ರಾಯಚೂರು ವಿದ್ಯಾರ್ಥಿನಿ ಮಧು ಸಾವಿಗೆ ನ್ಯಾಯಕ್ಕಾಗಿ ಕಿಡಗೇಡಿಗಳಿಂದ ಕಲ್ಲು ತೂರಾಟ

0
217

ರಾಯಚೂರು: ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ ಅನುಮಾನಸ್ಪದ ಸಾವಿನ  ಪ್ರಕರಣದ ಕುರಿತು ನ್ಯಾಯಕ್ಕೆ ಆಗ್ರಹಸಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕೆಂದು ರಾಜ್ಯದ್ಯಾಂತ ಹೋರಾಟಗಳು ಚುರುಕುಗೊಂಡಿದೆ.

ವಿದ್ಯಾರ್ಥಿನಿ ಮಧು ಪತ್ತಾರ ಸಾವಿಗೆ ರಾಜ್ಯವನ್ನೆ ಬೆಚ್ಚಿ ಬಿಳಿಸಿದ್ದು, ಕೃತ್ಯದಲ್ಲಿ ಭಾಗಿಯಾದ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು, ಎಸ್.ಎಫ್.ಐ, ವಿಶ್ವಕರ್ಮ ಸಮಾಜ, ಪ್ರಗತಿಪರ ಸಂಘಟನೆಗಳು ಹಾಗೂ ವಿವಿಧ ವಿದ್ಯಾರ್ಥಿಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾರೆ. ವಿವಿಧ ಸಂಘಟನೆಗಳು ಸೇರಿ ಸಾವಿರಾರು  ಸಂಖ್ಯೆಯಲ್ಲಿ ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಧು ಸಾವಿಗೆ ನ್ಯಾಯಕ್ಕಾಗಿ ಹೋರಟ ನಡೆಸಿದ್ದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಕೆಲ ಕಿಡಗೇಡಿಗಳ ಕಾರಣದಿಂದ ಹೋರಾಟದಲ್ಲಿ ತಾಳ್ಮೆ ಕಳೆದುಕೊಂಡು ಹಿಂಸಾಚಾರದ ರೂಪ ಪಡೆದುಕೊಂಡಿತ್ತು. ಒಂದೆಡೆ ಮಧು ಸಾವಿಗೆ ನ್ಯಾಯಕ್ಕಾಗಿ ಪ್ರತಿಭಟನೆ ನಡೆದರೆ, ಇನ್ನೊಂದೆಡೆ ಜಿಲ್ಲಾಧಿಕಾರಿ ಕಚೇರಿ ಒಳಗಡೆ ಹೋರಾಟಗಾರರ ನುಗ್ಗಲು ಯತ್ನಿಸಿದ್ದರು.  ಹೋರಾಟಗಾರರನ್ನು ತಡೆಯಲು ಯತ್ನಿಸಿದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.  ಇದರಿಂದ ಕೆರಳಿದ ಕೆಲ ಯುವಕರು ಏಕಾಏಕಿ ಕಲ್ಲು , ಚಪ್ಪಲಿ, ವಾಟರ್ ಬಾಟಲ್ ಏಸೆಗಿದ್ದರಿಂದ ಹೋರಟ ವಿಕೋಪಕ್ಕೆ ತಿರುಗಿತ್ತು. ಪ್ರಘಟನೆಯಲ್ಲಿ ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಗುರು ತಲೆಗೆ ಕಲ್ಲು ಬಡಿದು ಗಾಯಗೊಂಡಿರುವ ಘಟನೆಯು ಸಂಭವಿಸಿತ್ತು. ಮತ್ತೊಂದೆಡೆ ವಿಶ್ವಕರ್ಮ ಸಮಸಜದ ಮುಖಂಡ ಮಾರುತಿ ಬಡಿಗೇರ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆಯಿತು.

ಪ್ರತಿಭಟನಾ ಮೇರವಣಿಗೆಯಲ್ಲಿ ವಿಶ್ವಕರ್ಮ ಸಮಾಜದ ಸ್ವಾಮೀಜಿ, ಚಿತ್ರ ನಟ ಭುವನ್, ನಟಿ ಹರ್ಷಿಕಾ ಪೋಣಚ್ಚಾ ಭಾಗಿಯಾಗಿ ಹೋರಾಟಕ್ಕೆ ಬೆಂಬಲ ನೀಡಿ ಮಧು ಸಾವಿಗೆ ನ್ಯಾಯಕ್ಕಾಗಿ ಒತ್ತಾಯಿಸಿದ್ದರು.  ರ್ಯಾಲಿಯಲ್ಲಿ ವಿದ್ಯಾರ್ಥಿನಿ ಮಧು ಪತ್ತಾರ ಪೋಷಕರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here