ರವಿ ಎನ್ ದೇಗಾಂವ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ

0
17

ಕಲಬುರಗಿ: ಕೆ ಪಿ ಆರ್ ಸಕ್ಕರೆ ಕಾರ್ಖಾನೆಯಿಂದ ಹೊರಬಿಡುತ್ತಿರುವ ಕಲುಷಿತ ನೀರು ಮತ್ತು ಕಲುಷಿತ ಗಾಳಿಯಿಂದ ಸುತ್ತಮುತ್ತಲಿನ ಗ್ರಾಮಸ್ಥರ ಜಮೀನುಗಳಿಗೆ ಹಾನಿಯಾಗಿರುವುದು ಮತ್ತು ಕಾರ್ಖಾನೆಯ ಹೊಲಸು ನೀರು ಸುತ್ತಮುತ್ತಲಿನ ಗ್ರಾಮಗಳಲ್ಲಿನ ಬೋರ್ವೆಲ್ ನೀರಿನಲ್ಲಿ ಬೆರೆತಿರುವ ಕುರಿತು. ಕರ್ನಾಟಕ ನವನಿರ್ಮಾಣ ಸೇನೆಯ ಜಿಲ್ಲಾಧ್ಯಕ್ಷ ರವಿ ಎನ್ ದೇಗಾಂವ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಅಫ್ಜಲ್‍ಪುರ್ ತಾಲೂಕಿನ ಚಿಣಮಗೇರಾದಲ್ಲಿರುವ ಕೆ.ಪಿ.ಆರ್. ಸಕ್ಕರೆ ಕಾರ್ಖಾನೆಯಿಂದ ಹೊರ ಬಿಡುತ್ತಿರುವ ಕಲುಷಿತ ನೀರು ಮತ್ತು ಕಲುಷಿತ ಗಾಳಿಯಿಂದಾಗಿ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ರೈತರಿಗೆ ವಿಪರಿತ ತೊಂದರೆಯಾಗುತ್ತಿದೆ. ಕಾರ್ಖಾನೆಯಿಂದ ಹೊರಬಿಡುವ ಕಲುಷಿತ ನೀರು ಸಂಪೂರ್ಣವಾಗಿ ಗ್ರಾಮದಲ್ಲಿ ಬರುತ್ತಿವೆ ಮತ್ತು ಕಾರ್ಖಾನೆಯ ಕಲುಷಿತ ಗಾಳಿಯಿಂದಾಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪರಿಸರ ಹದಗೆಡುತ್ತಿದೆ. ಅಲ್ಲದೆ ಕಾರ್ಖಾನೆಗೆ ಹೊಂದಿಕೊಂಡು ರೈತರ ಫಲವತ್ತಾದ ಜಮೀನುಗಳು ಇದ್ದು ಕಲುಷಿತ ಗಾಳಿಯಿಂದಾಗಿ ಬೆಳೆಗಳು ಹಾಳಾಗುತ್ತಿವೆ.

Contact Your\'s Advertisement; 9902492681

ಕೆ.ಪಿ.ಆರ್ ಪಕ್ಕದ ಜಮೀನು ಸರ್ವೆ ನಂಬರ್ 3/2, 150/3, 153/2, 154, 151,145 ಇವುಗಳು ಅಲ್ಲದೆ ಸುತ್ತಮುತ್ತಲಿನ ಎಲ್ಲಾ ಜಮೀನುಗಳಲ್ಲಿನ ಬೆಳೆಗಳು ಸುಟ್ಟು ಹೋಗಿರುತ್ತವೆ. ಮತ್ತು ಕಾರ್ಖಾನೆಯ ಹೊಲಸು ನೀರು ಮತ್ತು ಗಾಳಿಯಿಂದಾಗಿ ಜಮೀನುಗಳಲ್ಲಿ ಬೆಳೆಗಳು ಬೆಳೆಯುತ್ತಿಲ್ಲ ಮತ್ತು ಕಾರ್ಖಾನೆಯ ಹೊಲಸು ನೀರು ಸುತ್ತಮುತ್ತಲಿನ ಗ್ರಾಮಗಳಲ್ಲಿನ ಬೋರವೆಲ್ ನೀರಿನಲ್ಲಿ ಬೆರೆತುಕೊಂಡಿದ್ದು ಇದರಿಂದಾಗಿ ಗ್ರಾಮಸ್ಥರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.

ಕಾರ್ಖಾನೆ ಪ್ರಾರಂಭದ ಸಮಯದಲ್ಲಿ ರೈತರ ಜಮೀನು ಖರೀದಿ ಮಾಡುವಾಗ ಕಾರ್ಖಾನೆಯಲ್ಲಿ ಸ್ಥಳೀಯರಿಗೆ ಉದ್ಯೋಗವಕಾಶ ನೀಡುವಂತೆ ಆಶ್ವಾಸನೆ ನೀಡಲಾಗಿತ್ತು ಆದರೆ ಇಲ್ಲಿಯವರೆಗೂ ಸ್ಥಳೀಯರಿಗೆ ಉದ್ಯೋಗ ನೀಡಿರುವುದಿಲ್ಲ ತಮ್ಮ ಕಾರ್ಖಾನೆಯಿಂದಾಗಿ ಸಾರ್ವಜನಿಕರಿಗೆ ದೈಹಿಕ ಮತ್ತು ಮಾನಸಿಕ ತುಂಬಾ ತೊಂದರೆಗಳು ಆಗುತ್ತಿವೆ. ತಾವುಗಳು ಕೂಡಲೇ ಈ ಮೇಲೆ ತೋರಿಸಿರುವ ಎಲ್ಲಾ ಲೋಪ ದೋಷಗಳನ್ನು ಸರಿಪಡಿಸಿಕೊಳ್ಳಬೇಕು. ಇಲ್ಲವಾದರೆ ಜಿಲ್ಲಾಧಿಕಾರಿಗಳ ಕಛೇರಿ ಎದುರು ಕರ್ನಾಟಕ ನವ ನಿರ್ಮಾಣ ಸೇನೆಯ ವತಿಯಿಂದ ಉಗ್ರವಾದ ಹೋರಟ ನಡೆಸಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಂತೋಷ್ ಪಾಟೀಲ್, ಬಸವರಾಜ್ ಪಾಟೀಲ್ ದುದನಿ, ಶೇಖರ್ ವದ್ರಗಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here