಠಾನದ ಆಶಯಕ್ಕೆ ಅನುಗುಣವಾಗಿ ನಾಡಿನ ಖ್ಯಾತ ಲೇಖಕರು, ಕವಿಗಳು, ಪ್ರಕಾಶಕರು ಮತ್ತು ಲೇಖಕರ ಅಭಿಮಾನಿ ಓದುಗರು ಸ್ಪಂದಿಸಿದ್ದೇ ಇದೊಂದು ಗೌರವಾನ್ವಿತ ಪ್ರಶಸ್ತಿಯಾಗಿ ರೂಪುಗೊಂಡಿದೆ ಎಂಬುದಕ್ಕೆ ಸಾಕ್ಷಿ ಎಂದು ಅವರು ತಿಳಿಸಿದ್ದಾರೆ. 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here