ಕಲಬುರಗಿ: ನಗರದ ಹೊರ ವಲಯದ ನೃಪತುಂಗ ಕಾಲನಿ ಹಾಗೂ ಶಹಾಬಾದ್ ರಸ್ತೆಯಲ್ಲಿ ಇಂದು ಅದ್ಯಾಕೋ ಸರಣಿ ಅಪಘಾತ ಸಂಭವಿಸಿವೆ.
ಬೆಳಗ್ಗೆ ದೇವನ ತೆಗನೂರ ಬಳಿ ಮಗುವಿನ ಮೇಲೆ ಕ್ರೂಸರ್ ಹಾದು ಮಗು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಮಗುವಿನ ತಲೆಯ ಮೇಲಿಂದ ಕ್ರೂಸರ್ ಹಾದು ಹೋಗಿದರಿಂದ ಸ್ಥಳದಲ್ಲೆ ಮಗು ಮೃತ ಪಟ್ಟಿದಾನೆ. ರಸ್ತೆಯ ಮೇಲೆ ಮಗುವಿನ ಮೃತ ದೇಹವನ್ನು ನೋಡಿ ತಾಯಿಯ ರೋಧನ ಮುಗಿಲ್ಲೂ ಮುಟ್ಟಿತ್ತು. ದೃಶ್ಯ ಕಂಡು ಸಾರ್ವಜನಿಕರ ಮನಕಲಕೂವಂತಿತ್ತು.
ಮದ್ಯಾಹ್ನದ ವೇಳೆ ಶೆಟ್ಟಿ ಕಾಲೇಜು ಸಮೀಪ ಲಾರಿ ಮತ್ತು ಬಸ್ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಅದೇರೀತಿಯಾಗಿ ಸಂಜೆ 6.30 ರ ವೇಳೆಯಲ್ಲಿ ಎನ್ ಇ ಕೆ ಎಸ್ ಆರ್ ಟಿಸಿ ಸುಹಾಸ್ ಬಸ್ ಶಹಾಬಾದ ಮಾರ್ಗವಾಗಿ ತೆರಳುವ ವೇಳೆ ನೃಪತುಂಗ ಕಾಲನಿ ಬಳಿ ದ್ವಿಚಕ್ರ ಸವಾರನ ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ತೀವ್ರವಾಗಿ ಗಾಯಗೊಂಡಿದ್ದ ದ್ವಿಚಕ್ರ ವಾಹನ ಸವಾರನನ್ನು ಸ್ಥಳಕ್ಕೆ ಆಗಮಿಸಿದ ಸಂಚಾರಿ ಪೊಲೀಸರು ಅಂಬ್ಯುಲೆನ್ಸ್ ನಲ್ಲಿ ಕೊಂಡೊಯ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.