ಮಹಿಳೆಯರ ಘನತೆ ಹಾಗೂ ಮಾನವ ಮೌಲ್ಯ ಉಳಿಸಿ ಪುಸ್ತಕ ಬಿಡುಗಡೆ

0
17

ಶಹಾಬಾದ: ಮಾನವೀಯ ಮೌಲ್ಯಗಳು ವಿದ್ಯಾರ್ಥಿ ಯುವಜನರ ಬೆಳೆಸಿಕೊಂಡು ಉತ್ತಮ ನಾಗರಿಕರಾಗಬೇಕೆಂದು ಎಸ್ಎಸ್ ಮರುಗೋಳ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಕೆ.ಬಿ. ಬಿಲ್ಲವ ಹೇಳಿದರು ಅವರು ಆಲ್ ಇಂಡಿಯಾ ಡೆಮೊಕ್ರೆಟಿಕ್ ಯೂಥ್ ಆರ್ಗನೈಸೇಷನ್ ಎಐಡಿವೈಒ ಶಾಹಾಬಾದ್ ಸ್ಥಳೀಯ ಸಮಿತಿಯು ಹಮ್ಮಿಕೊಂಡಿದ್ದ ಸಂಘಟನೆಯ ವಿಶೇಷ ಸಂಚಿಕೆಯಾದ ಮಹಿಳೆಯರ ಘನತೆ ಹಾಗೂ ಮಾನವ ಮೌಲ್ಯ ಉಳಿಸಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹೊಸ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

ಮುಂದುವರೆದ ಈ ಪುಸ್ತಕದಲ್ಲಿ ಮಾಜಿ ಲೋಕಾಯುಕ್ತರಾದ ಸಂತೋಷ್ ಹೆಗಡೆಯವರ ಭಾಷಣ ಹಾಗೂ ಮನೋವೈದ್ಯರಾದ ಡಾಕ್ಟರ್ ವಸಂತ್ ನಡಹಳ್ಳಿ ಭಾಷಣ ಹಾಗೂ ಸಂವಾದ ಕಾರ್ಯಕ್ರಮದ ವಿಷಯಗಳು ಬರಹ ರೂಪದಲ್ಲಿದ್ದು ಬಹಳ ಉತ್ತಮವಾದ ವಿಚಾರಗಳಿದ್ದು ವಿದ್ಯಾರ್ಥಿಗಳು ಓದಿ ತಿಳಿದುಕೊಳ್ಳಬೇಕೆಂದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಎ ಐ ಡಿ ವೈ ಓ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಜಗನ್ನಾಥ ಎಸ್ ಹೆಚ್ ರವರು ಮಾತನಾಡುತ್ತಾ ಸಮಾಜದಲ್ಲಿ ಮಹಿಳೆಯರ ಮೇಲೆ ದೌರ್ಜನಗಳು ಹೆಚ್ಚಾಗುತ್ತಿದ್ದು ಹಾಗೂ ಮಾನವೀಯ ಮೌಲ್ಯಗಳು ಕುಸಿಯುತ್ತಿರುವುದು ಬಹಳ ನೋವಿನ ವಿಷಯ ಎಂದ ಅವರು ಸಮಾಜದಲ್ಲಿ ಆಧುನಿಕ ತಂತ್ರಜ್ಞಾನ ಬೆಳದಂತೆ ಬಹಳ ಸುಲಭವಾಗಿ ಅಸಭ್ಯವಾದ ಸಿನಿಮಾ ಸಾಹಿತ್ಯ ಯುವಜನರಿಗೆ ಸಿಗುತ್ತದೆ ಇಂಥವೆಲ್ಲ ಸರ್ಕಾರ ನಿಷೇಧಿಸಬೇಕೆಂದರು ಮಹಾನ್ ವ್ಯಕ್ತಿಗಳಾದ ಭಗತ್ ಸಿಂಗ್ ನೇತಾಜಿ ಮೇಡಂ ಮೇರಿ ಕ್ಯೂರಿ, ಆಲ್ಬರ್ಟ್ ಐನ್ಸ್ಟೇನ್ ಇವರ ವಿಚಾರಗಳು ವಿದ್ಯಾರ್ಥಿ ಯುವಜನರು ತಿಳಿದುಕೊಂಡು ಅನ್ಯಾಯದ ವಿರುದ್ಧ ಹೋರಾಡಬೇಕೆಂದರು

ವೇದಿಕೆ ಮೇಲೆ ಪ್ರೊ. ಸುರೇಖಾ ನಾಟೇಕರ್ ಉಪನ್ಯಾಸಕರಾದ ರೇಖಾ ಪಾಟೀಲ್ ಹಾಗೂ ಶಹಾಬಾದ್ ಕಾರ್ಯದರ್ಶಿಗಳಾದ ರಮೇಶ್ ದೇವಕರ್ ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಪ್ರೊ. ಶಿವಕುಮಾರ್ ಕುಸಾಳೆ ಉಪನ್ಯಾಸಕರದ ಸಂಗಮೇಶ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here