ಕಲಬುರಗಿ: ಮಾದಿಗ ಸಮಾಜದ ಹಿರಿಯ ನಾಯಕ, ಹೋರಾಟಗಾರ ಮಾಪ್ಪಣ್ಣಾ ಹದನೂರ್ ನಿಧನಕ್ಕೆ ಮಾದಿಗ ಸಮಾಜದ ಮುಖಂಡರು ಸಂತಾಪ ಸೂಚಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ವಾಡಿ ಮಾದಿಗ ಸಮಾಜದ ಮುಖಂಡ ಶರಣು ಮರತೂರ ಅವರು, ಮಾಪಣ್ಣಾ ಹದನೂರ್ ಅವರು, ಎಮ್ ಆರ್ ಹೆಚ್ ಎಸ್ ಸಂಘಟನೆ ಸ್ಥಾಪನೆ ಮಾಡಿ ರಾಜ್ಯವ್ಯಾಪ್ತಿ ಸಂಚರಿಸಿ ಸಮಾಜವನ್ನು ಜಾಗೃತ ಮಾಡಿದವರು, ಒಳಮೀಸಲಾತಿ ವಿಚಾರದಲ್ಲಿ ಹೋರಾಟ ಆರಂಭಿಸಿದ ಮೊದಲಿಗರಲ್ಲಿ ಮಾಪಣ್ಣಾ ಹದನೂರ್ ಅವರು ಒಬ್ಬರು, ಅವರ ನಿಧನ ಮಾದಿಗ ಸಮಾಜಕ್ಕೆ ತುಂಬಲಾಗದ ನಷ್ಟ. ದೇವರ ಅವರ ಕುಟುಂಬಕ್ಕೆ ಹಾಗೂ ಅಭಿಮಾನಿ ಬಳಗಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಂತಾಪ ವ್ಯಕ್ತಪಡಿಸಿದರು.