ನ. 18ರಂದು ಕನಕದಾಸ ಜಯಂತಿ ಆಚರಣೆ

0
18

ಕಲಬುರಗಿ: ಸಂತ ಶ್ರೇಷ್ಠ ಕನಕದಾಸರ 537ನೇ ಜಯಂತಿಯನ್ನು ನವೆಂಬರ್ 18ರಂದು ಕಲಬುರಗಿಯಲ್ಲಿ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ಪ್ರದೇಶ ಕುರುಬ ಸಂಘದ ಅಧ್ಯಕ್ಷ ಗುರುನಾಥ ಮಣಿಗೇರಿ ಅವರು ತಿಳಿಸಿದ್ದಾರೆ.

ನವೆಂಬರ್ 18ರಂದು ಕರ್ನಾಟಕ ಪ್ರದೇಶ ಕುರಿತು ಸಂಘ ಹಾಗೂ ಸರ್ಕಾರದ ಸಂಯುಕ್ತಾಶ್ರಯದಲ್ಲಿ ಭವ್ಯ ಮೆರವಣಿಗೆ ಹಾಗೂ ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಬೃಹತ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಅಂದು ನಡೆಯುವ ಕಾರ್ಯಕ್ರಮಕ್ಕೆ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಅಲ್ಲಮಪ್ರಭು ಪಾಟೀಲ್ ಸೇರಿದಂತೆ ಅನೇಕ ಮಠಾಧೀಶರು ಹಾಗೂ ರಾಜಕೀಯ ಗಣ್ಯರು, ಸಮುದಾಯದ ಮುಖಂಡರು ಭಾಗವಹಿಸಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Contact Your\'s Advertisement; 9902492681

ಮುಖಂಡರಾದ ಬಿ‌.ಕೆ. ಪಾಟೀಲ್, ರವಿಗೊಂಡ ಕಟ್ಟಿಮನಿ, ಗಣಪತಿ ಮಿಣಜಗಿ, ನಾಗೇಂದ್ರಪ್ಪ ಪೂಜಾರಿ, ಪ್ರಭು ಜುಮ್ಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here