ಕೇಂದ್ರ ಸರಕಾರದ ವಿರುದ್ಧ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಫೇಸ್ ಬುಕ್ ಖಾತೆಯಲ್ಲಿ ಟೀಕೆ

0
63

ಕಲಬುರಗಿ: ಕೇಂದ್ರ ಸರಕಾರ ರಾಜ್ಯದಿಂದ ತೆರಿಗೆ ವಸೂಲಿ ಮಾಡುವುದಕ್ಕೆ ಮಾತ್ರ ಸೀಮಿತವಾಗಿದೆ ಎಂದು ಶಾಸಕ ಶ್ರೀ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ರಾಜ್ಯ ತೀವ್ರ ನೆರೆ ಹಾಗೂ ಬರದಿಂದ ತತ್ತರಿಸಿದರೂ ಕೂಡಾ ಕೇಂದ್ರ ಅನುದಾನ ನೀಡುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದ್ದು ಅದು ರಾಜ್ಯದಿಂದ ತೆರಿಗೆ ಸಂಗ್ರಹಿಸಲಷ್ಟೆ ಸೀಮಿತಗೊಂಡಿದೆ ಎಂದಿದ್ದಾರೆ.

Contact Your\'s Advertisement; 9902492681

(ಈ ಕುರಿತು ಅವರ ಸಂಪೂರ್ಣ ಬರಹದ ಲಿಂಕ್ ಮೇಲಿದೆ.)

ಕೇಂದ್ರ ಸರ್ಕಾರದ ರಾಜ್ಯದ ಮೇಲಿನ ಮಲತಾಯಿ ಧೋರಣೆ ದಿನಗಳೆದಂತೆ ಹೆಚ್ಚಿಸುತ್ತಲೇ ಇದ್ದು ಕರ್ನಾಟಕ ಕೇವಲ ತೆರಿಗೆ ವಸೂಲಾತಿಗಷ್ಟೇ…

Gepostet von Priyank Kharge am Donnerstag, 24. Oktober 2019

ಕೇಂದ್ರದಿಂದಾಗಿರುವ ಮೋಸವನ್ನು ಮರೆಮಾಚಲು ಈಗ ರಾಜ್ಯವೇ ಹೈಕೋರ್ಟ್ ಮುಂದೆ ತನ್ನ ಬೊಕ್ಕಸದಿಂದ 2ನೇ ಜೊತೆ ಸಮವಸ್ತ್ರವನ್ನು ಮಕ್ಕಳಿಗೆ ನೀಡುವುದಾಗಿ ತಿಳಿಸಿದೆ.

ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯಡಿ ನೀಡಬೇಕಿದ್ದ ಸಾವಿರಾರು ಕೋಟಿ ರೂಪಾಯಿ ಹಣವನ್ನು 2 ವರ್ಷಗಳಿಂದ ಈವರೆಗೂ ನೀಡಿಲ್ಲ. ಜನರಿಗೆ ಸಹಾಯವಾಗುವಂತೆ ಈ ಹಣವನ್ನು ಹಿಂದಿನ ನಮ್ಮ ರಾಜ್ಯ ಸರ್ಕಾರವೇ ಬೊಕ್ಕಸದಿಂದ ಭರಿಸಿತ್ತು.

100 ವರ್ಷಗಳಲ್ಲೇ ಕಾಣದ ಭೀಕರ ನೆರೆ,
ರಾಜ್ಯವನ್ನು ಈ ಬಾರಿ ಸಂಕಷ್ಟಕ್ಕೆ ದೂಡಿದೆ. ರಾಜ್ಯಕ್ಕೆ ಸಾವಿರಾರು ಕೋಟಿ ನಷ್ಟವಾಗಿದ್ದರೂ ಈ ಕುರಿತು ಕೇಂದ್ರಕ್ಕೆ ನಮ್ಮ ಸಂಕಷ್ಟ ಕಾಣಲೇ ಇಲ್ಲ. ಕೇಂದ್ರದ ಮೋದಿ ಸರ್ಕಾರ ಈವರೆಗೂ ಅಗತ್ಯ ನೆರೆ ಪರಿಹಾರ ಅನುದಾನ ಒದಗಿಸಲು ಹಿಂದೆ ಮುಂದೆ ನೋಡುತ್ತಿದೆ.

ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಸಂಕಷ್ಟಕ್ಕೆ ಜೊತೆಯಾಗಿ ನಿಂತು ಪರಿಹಾರ ನೀಡಬೇಕಿದ್ದ ಕೇಂದ್ರ ಸರ್ಕಾರ ಕೈಕಟ್ಟಿ ಕುಳಿತಿದೆ. ತನ್ನ ಹಾಗೂ ರಾಜ್ಯಗಳ ನಡುವೆ ಸೌಹಾರ್ದಯುತ ಅನುಬಂಧ ಕಾಪಾಡಿಕೊಳ್ಳುವುದು ಕೇಂದ್ರದ ಸಾಂವಿಧಾನಿಕ ಜವಾಬ್ದಾರಿ. ಆದರೆ ಕರ್ನಾಟಕ & ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಈ ಸಂಬಂಧ ಮುರಿದು ಬಿದ್ದಿದೆ.

ಕೇಂದ್ರದಿಂದ ನೆರವನ್ನೇ ನೀಡದೇ, ರಾಷ್ಟ್ರೀಯ ಯೋಜನೆಗಳಿಗೆ ತನ್ನ ಪಾಲನ್ನು ಕಟ್ಟದೇ ಸತಾಯಿಸುವುದು ಒಕ್ಕೂಟ ವ್ಯವಸ್ಥೆಯಾ? ಎಲ್ಲಿಯವರೆಗೂ ನಾವು ನಮ್ಮ ಪಾಲಿನ ತೆರಿಗೆ ನೀಡುತ್ತಾ ಕೇಂದ್ರದಿಂದ ನಿರ್ಲಕ್ಷತೆಗೆ ಒಳಗಾಗುತ್ತಿರಬೇಕು? ಕೇಂದ್ರ ಸರ್ಕಾರ ರಾಜ್ಯಕ್ಕೆ ತನ್ನ ಪಾಲಿನ ಸಂಪನ್ಮೂಲ ಒದಗಿಸಲು ತಿರಸ್ಕಾರ ಮಾಡುತ್ತಿರುವುದನ್ನು ನಾವು ನೋಡುತ್ತಾ ಕೂರಬೇಕು?

Is this Sabka Saath, Sabka Vikas & Sabka Vishwaas???

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here