ಅಂಕದ ಜೊತೆಗೆ ಕ್ರೀಡೆಯು ಇರಲಿ: ಡಾ. ಸದಾನಂದ ಪೆರ್ಲ

0
12

ಕಲಬುರಗಿ : ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುವುದರಿಂದ ಪಾಲಕರು ತಮ್ಮ ಮಕ್ಕಳನ್ನು ಕೇವಲ ಅಂಕದ ಬೆನ್ನ ಹಿಂದೆ ಓಡುವಂತೆ ಮಾಡದೆ ಜೀವನದಲ್ಲಿ ಕ್ರೀಡೆ ಕೂಡ ಅವಿಭಾಜ್ಯ ಅಂಗವಾಗಬೇಕು ಎಂಬುದನ್ನು ತಿಳಿಸಿಕೊಡುವ ಗುರುತರ ಜವಾಬ್ದಾರಿ ಇದೆ ಎಂದು ಆಕಾಶವಾಣಿಯ ವಿಶ್ರಾಂತಿ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿಗಳಾದ ಡಾ. ಸದಾನಂದ ಪೆರ್ಲ ಹೇಳಿದರು.

ಕಲ್ಬುರ್ಗಿಯ ದರ್ಶ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದೊಂದಿಗೆ ಪ್ರಮೋದ್ ಚೆಸ್ ಅಕಾಡೆಮಿಯು ನವೆಂಬರ್ ಹತ್ತರಂದು ಕಲ್ಬುರ್ಗಿಯಲ್ಲಿ ಏರ್ಪಡಿಸಿದ ಹದಿನಾರರ ಕೆಳ ಹರೆಯದವರ ಪಂದ್ಯಾಟದಲ್ಲಿ ಬಹುಮಾನ ವಿತರಿಸಿ ಮಾತನಾಡಿ ತಾಳ್ಮೆ, ತಂತ್ರಗಾರಿಕೆ ಹಾಗೂ ಬೌದ್ಧಿಕ ವಿಕಾಸಕ್ಕೆ ಚೆಸ್ ಉತ್ತಮ ಕ್ರೀಡೆಯಾಗಿದೆ. ಪಾಲಕರು ತಮ್ಮ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒತ್ತು ನೀಡಲು ಕ್ರೀಡೆಯ ಆಸಕ್ತಿಯನ್ನು ಬೆಳೆಸಬೇಕು ಕಲಬುರ್ಗಿ ವಿಭಾಗವು ಕ್ರೀಡೆಯಲ್ಲಿ ಹಿಂದುಳಿದಿದೆ ಎಂಬ ಹಣೆಪಟ್ಟಿಯನ್ನು ತೊಡೆದು ಹಾಕಲು ಪ್ರಯತ್ನಿಸಬೇಕಾಗಿದೆ.

Contact Your\'s Advertisement; 9902492681

ಈ ಪಂದ್ಯಾಟದಲ್ಲಿ 165 ಮಕ್ಕಳು ಸ್ಪರ್ಧಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದ್ದು ಮುಂದಿನ ದಿನಗಳಲ್ಲಿ ರಾಜ್ಯ ಅಂತಾರಾಜ್ಯ ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲಿ ಕಲ್ಬುರ್ಗಿಯ ಪ್ರತಿಭೆ ಗುರುತಿಸುವಂತಾಗಬೇಕು ಎಂದು ಡಾ.ಪೆರ್ಲ ಶುಭ ಹಾರೈಸಿದರು.

ಐ ಎಂ ಎ ಅಧ್ಯಕ್ಷರಾದ ಡಾ. ಗುರುಲಿಂಗಪ್ಪ ಪಾಟೀಲ್ ಮಾತನಾಡಿ ದರ್ಶ್ ಆಸ್ಪತ್ರೆ ಹಾಗೂ ಪ್ರಮೋದ್ ಚೆಸ್ ಅಕಾಡೆಮಿಯು ಮಕ್ಕಳಲ್ಲಿ ಉತ್ತಮ ಅಭಿರುಚಿ ಬೆಳೆಸುತ್ತಿರುವುದು ಶ್ಲಾಘನೀಯವಾದದ್ದು ಮತ್ತು ಪಾಲಕರು ಮಕ್ಕಳ ಬಗ್ಗೆ ತೋರಿದ ಕಾಳಜಿಗೆ ಪ್ರಶಂಸೆ ವ್ಯಕ್ತಪಡಿಸಿದರು. ದರ್ಶ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕರಾದ ಸಂತೋಷ್ ವರ್ಗೀಸ್ ಮಾತನಾಡಿ ಈ ಪಂದ್ಯಾಟವನ್ನು ಭಾರಿ ಯಶಸ್ವಿಗೊಳಿಸಿದ ಮಕ್ಕಳು ಮತ್ತು ಪಾಲಕರನ್ನು ಅಭಿನಂದಿಸಿದರು.

ಪ್ರಮೋದ್ ಚೆಸ್ ಅಕಾಡೆಮಿಯ ಮುಖ್ಯಸ್ಥರಾದ ಪ್ರಮೋದ್ ಬಹುಮಾನದ ಪಟ್ಟಿಯನ್ನು ವಾಚಿಸಿದರು. ಡಾ. ಶಶಾಂಕ್ ರಾಮದುರ್ಗ ಧನ್ಯವಾದವಿತ್ತರು. ಜೀವನ್ ರಾಡ್ರಿಗಸ್, ಯಶವಂತ್ ಶೆಟ್ಟಿ ಹರೀಶ್ ಮತ್ತಿತರು ಉಪಸ್ಥಿತರಿದ್ದರು.

ಸ್ಪರ್ಧೆಯಲ್ಲಿ ,7,9,11,13 ಮತ್ತು 16 ವರ್ಷದ ಕೆಳಗಿನ ಮಕ್ಕಳು ಭಾಗವಹಿಸುವ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪ್ರತಿಸ್ಪರ್ಧೆಯಲ್ಲಿ ಐದು ಬಹುಮಾನಗಳಿದ್ದು ಒಟ್ಟು 50 ಬಹುಮಾನಗಳನ್ನು ವಿತರಿಸಲಾಯಿತು. ಶ್ರೇಯಸ್ ಸದ್ದು ಮತ್ತು ಲಕ್ಷ್ಮಿ ರೋನಾಡ್ ವೈಯಕ್ತಿಕ ಚಾಂಪಿಯನ್ ಶಿಪ್ ಗೆದ್ದರು. 43 ಮಕ್ಕಳು ಭಾಗವಹಿಸಿದ ಎಸ್ ಆರ್ ಎನ್ ಮೆಹ್ತಾ ಶಾಲೆ ಪ್ರಥಮ ಹಾಗೂ 39 ವಿದ್ಯಾರ್ಥಿಗಳು ಭಾಗವಹಿಸಿದ ಕೆನ್ ಬ್ರಿಡ್ಜ್ ಶಾಲೆ ದ್ವಿತೀಯ ಬಹುಮಾನಗಳನ್ನು ಹಂಚಿಕೊಂಡವು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here