ಕೇಂದ್ರ ರಾಜ್ಯ ಸರ್ಕಾರಗಳ ವಿರುದ್ದ ಯುವ ಕಾಂಗ್ರೆಸ್‌ನಿಂದ ರಾಜಭವನ ಮುತ್ತಿಗೆ ಜಿಲ್ಲಾ ಯುವಕರು ಭಾಗಿ; ರಜಾಕ್

0
48

ಯಾದಗಿರಿ: ನಾಡಿನಲ್ಲಿ ನೆರೆ ಹಾವಳಿಗೆ ತುತ್ತಾದ ಜನರಿಗೆ ೭೫ ದಿನಗಳಾದರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನೆರೆ ಪರಿಹಾರ ನೀಡದ್ದನ್ನು ಖಂಡಿಸಿ ಎಐಸಿಸಿ ಯುವ ಘಟಕದ ಅದ್ಯಕ್ಷರ ನೇತೃತ್ವದಲ್ಲಿ ರಾಜಭವನಕ್ಕೆ ಮುತ್ತಿಗೆ ಕಾರ್ಯಕ್ರಮ ಬೆಂಗಳೂರಲ್ಲಿ ಬುಧವಾರ ಜರುಗಿತು.

ಯುವ ಅದ್ಯಕ್ಷ ಪಿ.ವಿ. ಶ್ರೀನಿವಾಸ ಹಾಗೂ ರಾಜ್ಯ ಯುವ ಕಾಂಗೈ ಅಧ್ಯಕ್ಷ ಬಸನಗೌಡ ಬಾದರ್ಲಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಬಗ್ಗೆ ನಿಷ್ಕಾಳಜಿ ವಹಿಸಿವೆ. ನೆರೆ ಬಂದು ೭೫ ದಿನಗಳಾದರೂ ಪರಿಹಾರ ನಿಡದೇ ಸತಾಯಿಸುತ್ತಿರುವುದು ತೀರ ನಾಚಿಕೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

Contact Your\'s Advertisement; 9902492681

ಪ್ರತಿಭಟನೆಯಲ್ಲಿ ಯಾದಗಿರಿ ಜಿಲ್ಲಾ ಯುವ ಕಾಂಗ್ರೆಸ್ ಅದ್ಯಕ್ಷ ಅಬ್ದುಲ್ ರಜಾಕ್ ವಕೀಲರು, ಮುಖಂಡರಾದ ಶೇಖ ಸಲೆಮಾನ್ ಸುರಪೂರ, ಮೌನೇಶ ನಾಟೇಕರ್, ಇರ್ಫಾನ್ ಬಾದಲ್, ತಲಕ್ ಚಾಂದ್, ರಾಘವೇಂದ್ರ ಸಾಹುಕಾರ್, ಸುಲೇಮಾನ್ ಗಾಜರಕೋಟ, ಸಿದ್ದು ವಿಜಯಕುಮಾರ, ಕೃಷ್ಣ, ಪ್ರಭಾಕರ್ ಯರಗೋಳ, ಮುಜಾಹಿದ, ಸಲಿಂ ಪಟೇಲ್ ಮಾಧ್ವರ, ರಿಯಾಜ್ ಪಟೇಲ್ ವರ್ಕನಳ್ಳಿ, ಕೃಷ್ಣ ದಾಸನಕೇರಿ, ಮಂಜು ದಾಸನಕೇರಿ, ಸೋಮಶೇಖರ ಪಾಲ್ಗೊಂಡಿದ್ದರು ಎಂದು ರಜಾಕ್ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here