ಶಹಾಬಾದ: ಪುಸ್ತಕಗಳು ಮಾನವನ ಉತ್ತಮ ಸಂಗಾತಿಗಳಾಗಿದ್ದು, ಅದರ ಸದುಪಯೋಗಪಡಿಸಿಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿ ಹಾಗೂ ಯುವಜನರಲ್ಲಿ ಬರಬೇಕಿದೆ ಎಂದು ನಗರದ ಎಸ್.ಎಸ್.ಮರಗೋಳ ಕಾಲೇಜಿನ ಪ್ರಾಂಶುಪಾಲ ಪ್ರೋ. ಕೆ.ಬಿ.ಬಿಲ್ಲವ್ ಹೇಳಿದರು.
ಅವರು ಎಐಡಿವೈಒ ಸ್ಥಳೀಯ ಸಮಿತಿಯು ಹಮ್ಮಿಕೊಂಡಿದ್ದ ವಿಶೇಷ ಸಂಚಿಕೆಯಾದ ಮಹಿಳೆಯರ ಘನತೆ ಹಾಗೂ ಮಾನವ ಮೌಲ್ಯ ಉಳಿಸಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಇಂದಿನ ದಿನಮಾನಗಳಲ್ಲಿ ಒಳ್ಳೆಯ ಸಂಬಂಧಗಳು ಹಾಗೂ ಒಳ್ಳೆಯ ವಿಚಾರಗಳು ಮಾನವನಲ್ಲಿ ಕಾಣದೇ ಇರುವುದು ದುರದೃಷ್ಟಕರ ಸಂಗತಿ.ಎಲ್ಲಿ ನೋಡಿದರಲ್ಲಿ ಮೋಸ, ವಂಚನೆ, ಆಡಂಬರ ಜೀವನ, ಕೆಟ್ಟದಕ್ಕೆ ಪ್ರಚೋದನೆ ಮತ್ತು ಮೊಬೈಲ್ ಹಾಗೂ ಟಿವಿಗಳಲ್ಲಿ ಕಲುಷಿತ ವಿಚಾರ, ಅಶ್ಲೀಲ ಚಿತ್ರಗಳು ಸಮಾಜದಲ್ಲಿ ಅಶಾಂತಿ ಸೃಷ್ಠಿಸುತ್ತಿದೆ.ಇಂತಹದರ ಮಧ್ಯೆ ಒಳ್ಳೆಯ ಮೌಲ್ಯಗಳು ಸಿಗುವುದೇ ಪುಸ್ತಕಗಳಲ್ಲಿ.
ಆದ್ದರಿಂದ ವಿದ್ಯಾರ್ಥಿ ದೆಸೆಯಲ್ಲಿ ಆದಷ್ಟು ಒಳ್ಳೆಯ ಹಲವಾರು ಪುಸ್ತಕಗಳನ್ನು ಓದುವ ಹವ್ಯಾಸ ಮಾಡಿಕೊಂಡರೆ ಜೀವನದಲ್ಲಿ ಯಶಸ್ಸು ಕಾಣಬಹುದು.ಅಲ್ಲದೇ ಬದುಕಿನಲ್ಲಿ ಒಳ್ಳೆಯ ವ್ಯಕ್ತಿತ್ವ ನಿರ್ಮಾಣ ಮಾಡಿಕೊಳ್ಳಬಹುದು. ಮಹಿಳೆಯರ ಘನತೆ ಹಾಗೂ ಮಾನವ ಮೌಲ್ಯ ಉಳಿಸಿ ಪುಸ್ತಕದಲ್ಲಿ ಮಾಜಿ ಲೋಕಾಯುಕ್ತರಾದ ಸಂತೋμï ಹೆಗಡೆಯವರ ಭಾಷಣ ಹಾಗೂ ಮನೋವೈದ್ಯರಾದ ಡಾಕ್ಟರ್ ವಸಂತ್ ನಡಹಳ್ಳಿ ಭಾಷಣ ಹಾಗೂ ಸಂವಾದ ಕಾರ್ಯಕ್ರಮದ ವಿಷಯಗಳು ಬರಹ ರೂಪದಲ್ಲಿದ್ದು ಬಹಳ ಉತ್ತಮವಾದ ವಿಚಾರಗಳಿದ್ದು ವಿದ್ಯಾರ್ಥಿಗಳು ಓದಿ ತಿಳಿದುಕೊಳ್ಳಬೇಕೆಂದರು.
ಎಐಡಿವೈಓ ಸಂಘಟನೆಯ ಜಿಲ್ಲಾ ಅಧ್ಯಕ್ಷ ಜಗನ್ನಾಥ.ಎಸ್.ಹೆಚ್ ಮಾತನಾಡಿ, ಸಮಾಜದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು ಹಾಗೂ ಮಾನವೀಯ ಮೌಲ್ಯಗಳು ಕುಸಿಯುತ್ತಿರುವುದು ಬಹಳ ನೋವಿನ ವಿಷಯ. ಸಮಾಜದಲ್ಲಿ ಆಧುನಿಕ ತಂತ್ರಜ್ಞಾನ ಬೆಳದಂತೆ ಬಹಳ ಸುಲಭವಾಗಿ ಅಸಭ್ಯವಾದ ಸಿನಿಮಾ ಸಾಹಿತ್ಯ ಯುವಜನರಿಗೆ ಸಿಗುತ್ತದೆ. ಇಂಥವೆಲ್ಲ ಸರ್ಕಾರ ನಿμÉೀಧಿಸಬೇಕೆಂದರು. ಮಹಾನ್ ವ್ಯಕ್ತಿಗಳಾದ ಭಗತ್ ಸಿಂಗ್, ನೇತಾಜಿ, ಮೇಡಂ ಮೇರಿ ಕ್ಯೂರಿ, ಆಲ್ಬರ್ಟ್ ಐನ್ಸ್ಟೇನ್ ಇವರ ವಿಚಾರಗಳು ವಿದ್ಯಾರ್ಥಿ ಯುವಜನರು ತಿಳಿದುಕೊಂಡು ಅನ್ಯಾಯದ ವಿರುದ್ಧ ಹೋರಾಡಬೇಕೆಂದರು.
ವೇದಿಕೆ ಮೇಲೆ ಪೆÇ್ರ. ಸುರೇಖಾ ನಾಟೇಕರ್, ಉಪನ್ಯಾಸಕರಾದ ರೇಖಾ ಪಾಟೀಲ್, ಎಐಡಿವೈಓ ಸಂಘಟನೆಯ ಕಾರ್ಯದರ್ಶಿಗಳಾದ ರಮೇಶ್ ದೇವಕರ್ ಉಪಸ್ಥಿತರಿದ್ದರು, ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶಿವಕುಮಾರ ಕುಸಾಳೆ,ಸಂಗಮೇಶ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.