ಸೇಡಂ ಮತಕ್ಷೇತ್ರದಲ್ಲಿ ನಡೆದ 4 ಗ್ರಾ.ಪಂ ಉಪಚುನಾವಣೆ ಬಿಜೆಪಿ ಗೆಲುವು

0
17

ಕಲಬುರಗಿ : ಸೇಡಂ ಮತಕ್ಷೇತ್ರದ ವ್ಯಾಪ್ತಿಯ ಕರ್ಚಖೇಡ, ಕಾನಗಡ್ಡ,ಮದನ, ಮುಧೋಳ ಗ್ರಾ.ಪಂ‌‌ನ ಉಪ ಚುನಾಚುನಾವಣೆಯಲ್ಲಿ ಬಿ.ಜೆ.ಪಿ ಬೆಂಬಲಿತ ಅಭ್ಯರ್ಥಿಗಳು‌ ಜಯ ಘಳಿಸಿದ್ದಾರೆ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ತಿಳಿಸಿದರು.

ಈ‌ ಕುರಿತು ಪತ್ರಿಕಾ ಪ್ರಕಟಣೆ ಹೊರಡಿರುವ ಅವರು ಕಚ೯ಖೇಡ ಗ್ರಾ.ಪಂ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶ್ರೀಮತಿ ರೇಣುಕಾ ಶಂಕರ್ ಮುತ್ತಂಗಿ ಅವರು 188 ಮತಗಳ ಅಂತರದಿಂದ ಜಯಶಾಲಿಯಾಗಿದ್ದಾರೆ,

Contact Your\'s Advertisement; 9902492681

ಕಾನಗಡ್ಡ ಗ್ರಾಮ ಪಂಚಾಯಿತಿಯ ಯನಗುಂದಿ ಗ್ರಾಮದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾದ ರಾಜಶೇಖರ್ ಆವಂಟಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ, ಶ್ರೀಮತಿ ಅನಿತಾ ಗಂಡ ಶಾಮಪ್ಪ ಮದನ ಗ್ರಾಮ ಪಂಚಾಯತನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ 112 ಮತಗಳ ಅಂತರದಿಂದ ಜಯಗಳಿಸಿದ್ದಾರೆ, ಮುಧೋಳ ಗ್ರಾಮ ಪಂಚಾಯತಿಗೆ ನಡೆದ ಉಪಚುನಾವಣೆಯಲ್ಲಿ ಶ್ರೀಮತಿ ಲಲಿತ ಗಂಡ ಕಿಷ್ಟಪ್ಪ ಅವರು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ 341 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ 18 ತಿಂಗಳಲ್ಲಿ ಜನತೆ ತತ್ತರಿಸಿ ಹೋಗುವಂತಾಗಿದೆ. ರಾಜ್ಯ ಸರ್ಕಾರದ ನಡವಳಿಕೆ, ಧೋರಣೆ, ಕಾರ್ಯವೈಖರಿಯು ಸಮಾಜಕ್ಕೆ ನಿರಾಸೆ ತಂದಿದೆ. ರಾಜ್ಯ ಸರ್ಕಾರ ಜನವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಕಾನೂನು, ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಸಮಾಜವಿರೋಧಿ ಶಕ್ತಿಗಳನ್ನು ಹೇಳುವವರು, ಕೇಳುವವರಿಲ್ಲವಾಗಿದೆ. ಇಡೀ ಕರ್ನಾಟಕದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಸೇಡಂ ಮತಕ್ಷೇತ್ರದಲ್ಲಿ ಸಚಿವರು ಅಭಿವೃದ್ಧಿ ಯಲ್ಲಿ‌ ರಾಜಕೀಯ ಮಾಡಿಕೊಂಡು ಬರುತ್ತಿದ್ದಾರೆ, ಅಭಿವೃದ್ಧಿ ಕಾಮಗಾರಿಗಳಾದ ರಸ್ತೆ ನಿರ್ಮಾಣ ಚರಂಡಿ ನಿರ್ಮಾಣ ನಿರ್ಮಿಸುವ ಕಾಮಗಾರಿಯಲ್ಲೂ ಬಿಜೆಪಿ ಕಾರ್ಯಕರ್ತರ ಮನೆ ಮುಂದೆ ಕಾಮಗಾರಿ‌ ಮಾಡುತ್ತಿಲ್ಲಾ ಈ ರೀತಿಯ ರಾಜಕೀಯ ಸ್ಥಳೀಯ ಸಚಿವರು ಮಾಡುತ್ತಿದ್ದಾರೆ ಇವರ ಈ ನಡೆಯಿಂದ ಸ್ಥಳೀಯ ಜನರು ಬೆಸತ್ತು 18 ತಿಂಗಳಲ್ಲೆ ಕಾಂಗ್ರೆಸ್ ವಿರುದ್ದ ಜನ ತಿರ್ಪೂ ನೀಡಿರುವುದು ಈ ಚುನಾವಣೆಯ ಫಲಿತಾಂಶ ನಿರ್ದೆಶನ‌ ಎಂದು ಹೇಳಿದರು.

ಸೇಡಂ ಮತಕ್ಷೇತ್ರದಲ್ಲಿ ಸಚಿವರು ಆಯ್ಕೆ ಆಗಿ 18 ತಿಂಗಳು ಕಳೆದರು ಅಭಿವೃದ್ಧಿ ಮಾತ್ರ ಶೂನ್ಯ ಆಗಿದೆ, ಸಚಿವರು ಅಭಿವೃದ್ಧಿ ಬಿಟ್ಟು ಕೇವಲ‌ ಭೂತ ಮಟ್ಟದಿಂದ ಧ್ವೇಶದ ರಾಜಕೀಯ ಮಾಡಿಕೊಂಡು ಬರುತ್ತಿದ್ದಾರೆ, ಇವರ ದ್ವೇಶದ ರಾಜಕೀಯಕ್ಕೆ ಕ್ಷೇತ್ರದ ಅಮಾಯಕ ಜನ ಬೆಸತ್ತಿದ್ದು , ಗ್ರಾ.ಪಂ ಉಪ ಚುನಾವಣೆಯಲ್ಲಿ ಜನ ಬಿಜೆಪಿ ಕಡೆ ಮತ ಚಲಾಯಿಸಿ ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲಿಸಿದ್ದಾರೆ. – ರಾಜಕುಮಾರ ಪಾಟೀಲ್ ತೇಲ್ಕೂರ, ಮಾಜಿ ಶಾಸಕರು ಸೇಡಂ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here