ಕಲಬುರಗಿ: ಕಲಬುರಗಿ ನಗರದಲ್ಲಿ ನೆಲೆಸಿರುವ ಸುರಪುರ ತಾಲೂಕಿನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ೫ನೇ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಡಿ.೨೨ರಂದು ಬೆಳಿಗ್ಗೆ ೧೦.೩೦ಕ್ಕೆ ಹಳೆ ಜೇವರ್ಗಿ ರಸ್ತೆಯ ವೆಂಕಟಗಿರಿ ಗಾರ್ಡ್ನ್ ಹೋಟೇಲಿನಲ್ಲಿ ಕರೆಯಲಾಗಿದೆ.
ಸಭೆಗೆ ಸರ್ವ ಸದಸ್ಯರು ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಸಂಘದ ಅಧ್ಯಕ್ಷ ಬಿ.ಪಿ.ಹೂಗಾರ, ಕಾರ್ಯದರ್ಶಿ ವಿ.ಡಿ.ಪಾಟೀಲ್ ಅವರು ಮನವಿ ಮಾಡಿದ್ದಾರೆ.