ವಿವಿಧ ಕ್ಷೇತ್ರದ ಸಾಧಕರಿಗೆ ಸೇವಾರತ್ನ ಪ್ರಶಸ್ತಿ ಪ್ರದಾನ ನ.24 ರಂದು

0
16

ಕಲಬುರಗಿ: ಖ್ಯಾತ ಶಿಕ್ಷಣತಜ್ಞ ದಿ: ಪೆÇ್ರ :ಶಂಕರಲಿಂಗ ಹೆಂಬಾಡಿ’ಯವರು ಸಂಸ್ಥಾಪಿತ ಡಾ.ರಾಜಕುಮಾರ ಸಾಹಿತ್ಯಿಕ ಮತ್ತು ಸಾಂಸ್ಕ್ರತಿಕ ಕಲಾ ಸಂಘ ರಾಜಾಪೂರ-ಕಲಬುರಗಿ ವತಿಯಿಂದ 69 ನೇ ಕರ್ನಾಟಕ ರಾಜ್ಯೋತ್ಸವ ಸಂಭ್ರಮಾಚರಣೆಯ ನಿಮಿತ್ತ ಕಲಬುರ್ಗಿಯ ರಂಗಾಯಣ ಸಭಾ ಭವನದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 10.30ಕ್ಕೆ ವಿವಿಧ ಕ್ಷೇತ್ರದ ಸಾಧಕರಾದ ಅಮರಾವತಿ ಹಿರೇಮಠ, ಚನ್ನಬಸಪ್ಪ ಮಾಲಿಪಾಟೀಲ, ಸಂತೋಷ ನಗನೂರು, ಡಾ.ಬಿ.ಆರ್ ತಳವಾರ,  ಶರಣಬಸಮ್ಮ ರೆಡ್ಡಿ, ಅಶೋಕ ಕುಮಾರ್ ಹೂವಿನಬಾವಿ, ಗುಂಡಪ್ಪ ಅವಂಟಿ, ನಿವಾಸ ಮಿಸ್ಕಿನ್, ಜಾಂತಿಕರ್ ಬಾಬುರಾವ್ ಶರಣಬಸಪ್ಪ ಪರಮಗೊಂಡ ಸಂಜು ಕುಮಾರ್ ಗುತ್ತೇದಾರ ಪವನಕುಮಾರ ಪಾಟೀಲ ಇವರಿಗೆ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

Contact Your\'s Advertisement; 9902492681

ಸುಮಾರು 7 ಜನರಿಗೆ ಹೃದಯಸ್ಪರ್ಶಿ ಸನ್ಮಾನವಿದ್ದು,ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪ.ಪೂ  ಗುರುರಾಜೇಂದ್ರ ಶಿವಯೋಗಿಗಳು ವಹಿಸಲಿದ್ದು ಉದ್ಘಾಟಕರಾಗಿ ಮತಿ ಅಮರೇಶ್ವರಿ ಬಾಬುರಾವ ಚಿಂಚನಸೂರ ಆಗಮಿಸುವರು,ಡಾ.ಸಂತೋಷ ಭೀಮರಾವ ತೇಗಲತಿಪ್ಪಿ ಪ್ರಶಸ್ತಿ ಪ್ರದಾನ ಮಾಡಲಿದ್ದು, ಡಾ.ವಿಜಯಕುಮಾರ ಗೋತಗಿ ಅಧ್ಯಕ್ಷತೆಯನ್ನು ವಹಿಸುವರು.

ವಿಶೇಷ ಉಪನ್ಯಾಸಕರಾಗಿ ಡಾ.ಧನರಾದ ನೀಲಾ ಮಿನಕೇರಾ ಹಾಗೂ ಮುಖ್ಯ ಅತಿಥಿಗಳಾಗಿ  ಭೀಮಣ್ಣ ಹೆಚ್ ದೋರನಹಳ್ಳಿ, ಗುಂಡಣ್ಣ ಡಿಗ್ಗಿ ಹರಸೂರ, ಖುರ್ಷಿದಮಿಯ್ಯಾ ಚಿಂಚೋಳಿ, ರಾಜಶೇಖರ ಮುಸ್ತಾರಿ ಮತಿ ರಾಜಕುಮಾರಿ ಸುಕೃತರಾಜ ಡಾ.ವೀಣಾ ಪಾಟೀಲ್  ಮತಿ ಶರಣಮ್ಮ ಹೆಂಬಾಡಿ ಆಗಮಿಸುವರು,ನಂತರ ನಾಡಿನ ಹೆಸರಾಂತ ಕಲಾವಿದರಿಂದ ನಗೆಹಬ್ಬ ,ಜಾನಪದ ನೃತ್ಯ,ಕನ್ನಡಪರ ಗೀತೆಗಳ ಗಾನಯಾನ ನಡೆಯಲಿದ್ದು ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು, ಸಂಘದ ಅಧ್ಯಕ್ಷರಾದ ಪೆÇ್ರೀ: ರಮೇಶ.ಬಿ.ಯಾಳಗಿ ಕಾರ್ಯದರ್ಶಿಗಳಾದ  ಯಲ್ಲಾಲಿಂಗ ಝ.ದಂಡಿನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here