ಕಲಬುರಗಿ: ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶಕುಮಾರ ಇದೇ 30ರಂದು ಕಲಬುರಗಿಗೆ ಆಗಮಿಸಿ ಡಿಡಿಪಿಐ, ಜಿಲ್ಲೆಯ ಎಲ್ಲ ಬಿಇಒ ಗಳ ಜೊತೆ ಇಡೀ ದಿನ ಕಾರ್ಯಾಗಾರ ನಡೆಸಲಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.
ಹೈಕ ಭಾಗದ ವಿದ್ಯಾರ್ಥಿಗಳಿಗೆ ಓದಿನ ಬಗ್ಗೆ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದಕ್ಕಾಗಿ ಈ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಸ್ವತಃ ಸುರೇಶ ಕುಮಾರ ಅವರೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಎಸ್. ಎಸ್. ಎಲ್.ಸಿ ಪರೀಕ್ಷಾ ಫಲಿತಾಂಶದಲ್ಲಿ ತುಂಬಾ ಹಿಂದುಳಿದ ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಸುಧಾರಣೆ ಹಾಗೂ ಆತ್ಮ ವಿಶ್ವಾಸ ತುಂಬುವುದಕ್ಕಾಗಿ ಬಿಇಒ ಗಳ ಕಾರ್ಯಾಗಾರ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇಲ್ಲಿನ ಯುವ ಬರಹಗಾರ ಕೆ. ವಿಶ್ವನಾಥ ಮರತೂರ ಅವರು ಪತ್ರಿಕೆಯೊಂದರಲ್ಲಿ ಬರೆದ ಲೇಖನಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವರು, ಈ ಹಿಂದೆ ಆಳಂದ ದ ವಿದ್ಯಾರ್ಥಿಯೊಬ್ಬ ಗುರುರಾಜ ಕರ್ಜಗಿಯವರಿಗೆ, ಸರ್ ನಮ್ಮ ಜಿಲ್ಲೆಯವರು ನಿಜಕ್ಕೂ ದಡ್ಡರಾ? ಎಂದು ಪ್ರಶ್ನೆ ಕೇಳಿದ್ದನಂತೆ! ಆಗಿನಿಂದ ಈ ವಿಷಯ ನನ್ನನ್ನು ಚುಚ್ಚುತ್ತಿತ್ತು. ಹೀಗಾಗಿ ಈ ಕಾರ್ಯಕ್ಕೆ ಕೈ ಹಾಕಿದ್ದೇನೆ ಎಂದು ಅವರು ತಿಳಿಸಿದ್ದಾರೆ.