ಕರ್ಜಗಿ (ಕಲಬುರಗಿ): ನ.28 ಅಫಜಲಪುರ ತಾಲ್ಲೂಕಿನ ಸುಕ್ಷೇತ್ರ ಕುಬೇರ ಕರಜಗಿ ಗ್ರಾಮದ ಹಜರತ್ ಖ್ವಾಜಾ ಸೈಫನ್ ಮುಲ್ಕ 891 ಜಾತ್ರೆ (ಉರೂಸ್) ಮಹೋತ್ಸವು ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿಯಲ್ಲಿ ಗುರುವಾರ ಭಕ್ತಿಭಾವದಿಂದ ಜರುಗಿತು.
ಗ್ರಾಮದ ಹೃದಯ ಭಾಗದಿಂದ ಬುಧವಾರ ರಾತ್ರಿ ಗಂಧ ಹೋತ್ತ ಜೋಡೆತ್ತಿನ ಬಂಡಿ ಗ್ರಾಮದ ಪ್ರಮುಖ ಬೀದಿಗಳಿಂದ ಸಾಗಿ ಮಧ್ಯರಾತ್ರಿ ಪಕ್ಕದ ಮಹಾರಾಷ್ಟ್ರದ ಹೈದರಾ ಗ್ರಾಮಕ್ಕೆ ಹೋಗಿ ಅಲ್ಲಿ ಧಾರ್ಮಿಕ ವಿಧಿ ವಿಧಾನಗಳ ಪೂರೈಸಿ ಮರುದಿನ ಅಂದರೆ ಗುರುವಾರ ಮುಂಜಾನೆ ಹೈದರಾ ಗ್ರಾಮದಿಂದ ಹೊರಟು ಕುಬೇರ ಕರ್ಜಗಿ ಗ್ರಾಮದ ಮುಖ್ಯ ದಾರಕ್ಕೆ ಆಗಮಿಸಿ ಅಲ್ಲಿಂದ ಭವ್ಯ ಮೆರವಣಿಗೆ ಮೂಲಕ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಹಜರತ್ ಖ್ವಾಜಾ ಮಲ್ಕ್ ಸೈಫನ್ ದರ್ಗಾ ಆಗಮಿಸಿ ಬಳಿಕ ಗ್ರಾಮಸ್ಥರು ನೈವೇದ್ಯ ಮತ್ತು ಕಾಯಿ ಕಾಯಿ ಕರ್ಪೂರ ಅರ್ಪಿಸಿ ತಮ್ಮ ಭಕ್ತಿ ಸಮರ್ಪಣೆ ಮಾಡಿದರು.